ಹಲೋ ಸ್ನೇಹಿತರೇ, ಕಬ್ಬಿನ ನ್ಯಾಯಯುತ & ಸಮಂಜಸವಾದ ದರವನ್ನು ಖಚಿತಪಡಿಸಿಕೊಳ್ಳಲು ಮುಂಬರುವ ಕಬ್ಬಿನ ಹಂಗಾಮಿಗೆ ಅಕ್ಟೋಬರ್ 1, 2024 ರಿಂದ september. 30, 2025 ರ ಅವಧಿಯಲ್ಲಿ ದರವನ್ನು ನಿಗದಿಪಡಿಸಲು ನಿರ್ಧರಿಸಲಾಗುವುದು. ಅದರ ಸಂಪೂರ್ಣ ಮಾಹಿತಿಯನ್ನು ತಿಳಿಯಲು ನಮ್ಮ ಲೇಖನವನ್ನು ಕೊನೆಯವರೆಗು ಓದಿ.
ಕನಿಷ್ಠ ಬೆಂಬಲ ಬೆಲೆಗೆ (MSO) ಕಾನೂನಾತ್ಮಕವಾದ ಖಾತರಿ ನೀಡುವಂತೆ ಒತ್ತಾಯಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗಳ ಮಧ್ಯೆ, ಕಬ್ಬಿನ ನ್ಯಾಯಯುತ ಲಾಭದಾಯಕ ದರವನ್ನು ಕ್ವಿಂಟಲ್’ಗೆ 340 ರೂ.ಗೆ ಹೆಚ್ಚಿಸಲು ಕೇಂದ್ರ ಸಚಿವ ಸಂಪುಟವು ಬುಧವಾರ ಅನುಮೋದನೆಯನ್ನು ನೀಡಿದೆ.
ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್, ಕಬ್ಬಿನ ನ್ಯಾಯಯುತ & ಸಮಂಜಸವಾದ ಬೆಲೆಯನ್ನು ನಿಗದಿ ಪಡಿಸಿಕೊಳ್ಳಲು ಮುಂಬರುವ ಕಬ್ಬಿನ ಹಂಗಾಮಿಗೆ ಅಕ್ಟೋಬರ್ 1,2024 ರಿಂದ ಸೆಪ್ಟೆಂಬರ್ 30, 2025 ರ ಅವಧಿಯಲ್ಲಿ ದರವನ್ನು ನಿಗದಿಪಡಿಸಲು ನಿರ್ಧರಿಸಲಾಗಿದೆ. ರೈತರ ಆದಾಯವನ್ನು ದ್ವಿಗುಣಗೊಳಿಸಲು ನರೇಂದ್ರ ಮೋದಿಯವರ ಸರ್ಕಾರ ಬದ್ಧವಾಗಿದೆ” ಎಂದು ಠಾಕೂರ್ ತಿಳಿಸಿದ್ದಾರೆ.
ಕಳೆದ 10 ವರ್ಷಗಳಲ್ಲಿ ರೈತರು ತಮ್ಮ ಬೆಳೆಗಳಿಗೆ ಸರಿಯಾದ ದರವನ್ನು ಸರಿಯಾದ ಸಮಯದಲ್ಲಿ ಪಡೆದುಕೊಳ್ಳುತ್ತಿದ್ದರೆ. ಹಿಂದಿನ ಋತು 2022-23ರ 99.5% ಕಬ್ಬಿನ ಬಾಕಿ & ಇತರ ಎಲ್ಲಾ ಋತುವಿನಲ್ಲಿ 99.9% ನಷ್ಟು ಹಣವನ್ನು ಈಗಾಗಲೇ ರೈತರಿಗೆ ಪಾವತಿ ಮಾಡಲಾಗಿದೆ. ಸರ್ಕಾರದ ಸಮಯೋಚಿತ ನೀತಿ ಮಧ್ಯಸ್ಥಿಕೆಯಿಂದ, ಸಕ್ಕರೆ ಕಾರ್ಖಾನೆಗಳು ಸ್ವಾವಲಂಬಿಗಳಾಗಿದೆ” ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ಹೇಳಿದೆ.
ಇತರೆ ವಿಷಯಗಳು
ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್.! ಮತ್ತೊಮ್ಮೆ ಅರ್ಜಿ ಸಲ್ಲಿಸಲು 10 ದಿನ ಕಾಲಾವಕಾಶ ನೀಡಿದ ಸರ್ಕಾರ
ಈ ಬ್ಯಾಂಕ್‌ಗಳಲ್ಲಿ ಸಿಗುತ್ತೆ 15 ಲಕ್ಷದ ವರೆಗೆ ಬಡ್ಡಿ ರಹಿತ ಸಾಲ.! ರಾಜ್ಯ ಸರ್ಕಾರದಿಂದ ರೈತರಿಗೆ ಬಿಗ್ ಗಿಫ್ಟ್