ಹಲೋ ಸ್ನೇಹಿತರೇ, ರಾಜ್ಯದ ಅನುತ್ತೀರ್ಣ SSLC, PUC ವಿದ್ಯಾರ್ಥಿಗಳಿಗೆ ಒಂದು ಗುಡ್ ನ್ಯೂಸ್ ಅನ್ನು ಶಿಕ್ಷಣ ಇಲಾಖೆ ನೀಡಿದೆ. ಫೇಲಾದವರು ಮತ್ತೆ ಶಾಲೆಗೆ / ಕಾಲೇಜಿಗೆ ಪ್ರವೇಶ ಪಡೆದು ಪಾಠ ಕೇಳಲು ಅವಕಾಶ ನೀಡುವ ಒಂದು ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಕರ್ನಾಟಕದಲ್ಲಿ ಸಾಕ್ಷರತಾ ಪ್ರಮಾಣವನ್ನು ಹೆಚ್ಚಳ ಮಾಡುವ ಉದ್ದೇಶದಿಂದ ರಾಜ್ಯ ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ರಾಜ್ಯದ SSLC, PUC ಫೇಲಾದವರಿಗೆ ಇದೊಂದು ಬಿಗ್ ಅಪ್‌ಡೇಟ್ ಮಾತ್ರವಲ್ಲದೇ ಒಂದು ಅನುಕೂಲಕರ ಮಾಹಿತಿ ಆಗಿದೆ. ಅದೇನೆಂದರೆ SSLC & PUC ಪಿಯುಸಿಯಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಶಾಲೆ – ಕಾಲೇಜಿಗೆ ದಾಖಲಾಗಿ ಪಾಠ ಕೇಳುವ ಅವಕಾಶವನ್ನು ಶಿಕ್ಷಣ ಇಲಾಖೆ ಕಲ್ಪಿಸಿದೆ. ಈಗಾಗಲೇ ಆಂಧ್ರ ಪ್ರದೇಶದಲ್ಲಿರುವ ಇಂತಹದೊಂದು ನಿಯಮವನ್ನು ಈಗ ಕರ್ನಾಟದಲ್ಲಿಯೂ ಇದೇ ಮೊದಲ ಬಾರಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜಾರಿಗೊಳಿಸಿದೆ.
ಕರ್ನಾಟಕದಲ್ಲಿ ಶಾಲಾ ಶಿಕ್ಷಣ, ಪದವಿ ಪೂರ್ವ & ಪದವಿ ಶಿಕ್ಷಣದಲ್ಲಿನ ಒಟ್ಟು ದಾಖಲಾತಿ ಅನುಪಾತ (JIR) ವ್ಯತ್ಯಾಸವಿದೆ. ಈ ಸಂಖ್ಯೆಯನ್ನು ಸರಿದೂಗಿಸುವ & ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಹೆಚ್ಚಳ ಮಾಡುವ ಉದ್ದೇಶದಿಂದ ಹೊಸ ನಿಯಮ ರೂಪಿಸಲಾಗಿದೆ ಎಂದು ಇಲಾಖೆ ಅಧೀನ ಕಾರ್ಯದರ್ಶಿ (ಪ್ರೌಢ ಶಿಕ್ಷಣ ) ಆದೇಶ ಹೊರಡಿಸಿದ್ದಾರೆ.
Contents
ಹೊಸ ರೂಲ್ಸ್ ಏನು ಹೇಳುತ್ತದೆ?
2023-24ನೇ ಸಾಲಿನಲ್ಲಿನ 10 & 12 ನೇ ತರಗತಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ 2024-25ನೇ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಆಯಾ ತರಗತಿಗಳಿಗೆ ಪ್ರವೇಶ ಒದಗಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದಕ್ಕೆ ಈಗ ಸರ್ಕಾರ ಅನುಮತಿ ನೀಡಿದೆ. ಒಟ್ಟು ದಾಖಲಾತಿ ಅನುಪಾತ ಸುಧಾರಿಸಲು ಪ್ರೋತ್ಸಾಹ ನೀಡುವ ಉದ್ದೇಶ ಹೊಂದಲಾಗಿದೆ.
