ಹಲೋ ಸ್ನೇಹಿತರೇ, ಜುಲೈ 23 ರಂದು ಮಂಡಿಸಿದ ಸಾಮಾನ್ಯ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಚಿನ್ನದ ಮೇಲಿನ ಆಮದು ಸುಂಕವನ್ನು ಕಡಿತಗೊಳಿಸುವುದಾಗಿ ಘೋಷಣೆ ಮಾಡಿದ್ದರು. ಇದರ ಪರಿಣಾಮ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ ದಾಖಲೆ ಆಯಿತು. ಎಷ್ಟು ಕಡಿಮೆಯಾಗಿದೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಲೇಖನವನ್ನು ಓದಿ ತಿಳಿಯಿರಿ.
ಇದಾದ ಒಂದರಿಂದ 2 ದಿನಗಳಲ್ಲಿ 10 ಗ್ರಾಂ ಚಿನ್ನದ ಬೆಲೆ 4,000 ರೂ.ಯಷ್ಟು ಇಳಿಕೆ ಕಂಡಿತು. ಆದರೆ ಈ ಬೆಲೆ ಕುಸಿತವು ಚಿನ್ನದ ಬೇಡಿಕೆಯನ್ನು ದಾಖಲೆ ಮಟ್ಟಕ್ಕೆ ಕೊಂಡೊಯ್ದಿದೆ. ಬೇಡಿಕೆ ಹೆಚ್ಗುತ್ತಿದ್ದ ಹಾಗೆಯೇ ಆಮದು ಸುಂಕ ಕುಸಿತದ ಹೊರತಾಗಿಯೂ ಮಾರುಕಟ್ಟೆ ದರ ಹಳೆಯ ಮಟ್ಟವನ್ನು ತಲುಪಿದೆ.
ಆಮದು ಸುಂಕ ಇಳಿಕೆಯಲ್ಲದೆ, ಹಬ್ಬದ ಬೇಡಿಕೆಯೂ ಚಿನ್ನದ ಬೇಡಿಕೆ ಏರಿಕೆಗೆ ಕಾರಣ ಎಂದು ಪರಿಗಣಿಸಲಾಗಿದೆ. ಆಮದು ಸುಂಕದಲ್ಲಿ ಭಾರೀ ಕಡಿತ & ಹಬ್ಬದ ಬೇಡಿಕೆಯ ಹೆಚ್ಚಳದಿಂದಾಗಿ, ಆಗಸ್ಟ್‌ನಲ್ಲಿ ಚಿನ್ನದ ಆಮದು ದ್ವಿಗುಣಗೊಂಡು ದಾಖಲೆಯ ಮಟ್ಟವನ್ನು ತಲುಪಿದೆ.
2024-25ರ ಹಣಕಾಸು ವರ್ಷದ ಬಜೆಟ್‌ನಲ್ಲಿ ಸರ್ಕಾರವು ಆಮದು ಸುಂಕವನ್ನು 15 ಪ್ರತಿಶತದಿಂದ 6 ಪ್ರತಿಶತಕ್ಕೆ ಇಳಿಸುವುದಾಗಿ ಘೋಷಣೆ ಮಾಡಿತ್ತು. ಪ್ರಸಕ್ತ ಹಣಕಾಸು ವರ್ಷದ ಮೊದಲ 4 ತಿಂಗಳಲ್ಲಿ (ಏಪ್ರಿಲ್-ಜುಲೈ) ದೇಶದ ಚಿನ್ನದ ಆಮದು 12.64 ಶತಕೋಟಿ ಡಾಲರ್ ಮುಟ್ಟಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ (UAE)ನಿಂದ 16 ಪ್ರತಿಶತಕ್ಕಿಂತ ಹೆಚ್ಚುಚಿನ್ನವನ್ನು ಆಮದು ಮಾಡಿಕೊಳ್ಳಲಾಗಿದೆ. ಚೀನಾದ ನಂತರ ಭಾರತವು ವಿಶ್ವದ 2ನೇ ಅತಿದೊಡ್ಡ ಚಿನ್ನದ ಗ್ರಾಹಕವಾಗಿದೆ. ಈ ಆಮದು ಮುಖ್ಯವಾಗಿ ಆಭರಣ ಉದ್ಯಮದ ಬೇಡಿಕೆಯನ್ನು ಪೂರೈಕೆ ಮಾಡುತ್ತದೆ.
ಗುಡ್ ರಿಟರ್ನ್ಸ್ ಪ್ರಕಾರ ಈ ಸುದ್ದಿ ಬರೆಯುವ ಹೊತ್ತಿಗೆ ನಿನ್ನೆ ಮತ್ತು ಇಂದಿನ ಚಿನ್ನದ ಬೆಲೆಯನ್ನು ಹೋಲಿಕೆ ಮಾಡಿ ನೋಡುವುದಾದರೆ ಅಂಥಹ ವ್ಯತ್ಯಾಸವೇನು ಕಾಣಿಸುವುದಿಲ್ಲ. 24 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆ 7,488 ರೂಪಾಯಿ ಇದೆ.
ಇತರೆ ವಿಷಯಗಳು
ಆಧಾರ್ ಕಾರ್ಡ್ ಹೊಂದಿರುವವರಿಗೆ 2 ದಿನ ಮಾತ್ರ ಬಾಕಿ..! ಕಟ್ಟಬೇಕು ಭಾರೀ ದಂಡ
ಕುಟುಂಬದಲ್ಲಿ ಎಷ್ಟು ಜನರು ಆಯುಷ್ಮಾನ್ ಕಾರ್ಡ್ ಪಡೆಯಬಹುದು? ನಿಯಮ ಬದಲಿಸಿದ ಸರ್ಕಾರ