ಹಲೋ ಸ್ನೇಹಿತರೇ, ಕೋವಿಡ್ ನಂತರದಲ್ಲಿ ಅನೇಕ ಯುವಕರು ಕೆಲಸ ಕಳೆದುಕೊಂಡರು. ಹೀಗೆ ಕೆಲಸ ಕಳೆದುಕೊಂಡವರು ತಮ್ಮ ಊರಿಗೆ ವಾಪಸ್ ಆಗಿ ಸ್ವಂತ ಉದ್ಯೋಗ ಆರಂಭಿಸಿದ್ದಾರೆ. ಇನ್ನು ಕೆಲವರು ಪಿತ್ರಾರ್ಜಿತ ಆಸ್ತಿಯಲ್ಲಿ ಕೃಷಿ ಮಾಡುತ್ತಿದ್ದಾರೆ. ಅಂತವರಿಗಾಗಿಯೇ ಸ್ವಂತ ಉದ್ಯೋಗ ನಿರ್ಮಿಸಿಕೊಳ್ಳಲು ಸರ್ಕಾರ ಇದೀಗ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದೆ ಈ ಯೋಜನೆಯ ಬಗೆಗಿನ ಹೆಚ್ಚಿನ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ, ಇದಕ್ಕಾಗಿ ತಪ್ಪದೇ ಕೊನೆವರೆಗೂ ಓದಿ.
ಇನ್ನು ಕೆಲವರು ಯಾವ ಉದ್ಯೋಗ ಮಾಡಬಹುದು ಎನ್ನುವ ಚಿಂತನೆಯಲ್ಲಿದ್ದಾರೆ. ಹಾಗಾದರೆ ನೀವು ಚಿಂತೆ ಬಿಡಿ. ನಿಮ್ಮಂತಹ ಸ್ವಂತ ಉದ್ಯಮ ಸ್ಥಾಪಿಸುವ ಯುವಕರನ್ನು ಪ್ರೋತ್ಸಾಹಿಸುವ ಸಲುವಾಗಿಯೇ ಸರ್ಕಾರವು ಒಂದು ಯೋಜನೆಯನ್ನು ಜಾರಿಗೆ ತಂದಿದೆ.
ಆ ಯೋಜನೆಯಲ್ಲಿ ನೀವು ಫಲಾನುಭವಿಯಾದರೆ ನಿಮಗೆ ಶೇ.5೦ ರಷ್ಟು ಸಹಾಯಧನ ಸಿಗುತ್ತದೆ. ಇದರಿಂದ ನಿಮ್ಮ ಆರ್ಥಿಕ ವೆಚ್ಚ ತಗ್ಗಲಿದೆ. ನೀವೇನಾದರೂ ಕೋಳಿ, ಕುರಿ, ಮೇಕೆ, ಹಂದಿಗಳಿಗಾಗಿ ರಸಮೇವು ಘಟಕ ಸ್ಥಾಪನೆ ಮಾಡಬೇಕು ಎನ್ನುವ ಹಂಬಲ ಹೊಂದಿದ್ದರೆ ನೀವು ಕೇಂದ್ರ ಸರ್ಕಾರದ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆ ಅಡಿಯಲ್ಲಿ ಶೇ.5೦ ರಷ್ಟು ಸಹಾಯಧನ ಪಡೆಯಬಹುದು.
ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆ ಅಡಿಯಲ್ಲಿ ಗ್ರಾಮೀಣ ಜನರ ಅಭಿವೃದ್ಧಿಗಾಗಿ ಅವರು ಮಾಡಬಹುದಾದ ಕೋಳಿ ಸಾಕಾಣಿಕೆ, ಕುರಿ, ಮೇಕೆ, ಹಂದಿ ಸಾಕಾಣಿಕೆ ಹಾಗೂ ರಸಮೇವು ಘಟಕ ಸ್ಥಾಪನೆಗೆ ಶೇ.5೦ ರಷ್ಟು ಸಹಾಯಧನ ನೀಡಲಾಗುತ್ತದೆ. ಹಾಗಾಗಿಯೇ ರೈತರು ಮಾತ್ರ ಈ ಯೋಜನೆಗಳ ಅಡಿಯಲ್ಲಿ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.
