ಹಲೋ ಸ್ನೇಹಿತರೆ, ಕಳೆದ ವಾರದಲ್ಲಿ ಕೆಜಿಗೆ 50 ರೂ.ವರೆಗೂ ದೊರೆಯುತ್ತಿದ್ದ ಟೊಮೆಟೊ ಈಗ ಏಕಾಏಕಿ 100 ರೂಪಾಯಿ ಗಡಿ ದಾಟಿದೆ, ಈ ಕಾರಣದಿಂದ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ಟೊಮೆಟೊ ಸೇರಿದಂತೆ ತರಕಾರಿ, ಸೊಪ್ಪು ದರ ತೀವ್ರ ಏರಿಕೆಯಾಗಿದೆ. ಯಾವ್ಯಾವ ತರಕಾರಿ ಬೆಲೆ ಎಷ್ಟು ಏರಿಕೆಯಾಗಿದೆ ಎಂದು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.
ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ತರಕಾರಿ ಪೂರೈಕೆಯಾಗದ ಕಾರಣ ದರ ಹೆಚ್ಚಾಗಿದೆ. ಹೀರೆಕಾಯಿ ಕೆಜಿಗೆ 120 ರೂ. ಆಗಿದ್ದು ಸೌತೆಕಾಯಿ 120 ರೂ. ಬೀನ್ಸ್ 160 ರೂ., ಟೊಮೆಟೊ 100 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.
ಇದನ್ನು ಓದಿ: ಒಂದಕ್ಕಿಂತ ಹೆಚ್ಚು ಸಿಮ್ ಕಾರ್ಡ್ ಇದ್ದವರಿಗೆ ಹೊಸ ರೂಲ್ಸ್!
ಮಳೆ, ರೋಗಗಳಿಂದ ಸೇರಿ ನಾನಾ ಕಾರಣಗಳಿಂದ ತರಕಾರಿ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಶನಿವಾರದಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಿರುವುದರಿಂದ ತರಕಾರಿ ಸೇರಿ ಅಗತ್ಯ ವಸ್ತುಗಳ ದರ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಟೊಮೆಟೊ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಜನ ಹುಣಸೆಹಣ್ಣು ಖರೀದಿಗೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ.
ಇತರೆ ವಿಷಯಗಳು:
ಚಿನ್ನಕ್ಕೆ ಬಂತು ವಜ್ರದ ಬೆಲೆ…! ಒಂದೇ ದಿನದಲ್ಲಿ ಭಾರೀ ಏರಿಕೆ
ಉದ್ಯೋಗ ಸೃಷ್ಟಿಗಾಗಿ ಹೊಸ ಯೋಜನೆ! 2 ಲಕ್ಷ ಉದ್ಯೋಗಾವಕಾಶ