rtgh
Headlines

1ನೇ ತರಗತಿ ಪ್ರವೇಶಕ್ಕೆ ಹೊಸ ನಿಯಮ ಜಾರಿ.! ಕೇಂದ್ರ ಶಿಕ್ಷಣ ಸಚಿವಾಲಯದಿಂದ ಮಹತ್ವದ ಸೂಚನೆ

1st standard admission age in karnataka
Share

ಹಲೋ ಸ್ನೇಹಿತರೇ, ಮುಂದಿನ ಶೈಕ್ಷಣಿಕ ವರ್ಷದ ಪ್ರವೇಶಾತಿ ಚಟುವಟಿಕೆ ಇನ್ನೇನೋ ಪ್ರಾರಂಭವಾಗಲಿವೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವಾಲಯವು ಮಹತ್ವದ ನಿರ್ದೇಶನವನ್ನು ರಾಜ್ಯ & ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಿದೆ. ಈ ಕುರಿತು ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

1st standard admission age in karnataka

ಶಾಲಾ ಪ್ರವೇಶಾತಿ 2024-25 ಗೆ ಸಂಬಂಧಿಸಿದ ಹಾಗೆ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗಲಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯ 1ನೇ ತರಗತಿ ಮಕ್ಕಳ ಪ್ರವೇಶಾತಿ ವಯಸ್ಸಿನ ಅರ್ಹತೆಗೆ ಸಂಬಂಧಿಸಿದ ಮಹತ್ವದ ನಿರ್ದೇಶನಗಳನ್ನು ರಾಜ್ಯ ಸರ್ಕಾರ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರವನ್ನು ಹೊರಡಿಸಿದೆ.

1ನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳಿಗೆ 6+ವರ್ಷ ಕಡ್ಡಾಯವಾಗಿ ಪೂರೈಸಿರುವ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು, NEP 2020 ಪ್ರಕಾರ, ಮಕ್ಕಳ ಉಚಿತ & ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ 2009 ರ ಪ್ರಕಾರ ಈ ಕುರಿತು ವಿಶೇಷ ಗಮನಹರಿಸಿ ಎಂದು ಶಿಕ್ಷಣ ಸಂಸ್ಥೆಗಳಿಗೆ ನಿರ್ದೇಶಿಸಿಸಲಾಗಿದೆ.

1ನೇ ತರಗತಿಗೆ ಪ್ರವೇಶಕ್ಕೆ ಕನಿಷ್ಠ ವಯಸ್ಸಿನ ಅರ್ಹತೆಯನ್ನು ರಾಷ್ಟ್ರೀಯ ಶಿಕ್ಷಣ ನೀತಿ ಜೊತೆಗೆ ಪ್ರಕಟಿಸಲಾಗಿದೆ. ಶಿಕ್ಷಣ ಸಚಿವಾಲಯದ ಅಧೀನದಲ್ಲಿರುವ ಶಾಲಾ ಶಿಕ್ಷಣ & ಸಾಕ್ಷರತಾ ಇಲಾಖೆಗಳಿಗೆ ಈ ಹಿಂದೆಯೇ ಇದರ ಕುರಿತು ಪತ್ರವನ್ನು ಹೊರಡಿಸಲಾಗಿತ್ತು. ಜೊತೆಗೆ ರಾಜ್ಯಗಳನ್ನು & ಕೇಂದ್ರಾಡಳಿತ ಪ್ರದೇಶಗಳಿಗೆ ಈ ಸೂಚನೆಗಳನ್ನು ಅನುಸರಿಸಲು ಹೇಳಲಾಗಿದೆ. ಕಳೆದ ವರ್ಷವು ಸಹ ಈ ಪತ್ರವನ್ನು ಶಿಕ್ಷಣ ಸಚಿವಾಲಯ ಹೊರಡಿಸಿತ್ತು.

ವರದಿಗಳ ಪ್ರಕಾರ, ಈಗಾಗಲೇ 20 ರಾಜ್ಯಗಳು & ಕೇಂದ್ರಾಡಳಿತ ಪ್ರದೇಶಗಳು ಈ ರೂಲ್ಸ್‌ ಅನುಸಾರವೇ ಪ್ರವೇಶವನ್ನು ಪಡೆಯುತ್ತಿವೆ ಎನ್ನಲಾಗಿದೆ.

ರಾಜ್ಯದಲ್ಲಿ SEP ಜಾರಿಗೆ ಸರ್ಕಾರ ಆಸಕ್ತಿ

ಕರ್ನಾಟಕದಲ್ಲಿ ಕಳೆದ ವರ್ಷವೇ 1ನೇ ತರಗತಿಗೆ ಪ್ರವೇಶಕ್ಕೆ 6 ವರ್ಷ ಕಡ್ಡಾಯ ವಯಸ್ಸಿನ ಅರ್ಹತೆ ಕುರಿತು ಪ್ರಕಟಣೆಯನ್ನು ಹೇಳಲಾಗಿದೆ. ಅಲ್ಲದೇ ಈ ರೂಲ್ಸ್‌ನ್ನು ಜಾರಿಗೆ ತರಲಾಗಿದೆ. ಆದರೆ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಈ ರೂಲ್ಸ್ ನ್ನು ಎಷ್ಟರ ಮಟ್ಟಿಗೆ ಅನುಕರಣೆ ಮಾಡಲಾಗುತ್ತಿದೆ ಎಂಬುದನ್ನು ಸರ್ಕಾರ ಗಮನಹರಿಸಬೇಕಿದೆ. ಈ ನಡುವೆಯೇ ರಾಜ್ಯ ಸರ್ಕಾರ ರಾಜ್ಯ ಶಿಕ್ಷಣ ನೀತಿಯನ್ನು ಜಾರಿಗೆ ತರಲು ನಿರ್ಧರಿಸಿದೆ.

ಈಗ ಈ ಶಿಫಾರಸ್ಸುಗಳ ಪ್ರಕಟಣೆ ದಿನಾಂಕ ಮತ್ತು ಜಾರಿಯ ವಿಷಯವನ್ನು ಕೆಲವು ತಿಂಗಳುಗಳ ಮುಂದಕ್ಕೆ ಹಾಕಲಾಗಿದೆ. ರಾಜ್ಯದಲ್ಲಿ ಒಂದು ವೇಳೆ NEP ಜಾರಿ ಆದಲ್ಲಿ ರಾಜ್ಯ ಪಠ್ಯಕ್ರಮವನ್ನು ಓದುವ ವಿದ್ಯಾರ್ಥಿಗಳಿಗೆ ಮಾತ್ರ ಇದು ಅನ್ವಯ ಆಗುತ್ತದೆ. CBSE ಪಠ್ಯಕ್ರಮ ವಿದ್ಯಾರ್ಥಿಗಳು NEP ಪ್ರಕಾರ ಓದಲಿದ್ದಾರೆ ಎನ್ನುವ ಗೊಂದಲವಿದೆ.

ಇತರೆ ವಿಷಯಗಳು

PMFBY ಹೊಸ ಪಟ್ಟಿ ಬಿಡುಗಡೆ.! ಇಂದಿನಿಂದ ರೈತರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆರಂಭ

ಮನೆಯ ಪ್ರತಿ ಸದಸ್ಯರಿಗೆ 5 ಲಕ್ಷ ಉಚಿತ ನಗದು.! ಈ ಕಾರ್ಡ್‌ ಮಾಡಿಸಿಕೊಳ್ಳಲು ಇಂದೇ ಕೊನೆ ಅವಕಾಶ


Share

Leave a Reply

Your email address will not be published. Required fields are marked *