rtgh
Headlines

ಸರ್ಕಾರಿ ನೌಕರರ 6 ಭತ್ಯೆಗಳಲ್ಲಿ ಹೆಚ್ಚಳ ! ಈ ಇಲಾಖೆಯಿಂದ ಹೊರಬಿತ್ತು ಅಧಿಕೃತ ಮೆಮೊರಾಂಡಮ್

7th Pay Commission and Increase in Allowances
Share

ಹಲೋ ಸ್ನೇಹಿತರೇ, ನೀವು ಕೇಂದ್ರ ಸರ್ಕಾರಿ ಉದ್ಯೋಗಿಗಳಾಗಿದ್ದರೆ /ನಿಮ್ಮ ಕುಟುಂಬದಲ್ಲಿ ಯಾರಾದರೂ ಕೇಂದ್ರ ಸರ್ಕಾರಿ ಉದ್ಯೋಗ ಈ ಸುದ್ದಿ ನಿಮಗೆ ಬಹಳ ಮುಖ್ಯವಾಗಿರುತ್ತದೆ. ಸಿಬ್ಬಂದಿ & ತರಬೇತಿ ಇಲಾಖೆಯು ಏಪ್ರಿಲ್ 2, 2024 ರಂದು ಅಧಿಕೃತ ಮೆಮೊರಾಂಡಮ್ (OM) ಅನ್ನು ಬಿಡುಗಡೆ ಮಾಡಲಾಗಿದೆ. ಈ ಮೆಮೊರಾಂಡಮ್ ಪ್ರಕಾರ ಕೇಂದ್ರ ಸರ್ಕಾರಿ ನೌಕರರ 6 ಭತ್ಯೆಗಳನ್ನು ಹೆಚ್ಚಿಸಲಾಗಿದೆ. ಯಾವುದು ಆ 6 ಭತ್ಯೆಗಳು ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

7th Pay Commission and Increase in Allowances

ಸಿಬ್ಬಂದಿ& ತರಬೇತಿ ಇಲಾಖೆಯು ಏಪ್ರಿಲ್ 2, 2024 ರಂದು ಅಧಿಕೃತ ಮೆಮೊರಾಂಡಮ್ ಬಿಡುಗಡೆ ಮಾಡಿದೆ

ತುಟ್ಟಿಭತ್ಯೆ :

ಇತ್ತೀಚೆಗೆ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ 4ರಷ್ಟು ಹೆಚ್ಚಾಸಲಾಗಿದೆ. ಈ ಮೂಲಕ ಅವರ DA ಶೇ.46ರಿಂದ ಶೇ.50ಕ್ಕೆ ಏರಿಕೆಯಾಗಿದೆ. ಪಿಂಚಣಿದಾರರ  DR ಕೂಡಾ 46% ರಿಂದ 50% ಕ್ಕೆ ಏರಿದೆ. 2024ರ ಜನವರಿ 1ರಿಂದ ಈ ಏರಿಕೆ ಜಾರಿಗೆ ತರಲಾಗಿದೆ. 

ಮಕ್ಕಳ ಶಿಕ್ಷಣ ಭತ್ಯೆ :

7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಕೇಂದ್ರ ನೌಕರರ ತುಟ್ಟಿ ಭತ್ಯೆಯನ್ನು ಶೇ.50ರಷ್ಟು ಹೆಚ್ಚಳ ಮಾಡಿ ನಂತರ ಮಕ್ಕಳ ಶಿಕ್ಷಣ ಭತ್ಯೆ ಕೂಡ ಶೇ.25ಕ್ಕೆ ಹೆಚ್ಚಿಸಲಾಗಿದೆ. ಈ ಭತ್ಯೆಯನ್ನು ಇಬ್ಬರು ಹಿರಿಯ ಮಕ್ಕಳಿಗೆ ಕ್ಲೈಮ್ ಮಾಡಿಕೊಳ್ಳಬಹುದು. ವಿದ್ಯಾರ್ಥಿವೇತನ ಅಥವಾ ವಸತಿ ಅನುದಾನವನ್ನು ಇಲ್ಲಿ 2 ಮಕ್ಕಳಿಗೆ ಕ್ಲೈಮ್ ಮಾಡಲಾಗುವುದು. ಹಾಸ್ಟೆಲ್ ಸಬ್ಸಿಡಿಯಾಗಿ ತಿಂಗಳಿಗೆ 6750 ರೂ. ನೀಡಲಾಗುವುದು. ಕೇಂದ್ರ ನೌಕರರ ಮಕ್ಕಳು ವಿಕಲಚೇತನರಾಗಿದ್ದರೆ ಅಂಥಹ ಮಕ್ಕಳ ಶಿಕ್ಷಣ ಸ್ಟೈಫಂಡ್ ಅನ್ನು 2 ಬಾರಿ ನೀಡಲಾಗುವುದು.

