rtgh

ರೆಡಿ ಮಸಾಲಾ ಉಪಯೋಗಿಸುವವರಿಗೆ ಬಿಗ್ ಶಾಕ್! 111 ಕಂಪನಿಗಳ ಪರವಾನಗಿ ರದ್ದು

Cancellation of licenses of masala companies
Share

ಹಲೋ ಸ್ನೇಹಿತರೆ, ಭಾರತೀಯ ರೆಡಿ ಮಸಾಲೆಗಳ ಮೇಲಿರುವ ವಿವಾದಗಳ ಬೆನ್ನಲ್ಲೇ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಕಳೆದ ತಿಂಗಳಿನಿಂದ ಬರೋಬ್ಬರಿ 111 ಮಸಾಲೆ ತಯಾರಕರ ಉತ್ಪಾದನಾ ಪರವಾನಗಿಯನ್ನು ರದ್ದುಗೊಳಿಸಿದ್ದು, ಉತ್ಪಾದನೆಯನ್ನು ನಿಲ್ಲಿಸುವಂತೆ ಕಂಪನಿಗಳಿಗೆ ಆದೇಶ ಮಾಡಿದೆ.

Cancellation of licenses of masala companies

Contents

111 ಮಸಾಲೆ ಕಂಪನಿಗಳ ಪರವಾನಗಿ ರದ್ದು

ಏಪ್ರಿಲ್ ತಿಂಗಳನಲ್ಲಿ, ಸಿಂಗಾಪುರ್ ಮತ್ತು ಹಾಂಗ್ ಕಾಂಗ್ ನಲ್ಲಿಯ ಜನಪ್ರಿಯ ಭಾರತೀಯ ಮಸಾಲೆ ಬ್ರ್ಯಾಂಡ್‌ಗಳಾದ ಎಂಡಿಎಚ್ ಮತ್ತು ಎವರೆಸ್ಟ್ ಮಸಾಲೆಗಳಲ್ಲಿ ಕಾರ್ಸಿನೋಜೆನಿಕ್ ಕೀಟನಾಶಕ ಎಥಿಲೀನ್ ಆಕ್ಸೈಡ್ ಇದೆ ಎಂದು ಸಾಬೀತುಪಡಿಸಿ ಈ ಉತ್ಪನ್ನಗಳನ್ನು ತಮ್ಮ ದೇಶದಲ್ಲಿ ಬ್ಯಾನ್‌ ಮಾಡಿದ್ದವು.

ಈ ವಿವಾದದ ಬೆನ್ನಲ್ಲೇ FSSAI ಸುರಕ್ಷತಾ ತಪಾಸಣೆಗಾಗಿ ವಿವಿಧ ನಗರಗಳಲ್ಲಿ ಮಸಾಲೆಗಳ ಮಾದರಿಗಳನ್ನು ಸಂಗ್ರಹಿಸಲು ಪ್ರಾರಂಭಿಸಿತು. ಈ ತಪಾಸಣೆ ಬಳಿಕ ಕಳೆದ ಒಂದು ತಿಂಗಳಿನಲ್ಲಿ 111 ಮಸಾಲೆ ಉತ್ಪಾದಕರ ಉತ್ಪಾದನಾ ಲೈಸೆನ್ಸ್‌ ಅನ್ನು ರದ್ದುಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇದಲ್ಲದೇ FSSAI ರಾಷ್ಟ್ರದ್ಯಂತ 4,000 ಮಾದರಿಗಳನ್ನು ಪರೀಕ್ಷಿಸಲು ಮುಂದಾಗಿದ್ದು, ಮತ್ತಷ್ಟು ಕಂಪನಿಗಳ ಉತ್ಪಾದನಾ ಪರವಾನಗಿ ರದ್ದಾಗುವ ಸಾಧ್ಯತೆ ಇದೆ.

ಇದನ್ನು ಓದಿ: ವಿದ್ಯಾರ್ಥಿಗಳಿಗೆ ₹15000 ಸ್ಕಾಲರ್ಶಿಪ್ ಜೊತೆಗೆ ಉಚಿತ ಹಾಸ್ಟೆಲ್! ಈಗಲೇ ಅಪ್ಲೇ ಮಾಡಿ

ಗುಣಮಟ್ಟದ ಕೊರತೆ

ಎಫ್‌ಎಸ್‌ಎಸ್‌ಎಐ ಸಂಸ್ಥೆ 2,200 ಮಾದರಿಗಳನ್ನು ಈಗಾಗಲೇ ಪರೀಕ್ಷಿಸಿದ್ದು, ಅವುಗಳಲ್ಲಿ, 111 ಮಸಾಲೆ ತಯಾರಕರಿಗೆ ಉತ್ಪನ್ನದ ಮೂಲ ಗುಣಮಟ್ಟವನ್ನು ಹೊಂದಿಸಲು ಸಾಧ್ಯವಾಗಿಲ್ಲ. ಅಂತಹ ಮಸಾಲೆ ತಯಾರಕರ ಪರವಾನಗಿಯನ್ನು ತಕ್ಷಣದಿಂದ ರದ್ದುಗೊಳಿಸಿ ಮತ್ತು ಉತ್ಪಾದನೆಯನ್ನು ನಿಲ್ಲಿಸಲಾಗಿದೆ ಎಂದು ವರದಿಗಳು ಹೇಳಿವೆ.

ಎಫ್‌ಎಸ್‌ಎಸ್‌ಎಐ ಅಡಿಯಲ್ಲಿ ಪರೀಕ್ಷಾ ಕೇಂದ್ರಗಳ ಸಂಖ್ಯೆ ಕಡಿಮೆಯಲ್ಲಿವೆ ಮತ್ತು ಆದ್ದರಿಂದ ಪರವಾನಗಿಗಳನ್ನು ರದ್ದುಗೊಳಿಸಬೇಕಾದ ಕಂಪನಿಗಳ ಪಟ್ಟಿಯನ್ನು ಬಿಡುಗಡೆ ಇನ್ನೂ ಸ್ವಲ್ಪ ಟೈಮ್‌ ಬೇಕು ಎಂದು FSSAI ಹೇಳಿದೆ.

ಇತರೆ ವಿಷಯಗಳು:

ಇನ್ಮುಂದೆ ಈ ಯೋಜನೆಯಡಿ ಸಿಗಲಿದೆ 10 ಸಾವಿರ ರೂ. ಪಿಂಚಣಿ!

LKG, UKG, 1ನೇ ತರಗತಿ ದಾಖಲಾತಿಗೆ ಹೊಸ ರೂಲ್ಸ್‌ ಜಾರಿ!


Share

Leave a Reply

Your email address will not be published. Required fields are marked *