ಏ.1 ರಿಂದ 30ರವರೆಗೆ ಜಾನುವಾರುಗಳಿಗೆ ಕಾಲುಬಾಯಿ ಲಸಿಕಾ ಅಭಿಯಾನ! ರೋಗ ತಡೆಗಟ್ಟಲು ಲಸಿಕೆ ಕಡ್ಡಾಯ
ದಾವಣಗೆರೆ: ಎಲ್ಲಾ ಜಾನುವಾರುಗಳಲ್ಲಿ ಹೆಚ್ಚಾಗಿರುವ ಕಾಲುಬಾಯಿಯ ರೋಗವನ್ನು ನಿಯಂತ್ರಿಸುವ ಉದ್ದೇಶಕ್ಕಾಗಿ ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಏ. 1 ರಿಂದ 30ರವರೆಗೆ ಜಾನುವಾರುಗಳ ಕಾಲುಬಾಯಿ ಲಸಿಕಾ ಅಭಿಯಾನ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತವಾಗಿ ನಡೆಸಲಾಗುತ್ತದೆ. ಕಾಲುಬಾಯಿಯ ರೋಗದ ಲಸಿಕಾ ಅಭಿಯಾನದ ಪೂರ್ವಭಾವಿಯ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ವೆಂಕಟೇಶ್.ಎಂ.ವಿ. ಅವರು ಪರಿಶೀಲನೆಯನ್ನು ನಡೆಸಿ ಮಾತನಾಡಿದರು. ಲಸಿಕೆಯ ಕಾರ್ಯಕ್ಕೆ ಪಶು ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯ ಮನೆ ಮನೆಗೆ ಭೇಟಿಯನ್ನು ನೀಡಿಲಿದ್ದು, ಈ ಸಂದರ್ಭದಲ್ಲಿ ಸಾರ್ವಜನಿಕರು ಅಗತ್ಯವಾದ ಸಹಕಾರವನ್ನು ನೀಡಬೇಕು. ಹೆಚ್ಚಿನ ಸಂಖ್ಯೆ ಜಾನುವಾರುಗಳಿಗೆ…