rtgh

‘ಗೃಹಲಕ್ಷ್ಮಿ’ 11 ನೇ ಕಂತಿನ ಹಣ ಬಿಡುಗಡೆ! ಯಜಮಾನಿಯರು ಖಾತೆ ಚೆಕ್‌ ಮಾಡಿಕೊಳ್ಳಿ

Gruhalakshmi Amount
Share

ಹಲೋ ಸ್ನೇಹಿತರೆ, ಗೃಹಲಕ್ಷ್ಮಿ ಯೋಜನೆಯ 10 ಕಂತಿನ ಹಣ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಈಗ 11 ನೇ ಕಂತಿನ ಸರದಿ, ಹಣ ಯಾವಾಗ ಬರುತ್ತದೆ ಎಂದು ಕಾದು ಕುಳಿತಿರುವ ಯಜಮಾನಿಯರಿಗೆ ಸಿಹಿ ಸುದ್ದಿ ಬಂದಿದೆ. ಗೃಹಲಕ್ಷ್ಮಿ ಯೋಜನೆಯ 11 ನೇ ಕಂತಿನ 2 ಸಾವಿರ ಹಣ ಬಿಡುಗಡೆ ಮಾಡಲಾಗಿದೆ ಕೆಲವರಿಗೆ ಹಣ ಕೂಡ ಬಂದಿದೆ.

Gruhalakshmi Amount

ಮುಂದಿನ 2 ರಿಂದ 3 ದಿನಗಳಲ್ಲಿ ಎಲ್ಲರಿಗೂ ಹಣ ಬಿಡುಗಡೆಯಾಗುವ ನಿರೀಕ್ಷೆಯಿದೆ. ಮೊದಲಿಗೆ ಬೆಂಗಳೂರು ಗ್ರಾಮಾಂತರ, ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ ಹಾಸನ, ದಕ್ಷಿಣ ಕನ್ನಡ, ಉಡುಪಿ. ಚಿಕ್ಕಮಗಳೂರು. ಚಾಮರಾಜನಗರ ಈ ಜಿಲ್ಲೆಗಳಿಗೆ 11 ನೇ ಕಂತಿನ 2 ಸಾವಿರ ಹಣ ಮೊದಲು ಬಿಡುಗಡೆ ಮಾಡಲಾಗುತ್ತದೆ.

ಈ ಬಾರಿಯಿಂದ ಮನೆಯ ಯಜಮಾನಿಯರಿಗೆ ಮಾತ್ರ ಸಿಗುತ್ತಿದ್ದ ಗೃಹಲಕ್ಷ್ಮಿ ಯೋಜನೆ 2000 ರೂಪಾಯಿ ಹಣ ಇನ್ಮುಂದೆ ತೃತೀಯ ಲಿಂಗಿಗಳಿಗೂ ಸಹ ಸಿಗಲಿದೆ. ಜುಲೈ ತಿಂಗಳಿಂದ ತೃತೀಯ ಲಿಂಗಿಗಳಿಗೂ ಗೃಹಲಕ್ಷ್ಮಿ ಯೋಜನೆಯ ಹಣ ದೊರೆಯಲಿದೆ. ಈ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದ್ದೂ, ಗೃಹಲಕ್ಷ್ಮಿ ಹಣಕ್ಕಾಗಿ ಈ ತಿಂಗಳ ಅಂತ್ಯದೊಳಗೆ ಅರ್ಜಿ ಸಲ್ಲಿಕೆ ಮಾಡಬೇಕು. ಜಿಲ್ಲಾಧಿಕಾರಿಗಳು ವಿತರಣೆ ಮಾಡಿದ ಐಡಿ ಕಾರ್ಡ್ ಅನ್ನು ನೀಡುವ ಮೂಲಕ ಗೃಹಲಕ್ಷ್ಮಿ ಹಣಕ್ಕೆ ಅರ್ಜಿ ಸಲ್ಲಿಸಬಹುದು.

ಇದನ್ನು ಓದಿ: ಚಿನ್ನಕ್ಕೆ ಬಂತು ವಜ್ರದ ಬೆಲೆ…! ಒಂದೇ ದಿನದಲ್ಲಿ ಭಾರೀ ಏರಿಕೆ

ಹಣ ಬಾರದೇ ಇದ್ರೆ ಏನು ಮಾಡಬೇಕು..?

  1. ಈ ಯೋಜನೆಯಡಿ ನೋಂದಣಿ ಮಾಡಿಕೊಂಡಿರುವ ಮಹಿಳೆಯರು ತಪ್ಪದೇ ತಮ್ಮ ಖಾತೆಗೆ ಇಕೆವೈಸಿ ಮಾಡಿಸಿರಬೇಕು.
  2. ಗೃಹಲಕ್ಷ್ಮಿ ಯೋಜನೆಯಡಿ ಖಾತೆಗೆ ಹಣ ಬಾರದೇ ಇರುವವರು ಮುಖ್ಯವಾಗಿ ರೇಷನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಅನ್ನು ಕಡ್ಡಾಯವಾಗಿ ಮಾಡಬೇಕು. ಒಂದು ವೇಳೆ ಇದನ್ನು ಮಾಡದಿದ್ದರೆ ಗೃಹಲಕ್ಷ್ಮಿಯರ ಖಾತೆಗೆ ಹಣ ಬರುವುದಿಲ್ಲ.
  3. ಗೃಹಲಕ್ಷ್ಮಿ ಹಣ ಬಾರದವರು ಕೂಡಲೇ ಅರ್ಜಿಯೊಂದಿಗೆ ಇ-ಕೆವೈಸಿ ಸಂಬಂಧಿತ ಸಮಸ್ಯೆಗಳನ್ನು ಬ್ಯಾಂಕ್ ಗಳಲ್ಲಿ ಬಗೆಹರಿಸಿಕೊಳ್ಳಬೇಕು.
  4. ಗೃಹ ಲಕ್ಷ್ಮಿ ಫಲಾನುಭವಿಗಳಿಗೆ NPCI ಮಾಡಿಸುವುದು ಸಹ ಕಡ್ಡಾಯಗೊಳಿಸಿದೆ. ಕೆಲವೊಮ್ಮೆ ಖಾತೆಗೆ ಹಣ ಜಮೆಯಾಗಿದ್ದರ ಮೊಬೈಲ್ಗೆ ಎಸ್‌ಎಂಎಸ್ ಬರುತ್ತದೆ ಕೆಲವು ಬಾರಿ ಬರುವುದಿಲ್ಲ.

ಇತರೆ ವಿಷಯಗಳು:

ಬ್ಯಾಂಕ್‌ ಉದ್ಯೋಗಿಗಳಿಗೆ ಖುಷಿ ಸುದ್ದಿ! ರಜೆಯೋ.. ರಜೆ

ಕಳೆದ ವಾರಕ್ಕಿಂತ ರೇಟ್‌ ಡಬಲ್!‌ ಇಂದಿನಿಂದ ಟೊಮೊಟೊ ಮುಟ್ಟಂಗಿಲ್ಲ


Share

Leave a Reply

Your email address will not be published. Required fields are marked *