rtgh
Headlines

ಪ್ರಯಾಣಿಕರ ಗಮನಕ್ಕೆ.! ನಾಳೆಯಿಂದ ಈ ಮಾರ್ಗದ 8 ರೈಲುಗಳ ಸಂಚಾರ ರದ್ದು

train cancellation news
Share

ಹಲೋ ಸ್ನೇಹಿತರೇ, ರಾಜ್ಯದ ರೈಲ್ವೇ ಪ್ರಯಾಣಿಕರಿಗೆ ಇದು ಮಹತ್ವದ ಸುದ್ದಿ. ನಾಳೆಯಿಂದ ನಿಮಗೆ ಈ ರೈಲ್ವೇ ಸೇವೆ ಸಿಗುಲ್ಲ. 8 ರೈಲುಗಳ ಸಂಚಾರ ರದ್ದಾಗುತ್ತದೆ. ಉತ್ತರ ಕರ್ನಾಟಕ, ತುಮಕೂರು ಭಾಗದ ರೈಲು ಪ್ರಯಾಣಿಕರಿಗೆ ಇದರಿಂದ ತೊಂದರೆಯಾಗಲಿದೆ. ಯಾವೆಲ್ಲಾ ರೈಲುಗಳು ರದ್ದಾಗಲಿದೆ ಎಂಬುದನ್ನು ಲೇಖನದಲ್ಲಿ ತಿಳಿಯಿರಿ. 

train cancellation news

ನಾಳೆಯಿಂದ ಅಂದರೆ ಜೂನ್‌ 27 ರಿಂದ ಜುಲೈ 4 ರವರೆಗೂ 8 ರೈಲುಗಳ ಸಂಚಾರ ರದ್ದು ಮಾಡಿ ಆದೇಶಿಸಲಾಗಿದೆ. ನಿಟ್ಟೂರು – ಸಂಪಿಗೆ ರಸ್ತೆ ರೈಲ್ವೆ ನಿಲ್ದಾಣ ನಡುವೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ರೈಲುಗಳನ್ನು ರದ್ದುಗೊಳಿಸಲಾಗಿದೆ. ಲೇವಲ್ ಕ್ರಾಸಿಂಗ್‌ನಲ್ಲಿ ಗರ್ಡರ್ ಅಳವಡಿಕೆ ಸಂಬಂಧಿತ ಕಾಮಗಾರಿ ನಡೆಯುತ್ತಿದೆ. ರೈಲು ಸಂಚಾರ ರದ್ದಾಗುವ ಬಗ್ಗೆ ನೈರುತ್ಯ ರೈಲ್ವೆ ಮಾಹಿತಿಯನ್ನು ನೀಡಿದೆ. 

ಯಾವ ರೈಲುಗಳ ಸಂಚಾರ ರದ್ದು? 

  • ತುಮಕೂರು-ಚಾಮರಾಜನಗರ (07346)
  • ಚಾಮರಾಜನಗರ-ಮೈಸೂರು (07328)
  • ಚಾಮರಾಜನಗರ-ಯಶವಂತಪುರ (16239)
  • ಯಶವಂತಪುರ- ಚಾಮರಾಜನಗರ (16240)
  • ತುಮಕೂರು-ಕೆಎಸ್ ಆರ್‌ಬೆಂಗಳೂರು(06576) 
  • ಕೆಎಸ್‌ಆರ್‌ಬೆಂಗಳೂರು- ತುಮಕೂರು (06575)
  • ಯಶವಂತಪುರ-ಶಿವಮೊಗ್ಗ (16579),
  • ಶಿವಮೊಗ್ಗ-ಯಶವಂತಪುರ (16580)  

ಭಾಗಶಃ ರದ್ದಾಗಲಿರುವ ರೈಲುಗಳು

  • ತುಮಕೂರು-ಕೆಎಸ್‌ಆರ್‌ಬೆಂಗಳೂರು (06571) 
  • ತಾಳಗುಪ್ಪ-ಕೆಎಸ್‌ಆರ್‌ಬೆಂಗಳೂರು ರೈಲು (06572)
  • ತಾಳಗುಪ್ಪ ಕೆಎಸ್‌ಆರ್ ಬೆಂಗಳೂರು (20652)
  • ಕೆಎಸ್‌ಆರ್‌ಬೆಂಗಳೂರು- ಧಾರವಾಡ (ಇಂಟರ್‌ಸಿಟಿ) (12725/6)

ಈ ರೈಲುಗಳ ಮಾರ್ಗ ಬದಲಾವಣೆ 

ವಾಸ್ಕೊಡ ಗಾಮ-ಯಶವಂತಪುರ ರೈಲು (17310), ಮೈಸೂರು- ವಾರಾಣಸಿ (22687 & ಯಶವಂತಪುರ-ಜೈಪುರ (82653)ವಿಶ್ವಮಾನವ ಮೈಸೂರು-ಬೆಳಗಾವಿ (17326)  ರೈಲುಗಳು ಅರಸಿಕೆರೆ, ಹಾಸನ, ನೆಲಮಂಗಲ ಮೂಲಕ ಯಶವಂತಪುರಕ್ಕೆ ಬರಲಿವೆ.

ಮೈಸೂರು-ಉದಯಪುರ ರೈಲು (19668) ಎಸ್‌ಆರ್‌ಬೆಂಗಳೂರು ರೈಲು ಯಶವಂತಪುರ, ನೆಲಮಂಗಲ, ಹಾಸನ, ಆರಸಿಕೆರೆ, ದಾವಣಗೆರೆಗೆ ತೆರಳಲಿದೆ. 

ಇತರೆ ವಿಷಯಗಳು

ರಾಜ್ಯದಲ್ಲಿ ಇನ್ನೂ 7 ದಿನ ಭಾರೀ ಮಳೆ!! ಈ ಜಿಲ್ಲೆಗಳಿಗೆ ರೆಡ್‌ ಅಲರ್ಟ್

ಜೂನ್ 28 ರಿಂದ ಉಳಿತಾಯ ಯೋಜನೆಗಳ ಬಡ್ಡಿ ಹೆಚ್ಚಳ!


Share

Leave a Reply

Your email address will not be published. Required fields are marked *