ಹಲೋ ಸ್ನೇಹಿತರೇ, ರಾಜ್ಯ ಶಾಲಾ ಪರೀಕ್ಷೆ & ಮೌಲ್ಯ ನಿರ್ಣಯ ಮಂಡಲಿಯು 2nd ಪಿಯುಸಿ ಫಲಿತಾಂಶ ಬಿಡುಗಡೆ ಮಾಡುವ ದಿನಾಂಕ ತಿಳಿಸಿದೆ. ಫಲಿತಾಂಶ ಚೆಕ್ ಮಾಡುವ ವಿಧಾನ ಮತ್ತು ಪೂರಕ ಪರೀಕ್ಷೆ ಕುರಿತು ಇತರೆ ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ಕರ್ನಾಟಕ ಶಾಲಾ ಪರೀಕ್ಷೆ & ಮೌಲ್ಯ ನಿರ್ಣಯ ಮಂಡಲಿಯು ಇದೀಗ 2023-24ನೇ ಸಾಲಿನ ಪಿಯುಸಿ ಪರೀಕ್ಷೆ ರಿಸಲ್ಟ್ ಬಿಡುಗಡೆ ಮಾಡುವ ದಿನಾಂಕವನ್ನು ಪ್ರಕಟ ಮಾಡಿದೆ. ಈ ಪರೀಕ್ಷೆ ಬರೆದವರು ತಮ್ಮ ಫಲಿತಾಂಶ ಯಾವಾಗ ಬಿಡುಗಡೆ ಆಗುವುದೋ ಎಂದು ಕಾದು ಕುಳಿತಿದ್ದಾರೆ.
ಮಂಡಲಿಯು 2 nd ಪಿಯುಸಿ ವಿದ್ಯಾರ್ಥಿಗಳ ರಿಸಲ್ಟ್ ಇದೇ 03-04-2024 ರಂದು ಕಾಲೇಜು ಆಡಳಿತ ಮಂಡಳಿಗಳು ತಮ್ಮ ಕಾಲೇಜುಗಳ ಸೂಚನಾ ಫಲಕಗಳಲ್ಲಿ ಫಲಿತಾಂಶ ಬಿಡುಗಡೆ ಮಾಡಲು ನಿರ್ದೇಶನವನ್ನು ನೀಡಿದೆ. ಅಂದು ವಿದ್ಯಾರ್ಥಿಗಳು ತಮ್ಮ ತಮ್ಮ ಕಾಲೇಜಿನ ಸೂಚನಾ ಫಲಕದಲ್ಲಿ ಫಲಿತಾಂಶ ಚೆಕ್ ಮಾಡಿಕೊಳ್ಳಬಹುದು. ಅಂದು ಫಲಿತಾಂಶ ಪ್ರಕಟಿಸಲು ಸಕಲ ಸಿದ್ಧತೆ ನಡೆಸಿಕೊಳ್ಳಲು ಕಾಲೇಜುಗಳ ಸಂಬಂಧಿಸಿದ ಸಿಬ್ಬಂದಿಗಳಿಗೆ ಮಂಡಳಿ ಸೂಚನೆಯನ್ನು ನೀಡಿದೆ.
2nd ಪಿಯುಸಿ ಫಲಿತಾಂಶ ತಿಳಿಯಲು | ಇಲ್ಲಿ ಕ್ಲಿಕ್ ಮಾಡಿ |
ಅನುತ್ತೀರ್ಣರಾದವರಿಗೆ ಪೂರಕ ಪರೀಕ್ಷೆ ವೇಳಾಪಟ್ಟಿಯು ಪ್ರಕಟ
ಶಾಲಾ ಪರೀಕ್ಷೆ & ಮೌಲ್ಯ ನಿರ್ಣಯ ಮಂಡಲಿ ಪ್ರಸಕ್ತ ಸಾಲಿನ 2nd ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಪೂರಕ ಪರೀಕ್ಷೆಯನ್ನು ನಡೆಸಲು ಡೇಟ್ ಬಿಡುಗಡೆ ಮಾಡಲಾಗಿದೆ. ಈ ಪರೀಕ್ಷೆಯನ್ನು ಮೇ 20 ರಿಂದ 31 ರವರೆಗೆ ನಡೆಸಲು ವೇಳಾಪಟ್ಟಿಯನ್ನು ನಿಗದಿ ಮಾಡಲಾಗಿದೆ. ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶವನ್ನು ಜೂನ್ 06, 2024 ಪ್ರಕಟಿಸಲಾಗುವುದು.
2023-24ನೇ ಸಾಲಿನ ಪಿಯುಸಿ ಪರೀಕ್ಷೆ ಅನುತ್ತೀರ್ಣರಾದವರು ಪೂರಕ ಪರೀಕ್ಷೆ ಬರೆದು ಉತ್ತೀರ್ಣರಾಗಬಹುದು. ವಿಷಯವಾರು ನಿಗದಿತ ಶುಲ್ಕ ಪಾವತಿಸಿ ಪರೀಕ್ಷೆ ಬರೆಯಬೇಕು. ಪರೀಕ್ಷೆ ದಿನಾಂಕ, ಪರೀಕ್ಷೆ ಶುಲ್ಕದ ಮಾಹಿತಿಯನ್ನು ಕಾಲೇಜುಗಳ ಸೂಚನಾ ಫಲಕದಲ್ಲಿ ಹಾಕಲಾಗುವುದು. ಕರ್ನಾಟಕ ಶಾಲಾ ಪರೀಕ್ಷೆ & ಮೌಲ್ಯ ನಿರ್ಣಯ ಮಂಡಲಿ ನಿಗದಿಯ ಪ್ರಕಾರ ದಿನಾಂಕ 20-04-2024 ರವರೆಗೂ ಪೂರಕ ಪರೀಕ್ಷೆ ಶುಲ್ಕ ಪಾವತಿ ಮಾಡಬಹುದಾಗಿದೆ.
ಇತರೆ ವಿಷಯಗಳು
ಯಾವುದೇ ಬ್ಯಾಂಕಿನಲ್ಲಿ ಈ ಖಾತೆ ತೆರೆದರೆ ನಿಮ್ಮ ಖಾತೆಗೆ ಬರತ್ತೆ ₹10,000
ಏಪ್ರಿಲ್ 1 ರಿಂದಲೇ ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಆರಂಭ! ಇಂತವರಿಗೆ ಮಾತ್ರ ಅವಕಾಶ