ಹಲೋ ಸ್ನೇಹಿತರೇ, ದಿನನಿತ್ಯ ರೈಲಿನಲ್ಲಿ ಓಡಾಟ ಮಾಡುವ ಪ್ರಯಾಣಿಕರಿಗೆ ರೈಲ್ವೇ ಮಂಡಳಿ ಹೊಸ ನಿರ್ಧಾರವನ್ನು ಕೈಗೊಂಡಿದೆ. ಏನದು ಹೊಸ ನಿರ್ಧಾರ ಅದರಿಂದ ಪ್ರಯಾಣಿಕರಿಗೆ ಏನು ಲಾಭ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ಪ್ರಯಾಣಿಕರ ದಿನನಿತ್ಯದ ಕನಿಷ್ಠ ಪ್ರಯಾಣದ ದರ 30 ರೂ. ಆಗಿತ್ತು. ಪ್ರಯಾಣಿಕರಿಗೆ ಪ್ರಯಾಣದ ವೇಳೆ ಉತ್ತಮ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ರೈಲ್ವೆ ಸಚಿವಾಲಯ ಕಳೆದ ಕೆಲವು ವರ್ಷದಲ್ಲಿ ಮೂಲಭೂತ ಸೌಕರ್ಯಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿದೆ. ಇದರ ಜೊತೆಗೆ ಪ್ರಯಾಣಿಕರಿಗೆ ಹಲವು ಹೊಸ ಸೌಕರ್ಯಗಳನ್ನು ಕೂಡ ಒದಗಿಸಲಾಗುತ್ತಿದೆ.
ರೈಲ್ವೇ ಬೋರ್ಡ್ ಇದೀಗ ರೈಲು ಪ್ರಯಾಣ ದರದಲ್ಲಿ ಭಾರಿ ಇಳಿಕೆ ಮಾಡುವುದರ ಮೂಲಕ ದಿನನಿತ್ಯದ ಪ್ರಯಾಣಿಕರಿಗೆ ಬಿಗ್ ರಿಲೀಫ್ ಕೊಟ್ಟಿದೆ. ಮಂಡಳಿಯು ದಿನನಿತ್ಯ ಪ್ರಯಾಣಿಸುವ ಪ್ರಯಾಣಿಕರ ಕನಿಷ್ಟ ರೈಲು ಬೆಲೆಯನ್ನು ಮೂರನೇ ಒಂದು ಭಾಗಕ್ಕೆ ಇಳಿಕೆ ಮಾಡಿದೆ. ಕಳೆದ 3 ವರ್ಷಗಳಲ್ಲಿ ಕನಿಷ್ಠ ಪ್ರಯಾಣ ದರವನ್ನು 10 ರಿಂದ 30 ರೂ.ಗೆ ಹೆಚ್ಚಿಸಲಾಗಿತ್ತು.
ಆದರೆ ಇದೀಗ ಮತ್ತೆ ಅದನ್ನು 10 ರೂ.ಗೆ ಇಳಿಕೆ ಮಾಡುವ ಮೂಲಕ ಭಾರಿ ನೆಮ್ಮದಿಯ ಸುದ್ದಿಯನ್ನು ನೀಡಿದೆ. ಕನಿಷ್ಠ ದರ ಏರಿಕೆಯಿಂದಾಗಿ ಒಂದು ನಿಲ್ದಾಣದಿಂದ ಇನ್ನೊಂದು ನಿಲ್ದಾಣಕ್ಕೆ ಪ್ರಯಾಣಿಸಲು ಪ್ರಯಾಣಿಕರು 30 ರೂ. ಕನಿಷ್ಠ ರೂ ಪಾವತಿ ಮಾಡಬೇಕಿತ್ತು.
