ಹಲೋ ಸ್ನೇಹಿತರೇ, ಹೈನುಗಾರಿಕೆಯಲ್ಲಿ ಮಾಡುತ್ತಿರುವ ರೈತರಿಗೆ ಮೇವು ಕತ್ತರಿಸುವ ಯಂತ್ರವನ್ನು ಖರೀದಿಸಲು ಅರ್ಥಿಕವಾಗಿ ಸಹಾಯಧನವನ್ನು ನೀಡುವ ನಿಟ್ಟಿನಲ್ಲಿ ಶೇ 50% ಸಬ್ಸಿಡಿಯಲ್ಲಿ ಮೇವು ಕತ್ತರಿಸುವ ಯಂತ್ರ ವಿತರಣೆಗೆ ಪಶುಪಾಲನಾ ಇಲಾಖೆಯ ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರಯೋಜನವನ್ನು ಪಡೆಯುವುದು ಹೇಗೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ಈ ಕುರಿತು ಪ್ರಕಟಣೆ ವಿವರ ಹೀಗಿದೆ ಪಶುಪಾಲನಾ & ಪಶುವೈದ್ಯ ಸೇವಾ ಇಲಾಖೆ ವತಿಯಿಂದ 2023-24 ನೇ ಸಾಲಿನ ರಾಷ್ಠಿಯ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ಮೇವು ಕತ್ತರಿಸುವ ಯಂತ್ರಗಳನ್ನು ವಿತರಿಸಲು ಅರ್ಹ ಫಲಾನುಭವಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈ ಯೋಜನೆ ಅಡಿಯಲ್ಲಿ ಆಯ್ಕೆಯಾಗಿರುವ ಪ್ರತಿ ಫಲಾನುಭವಿಗೆ 2HP ಮೇವು ಕತ್ತರಿಸುವ ಯಂತ್ರಗಳನ್ನು ವಿತರಣೆ ಮಾಡಲಾಗುತ್ತದೆ. ಘಟಕದ ವೆಚ್ಚ ರೂ 33,000 ಇದ್ದು ಶೇ.50 ರ ಸಹಾಯಧನ ರೂ 16,500 & ಶೇ.50% ಫಲಾನುಭವಿಗಳಂತೆ ರೂ 16,500 ಕ್ಕೆ ನೀಡುವಂತೆ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಈ ಯೋಜನೆ ಅಡಿಯಲ್ಲಿ ಪ್ರತಿ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ನಿಗದಿತ ಗುರಿಗಳನ್ನು ನಿಗದಿ ಮಾಡಲಾಗಿದೆ.
ಅರ್ಜಿ ನಮೂನೆಯನ್ನು ನಿಮ್ಮ ಹತ್ತಿರದ ಪಶುವೈದ್ಯ ಆಸ್ಪತ್ರೆಯಿಂದ ಪಡೆದುಕೊಂಡು ಭರ್ತಿ ಮಾಡಿ ಆಧಾರ ಕಾರ್ಡ್, ಸ್ಥಳಿಯ ಪಶುವೈದ್ಯರಿಂದ ಪಡೆದಿರುವ ಜಾನುವಾರು ದೃಡಿಕರಣ ಪತ್ರ ಹಾಗೂ ಪಡಿತರ ಚೀಟಿ & ಜಾತಿ ಪ್ರಮಾಣ (ಪ.ಜಾ & ಪ.ಪಂ ಫಲಾನುಭವಿಗಳಿಗೆ ಮಾತ್ರ) ಪತ್ರಗಳ ನಕಲು ಪ್ರತಿಗಳೊಂದಿಗೆ ತಾಲೂಕಿನ ಪಶು ಆಸ್ಪತ್ರೆಯಲ್ಲಿ ಅರ್ಜಿಯನ್ನು ಸಲ್ಲಿಸಲು ಕೋರಲಾಗಿದೆ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಇರುವುದರಿಂದ ಈ ಯಂತ್ರದ ಅಗತ್ಯವಿದ್ದವರು ಅಗತ್ಯ ದಾಖಲೆಗಳ ಸಮೇತ ನಿಮ್ಮ ತಾಲ್ಲೂಕಿನ ಪಶುವೈದ್ಯ ಆಸ್ಪತ್ರೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಲು ಕೋರಲಾಗಿದೆ.
ಪಶುಪಾಲನಾ & ಪಶುವೈದ್ಯ ಸೇವಾ ಇಲಾಖೆ ಜಾಲತಾಣದ ವಿಳಾಸ: https://ahvs.karnataka.gov.in/
ಇತರೆ ವಿಷಯಗಳು
ಇದೀಗ ಅರ್ಹ ಮಹಿಳೆಯರಿಗೆ ಸರ್ಕಾರದಿಂದ ಧನಸಹಾಯ!! ಪ್ರತಿ ತಿಂಗಳು 1,000 ಪಡೆಯಲು ಹೀಗೆ ಮಾಡಿ
ರೈಲಿನಲ್ಲಿ ದಿನನಿತ್ಯ ಪ್ರಯಾಣಿಸೋರಿಗೆ ನೆಮ್ಮದಿಯ ಸುದ್ದಿ.! ಕನಿಷ್ಠ ಪ್ರಯಾಣ ದರದಲ್ಲಿ ಭಾರಿ ಇಳಿಕೆ