ರಿಸ್ಕ್ ಆಲೋವೆನ್ಸ್ : 

ಅಪಾಯಕಾರಿ ಕೆಲಸದಲ್ಲಿ ತೊಡಗಿರುವ ಕೇಂದ್ರ ಸರ್ಕಾರಿ ನೌಕರರಿಗೆ & ಕೆಲಸವು ಕಾಲಾನಂತರದಲ್ಲಿ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನು ಉಂಟುಮಾಡುವ ಉದ್ಯೋಗಿಗಳಿಗೆ ಈ ಭತ್ಯೆಯನ್ನು ನೀಡಲಾಗುವುದು. ಪರಿಹಾರ ರಚನೆಯೊಳಗೆ ವರ್ಗೀಕರಣದಲ್ಲಿ ಸ್ಪಷ್ಟತೆ ಹೊಂದುವ ಸಲುವಾಗಿ ಇದನ್ನು ಸಂಭಾವನೆ ಎಂದು ಪರಿಗಣಿಸಲಾಗಿದೆ. 

ನೈಟ್ ಡ್ಯೂಟಿ ಆಲೋವೆನ್ಸ್ (NDA) :

7ನೇ ವೇತನ ಆಯೋಗದ ಶಿಫಾರಸ್ಸಿನಂತೆ ರಾತ್ರಿ ಕರ್ತವ್ಯ ಭತ್ಯೆಯನ್ನೂ ಬದಲಾಯಿಸಲಾಗಿದೆ. ರಾತ್ರಿ ಕೆಲಸವೆಂದರೆ ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೂ ಮಾಡುವ ಕೆಲಸ. ಇದರಲ್ಲಿ ತಿಂಗಳಿಗೆ 43,600 ರೂ. NDA ಯ ಗಂಟೆಯ ದರವನ್ನು [(BP+DA)/200] ಎಂದು ನಿರ್ಧರ ಮಾಡಲಾಗಿದೆ. 7ನೇ ಕೇಂದ್ರ ವೇತನ ಆಯೋಗದ ಪ್ರಕಾರ ಮೂಲ ವೇತನ & ಭತ್ಯೆಗಳ ಆಧಾರದ ಮೇಲೆ ಇದನ್ನು ಲೆಕ್ಕ ಮಾಡಲಾಗುವುದು.

ಓವರ್ ಟೈಮ್ ಆಲೋವೆನ್ಸ್ (OTA):

ಓವರ್ ಟೈಮ್ ಭತ್ಯೆಯ ಬೆಲೆಯಲ್ಲಿ ಯಾವುದೇ ಬದಲಾವಣೆಯಿಲ್ಲದೆ ‘ಕ್ರಿಯಾತ್ಮಕ ಉದ್ಯೋಗಿಗಳು’ ಎಂದು ವರ್ಗೀಕರಿಸಲಾದ ಉದ್ಯೋಗಿಗಳ ಪಟ್ಟಿಯನ್ನು ಕಂಪೈಲ್ ಮಾಡುವ ಜವಾಬ್ದಾರಿ ಸಚಿವಾಲಯಗಳು/ಇಲಾಖೆಗಳಿಗೆ ವಹಿಸಿಕೊಡಲಾಗಿದೆ. OTA ನಿಬಂಧನೆಯನ್ನು ಬಯೋಮೆಟ್ರಿಕ್ ಹಾಜರಾತಿಗೆ ಲಿಂಕ್ ಮಾಡಲಾಗುವುದು. ಕಾರ್ಯಾಚರಣೆಯ ಕಾರ್ಯವಿಧಾನಗಳನ್ನು ಸರಳಗೊಳಿಸುವುದು & ಅಧಿಕಾವಧಿ ವೇಳಾಪಟ್ಟಿಯಲ್ಲಿ ಪಾರದರ್ಶಕತೆಯನ್ನು ಖಾತರಿಪಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ. 

ವಿಶೇಷ ಭತ್ಯೆ :

ವಿಕಲಚೇತನ ಮಹಿಳಾ ಉದ್ಯೋಗಿಗಳಿಗೆ ಅದರಲ್ಲೂ ಚಿಕ್ಕ ಮಕ್ಕಳು & ಅಂಗವಿಕಲ ಮಕ್ಕಳನ್ನು ಹೊಂದಿರುವ ಮಹಿಳೆಯರುಗಳಿಗೆ ಈ ವಿಶೇಷ ಭತ್ಯೆ ನೀಡಲಾಗುವುದು. ಈ ಯೋಜನೆಯಡಿ ವಿಕಲಚೇತನ ಮಹಿಳೆಯರಿಗೆ ಮಾಸಿಕ 3000 ರೂ.ಸಿಗುತ್ತದೆ.

ಇತರೆ ವಿಷಯಗಳು

ನರೇಗಾ ಕಾರ್ಮಿಕರ ದಿನಗೂಲಿ ಹೆಚ್ಚಳ! ಯಾವ ರಾಜ್ಯದಲ್ಲಿ ಎಷ್ಟು ವೇತನ ಹೆಚ್ಚಿಸಲಾಗಿದೆ?

ಏರ್ ಇಂಡಿಯಾ ಏರ್ಪೋರ್ಟ್‌ನಲ್ಲಿ ಉದ್ಯೋಗವಕಾಶ.! SSLC ಪಾಸಾಗಿದ್ರೆ ಅಪ್ಲೇ ಮಾಡಿ ₹60,000 ಸಂಬಳ ಸಿಗುತ್ತೇ


Share

Leave a Reply

Your email address will not be published. Required fields are marked *