ದರ ಹೆಚ್ಚಳದ ನಂತರದಲ್ಲಿ ಹಲವು ಬಾರಿ ಪ್ರಯಾಣಿಕರು ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸಬೇಕಾಗುತ್ತಿದ್ದು. ರೈಲ್ವೆ ಮಂಡಳಿಯ ಈ ನಿರ್ಧಾರದಿಂದಾಗಿ ದೆಹಲಿ-NCR ಸೇರಿದಂತೆ ದೇಶದ ಲಕ್ಷಾಂತರ ದೈನಂದಿನ ಪ್ರಯಾಣಿಕರಿಗೆ ಲಾಭವಾಗಲಿದೆ. ರೈಲ್ವೆಯನ್ನು ಅಗ್ಗದ ಸಾರಿಗೆ ಸಾಧನವೆಂದು ಪರಿಗಣಿಸಲಾಗಿದೆ. 2020ರಲ್ಲಿ ಕೊರೊನಾ ಸೋಂಕು ಹರಡುವ ಮುನ್ನ ಕನಿಷ್ಠ ರೈಲು ಬೆಲೆ 10 ರೂ. ಆಗಿತ್ತು. ಆದರೆ ಕೊರೊನಾ ನಂತರ ರೈಲು ಸಂಚಾರ ಮತ್ತೆ ಆರಂಭಗೊಂಡಾಗ ಅದನ್ನು 30 ರೂ.ಗೆ ತರಲಾಯಿತು. ಪ್ರಯಾಣ ದರ ಹೆಚ್ಚಳದಿಂದ ಪ್ರಯಾಣಿಕರು ಮೊದಲಿಗಿಂತ 3 ಪಟ್ಟು ಹಣ ಪಾವತಿ ಮಾಡಬೇಕಾಗುತ್ತದೆ.
ದರ ಇಳಿಕೆಗೆ ಸಂಘಟನೆಗಳ ಒತ್ತಾಯ
ಇದೀಗ ರೈಲ್ವೆ ಮಂಡಳಿಯು ತನ್ನ ಆದೇಶದಲ್ಲಿ ಪ್ರಯಾಣಿಕರಿಂದ ಕನಿಷ್ಠ ದರವನ್ನು 10 ರೂ. ಮಾಡಲಾಗಿದೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಕಡಿಮೆ ದರಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸ್ಥಳೀಯ ಟಿಕೆಟ್ ಬುಕಿಂಗ್ ಅಪ್ಲಿಕೇಶನ್, ಸಾಫ್ಟ್‌ವೇರ್ & UTS ಅಪ್ಲಿಕೇಶನ್‌ಗಳಲ್ಲಿ ಅಪ್ಡೇಟ್ ಮಾಡಲಾಗಿದೆ. ಕರೋನಾ ನಂತರ, ರೈಲ್ವೇ ಇಂದ ನಡೆಸಲ್ಪಡುತ್ತಿರುವ ರೈಲುಗಳನ್ನು ಮೇಲ್ & ಎಕ್ಸ್‌ಪ್ರೆಸ್ ರೈಲುಗಳು ಎಂದು ತಿಳಿಸಲಾಗಿದೆ. ಇಂತಹ ರೈಲುಗಳಿಗೆ ಕನಿಷ್ಠ ದರವು 30 ರೂ.ಆಗಿದ್ದು & ಆ ವೇಳೆ ಸ್ಥಳೀಯ ರೈಲುಗಳ ಸಂಚಾರವು ಸ್ಥಗಿತಗೊಂಡಿದೆಈಗ ಲೋಕಲ್ ರೈಲುಗಳ ಸಂಚಾರ ಮತ್ತೆ ಆರಂಭಗೊಂಡಿದ್ದು ಕನಿಷ್ಠ ಪ್ರಯಾಣದ ದರವನ್ನು 10 ರೂ.ಗೆ ಇಳಿಕೆ ಮಾಡಲಾಗಿದೆ..
ಇತರೆ ವಿಷಯಗಳು
₹2,000 ಮೊತ್ತದ ತರಕಾರಿ ಬೀಜದ ಕಿಟ್ ವಿತರಣೆ.! ರೈತರೇ ತಕ್ಷಣ ತೋಟಗಾರಿಕೆ ಇಲಾಖೆಗೆ ಭೇಟಿ ನೀಡಿ
ಬಜೆಟ್ 2024: ಮದ್ಯ ಪ್ರಿಯರಿಗೆ ರಾಜ್ಯ ಸರ್ಕಾರದ ಶಾಕ್!! ಎಣ್ಣೆ ಬೆಲೆ ಮತ್ತೆ ದುಬಾರಿ