ಇ-ಶ್ರಮ್ ಕಾರ್ಡ್ ಹೊಸ ಕಂತು ಬಿಡುಗಡೆ! ಹಣ ಪಾವತಿ ಸ್ಥಿತಿಯನ್ನು ಕುಳಿತಲ್ಲಿಯೇ ಚೆಕ್ ಮಾಡಿ
Contents
ಗ್ರಾಮೀಣ ಕೋಳಿ ಉದ್ದಿಮೆ
ಇದಕ್ಕಾಗಿ 50 ಲಕ್ಷ ರೂ. ವರೆಗೆ ನಿಮಗೆ ಸಾಲ ಸೌಲಭ್ಯ (Loan) ನೀಡಲಾಗುತ್ತದೆ. ಇದರಲ್ಲಿ 25 ಲಕ್ಷ ರೂ. ಸಹಾಯ ಧನ ಆಗಿರುತ್ತದೆ. ಕುರಿ-ಕೋಳಿ ಸಂವರ್ಧನಾ ಘಟಕ ಸ್ಥಾಪನೆ: ಈ ಯೋಜನೆಗಳ ಅಡಿಯಲ್ಲಿ 1 ಕೋಟಿ ರೂ.ಗಳವರೆಗೆ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ. ನೀವು ಎಷ್ಟು ಪ್ರಾಣಿಗಳನ್ನು ಸಾಕುತ್ತೀರಿ ಎನ್ನುವ ಆಧಾರದ ಅನ್ವಯ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ. ನೀಡಲಾದ ಸಾಲದಲ್ಲಿ ಶೇ.5೦ ಸಹಾಯಧನವಾಗಿರುತ್ತದೆ.
ಹಂದಿ ಸಂವರ್ಧನಾ ಘಟಕ
1೦೦+1೦ ಹಂದಿಗಳ ಸಾಕಾಣಿಕೆಗೆ 6೦ ಲಕ್ಷ ರೂ. ಸಾಲ ಸೌಲಭ್ಯ ನೀಡಲಾಗುತ್ತದೆ. 5೦+5 ಹಂದಿ ಸಾಕಾಣಿಕೆ 3೦ ಲಕ್ಷ ರೂ. ಸಾಲ ಸೌಲಭ್ಯ (Loan) ಒದಗಿಸಿಕೊಡಲಾಗುತ್ತದೆ. ಮೇವು ಉತ್ಪಾದನಾ ಘಟಕದ ಸ್ಥಾಪನೆ 1 ಕೋಟಿ ರೂ. ಸಾಲ ಸೌಲಭ್ಯವನ್ನು ನೀಡಲಾಗುತ್ತದೆ. ಇದರಲ್ಲಿ ನೀವು 5೦ ಲಕ್ಷ ರೂ. ಸಾಲದ ರೂಪದಲ್ಲಿ ಇರುತ್ತದೆ.
ಯಾವ ಯಾವ ದಾಖಲಾತಿ ಬೇಕು:
- ವಿಸ್ತೃತಾ ಯೋಜನಾ ವರದಿ
- ಭೂಮಿ ಪಹಣಿ ಪತ್ರಿಕೆ
- ಭೂಮಿ ಇಲ್ಲದವರು ಬಾಡಿಗೆ ಭೂಮಿ ಪಡೆದಿರುವುದರ ಕರಾರು ಪತ್ರ
- ಆಧಾರ್ ಕಾರ್ಡ್, ಪಾನ್ ಕಾರ್ಡ್, ವಿಳಾಸ ದೃಢಿಕರಣ ಪತ್ರ
- 6 ತಿಂಗಳ ಬ್ಯಾಂಕ್ ವಹಿವಾಟು ದಾಖಲೆ
- ತರಬೇತಿ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗುತ್ತದೆ.
ಇತರೆ ವಿಷಯಗಳು
ಕರ್ನಾಟಕ CM ಸ್ವಯಂ ಉದ್ಯೋಗ ಯೋಜನೆ.! 10 ಲಕ್ಷ ಪಡೆಯಲು ಆನ್‌ಲೈನ್ ನೋಂದಣಿ ಮಾಡಿ
ಈ ಜಿಲ್ಲೆಯ ರೈತರಿಗೆ ಬೆಳೆ ವಿಮೆ ಹಣ ಖಾತೆಗೆ ಜಮಾ! ಈ ಲಿಂಕ್ ಮೂಲಕ ಪರಿಶೀಲಿಸಿ