rtgh
Headlines

₹2,000 ಮೊತ್ತದ ತರಕಾರಿ ಬೀಜದ ಕಿಟ್‌ ವಿತರಣೆ.! ರೈತರೇ ತಕ್ಷಣ ತೋಟಗಾರಿಕೆ ಇಲಾಖೆಗೆ ಭೇಟಿ ನೀಡಿ

vegetable seeds kit
Share

ಹಲೋ ಸ್ನೇಹಿತರೇ, ತೋಟಗಾರಿಕೆ ಅಭಿವೃದ್ದಿ ಯೋಜನೆಯಡಿಯಲ್ಲಿ 2000 ಮೊತ್ತದ ತರಕಾರಿ ಬೀಜದ ಕಿಟ್‌ಗಳನ್ನು ವಿತರಿಸಲಾಗುವುದು, ಯಾವ ಯಾವ ಜಿಲ್ಲೆಗಳಲ್ಲಿ ವಿತರಿಸಲಾಗುತ್ತದೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

vegetable seeds kit

ಶಿವಮೊಗ್ಗ: 2023-24 ನೇ ಸಾಲಿನ ಶಿಕಾರಿಪುರ ತೋಟಗಾರಿಕೆ ಇಲಾಖೆ ಕಡೆಯಿಂದ ಸಮಗ್ರ ತೋಟಗಾರಿಕೆ ಅಭಿವೃದ್ದಿ ಯೋಜನೆಯಡಿಯಲ್ಲಿ ರೈತರಿಗೆ ತರಕಾರಿ ಬೆಳೆಗಳನ್ನು ಬೆಳೆಯಲು ಉತ್ತೇಜನ ನೀಡಲು ತರಕಾರಿ ಬೀಜಗಳ ವಿತರಣೆ ಮಾಡಲಾಗುತ್ತದೆ.

ಈ ಕಾರ್ಯಕ್ರಮದ ಅಡಿಯಲ್ಲಿ ಫಲಾನುಭವಿಗೆ ರೂ.2000 ಮೊತ್ತದ ತರಕಾರಿ ಬೀಜಗಳ ಕಿಟ್‌ನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು, ಸಣ್ಣ ಮತ್ತು ಅತಿ ಸಣ್ಣ ಹಾಗೂ ಇತರೆ ರೈತರಿಗೆ ವಿತರಣೆಯನ್ನು ಮಾಡಲಾಗುತ್ತದೆ. ಆಸಕ್ತ ರೈತರುಗಳು ತಮ್ಮ ಅರ್ಜಿಯೊಂದಿಗೆ ಪಹಣಿ, ಆಧಾರ್ ಕಾರ್ಡ್ ಜೆರಾಕ್ಸ್, ಬ್ಯಾಂಕ್ ಪಾಸ್‌ ಬುಕ್ ಪ್ರತಿ ಹಾಗೂ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಿ ಫೆಬ್ರವರಿ.26 ರಿಂದ ತರಕಾರಿ ಬೀಜಗಳ ಕಿಟ್‌ಗಳನ್ನು ತೋಟಗಾರಿಕೆ ಇಲಾಖೆಯಾದ, ಶಿಕಾರಿಪುರ ಕಚೇರಿಯಿಂದ ಪಡೆಯದುಕೊಳ್ಳಬಹುದಾಗಿದೆ.

ಹೆಚ್ಚಿನ ವಿವರಗಳಿಗೆ ಸಹಾಯವಾಣಿ ಸಂಖ್ಯೆ ಕಸಬಾ 8971370547, ಅಂಜನಾಪುರ 8151810552, ಹೊಸೂರು 6363095898, ಉಡುಗಣಿ 9108548454, ತಾಳಗುಂದ 6361767251 ನ್ನು ಸಂಪರ್ಕಿಸಬಹುದೆಂದು ಶಿಕಾರಿಪುರ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ಮಾಹಿತಿಯನ್ನು ತಿಳಿಸಿದ್ದಾರೆ.

ಇತರೆ ವಿಷಯಗಳು

ಪೋಲಿಯೋ ಲಸಿಕೆ ಅಭಿಯಾನದ ದಿನಾಂಕ ನಿಗದಿ.! ಫೋಷಕರೇ ತಪ್ಪದೆ ನಿಮ್ಮ ಮಕ್ಕಳಿಗೆ ಲಸಿಕೆ ಹಾಕಿಸಿ

ಅನ್ನದಾತರಿಗೆ ಸಿಹಿ ಸುದ್ದಿ: ಈ ಯೋಜನೆಗೆ ಅರ್ಜಿ ಸಲ್ಲಿಸಿದರೆ ₹10,000 ರೈತರ ಖಾತೆಗೆ!


Share

Leave a Reply

Your email address will not be published. Required fields are marked *