ಪ್ರತಿವರ್ಷ 8.21 ಲಕ್ಷ ವಿದ್ಯಾರ್ಥಿಗಳು SSLC ಪರೀಕ್ಷೆ ಬರೆಯುತ್ತಾರೆ. ಇದರಲ್ಲಿ ಶೇಕಡ. 09 ಲಕ್ಷ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಾರೆ. ಪೂರಕ ಪರೀಕ್ಷೆಗೆ ಹಾಜರಾಗುವ ಸಂಖ್ಯೆಯಲ್ಲಿ ಶೇಕಡ. 45 ಉತ್ತೀರ್ಣರಾಗುತ್ತಾರೆ. ಗ್ರಾಮೀಣ / ನಗರ ವಿದ್ಯಾರ್ಥಿಗಳು, ಪರಿಶಿಷ್ಟ ಜಾತಿ / ಪಂಗಡ, ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ಪೂರಕ ಪರೀಕ್ಷೆಗಳಲ್ಲಿ ಶೇಕಡ.40 ರಿಂದ ಶೇಕಡ.45 ರ ನಡುವೆ ಇರುತ್ತದೆ. ಇಂತಹ ವಿದ್ಯಾರ್ಥಿಗಳ ಶಿಕ್ಷಣ ಇಲ್ಲಿಗೇ ಮೊಟಕುಗೊಳ್ಳಿದೆ. ಈ ವಿದ್ಯಾರ್ಥಿಗಳು ಪ್ರತ್ಯೇಕ ಕೋಚಿಂಗ್ ತರಗತಿಗಳನ್ನು ತೆಗೆದುಕೊಳ್ಳುವ ಸಾಧ್ಯತೆ ತೀರಾ ಕಡಿಮೆ ಇದೆ. ಆದ್ದರಿಂದ ಶಾಲೆ ಬಿಡುವವರನ್ನು ತಪ್ಪಿಸಬೇಕಾದರೆ, ಶೈಕ್ಷಣಿಕವಾಗಿ ಅವಕಾಶವನ್ನು ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರತ್ಯೇಕ ಕಾರ್ಯತಂತ್ರ ರೂಪಿಸಬೇಕಾಗಿದೆ.
ಅನುತ್ತೀರ್ಣರಾಗಿರುವ ವಿಷಯಕ್ಕೆ ತರಗತಿಗೆ ಹಾಜರಾಗಲು ಅವಕಾಶ
ವಿದ್ಯಾರ್ಥಿಗಳು ಮರು ದಾಖಲಾತಿ ಪಡೆದು ಕೇವಲ ತಾವು ಫೇಲ್ ಆಗಿರುವ ವಿಷಯಕ್ಕೆ ಮಾತ್ರ ಕ್ಲಾಸ್‌ಗೆ ಹಾಜರಾಗಬಹುದು / ಎಲ್ಲಾ ವಿಷಯಗಳಿಗೂ ಹಾಜರಾಗಬಹುದು. ಇದು ವಿದ್ಯಾರ್ಥಿಯ ಆಸಕ್ತಿಗೆ ಬಿಟ್ಟ ವಿಷಯವಾಗಿದೆ. ಒಂದು ವೇಳೆ ಎಲ್ಲ ವಿಷಯಗಳನ್ನು ಮೊತ್ತೊಮ್ಮೆ ಕಲಿತು ಪರೀಕ್ಷೆಗೆ ಹಾಜರಾಗಲು ಕೂಡ ವಿದ್ಯಾರ್ಥಿಗೆ ಅವಕಾಶವಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಪ್ರತಿ ವರ್ಷವು 10ನೇ ತರಗತಿ ಹಾಗೂ 2nd ಪಿಯುಸಿಯಲ್ಲಿ ಪ್ರತಿ ವರ್ಷ ಕನಿಷ್ಠ 1 ಲಕ್ಷ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಾರೆ. ಇಂತಹವರು ಬಹುತೇಕ ಶಿಕ್ಷಣ ಮೊಟಕುಗೊಳಿಸುತ್ತಾರೆ. ವಿದ್ಯಾರ್ಥಿಗಳು ಡ್ರಾಪ್‌ಔಟ್ ಆಗಬಾರದು ಎಂಬ ಉದ್ದೇಶದಿಂದ ಮರು ದಾಖಲಾತಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸಿಂಗ್ ಮಾಹಿತಿ ನೀಡಿದ್ದಾರೆ.
ರೆಗ್ಯುಲರ್ ಶಾಲಾ ವಿದ್ಯಾರ್ಥಿಗಳು SSLC ಪರೀಕ್ಷೆ 1, 2, 3 / 2nd PUC ಪರೀಕ್ಷೆ 1, 2, 3 ರಲ್ಲಿ ಅನುತ್ತೀರ್ಣರಾದಲ್ಲಿ ಮತ್ತೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶಾಲಾ ವಿದ್ಯಾರ್ಥಿಯಾಗಿ ಸರ್ಕಾರಿ ಶಾಲೆ / ಕಾಲೇಜಿನಲ್ಲಿ ಪ್ರವೇಶ ಪಡೆಯಲು ಇಚ್ಛಿಸಿದಲ್ಲಿ ಮರು ದಾಖಲಾತಿಗೆ ಅವಕಾಶ ಕಲ್ಪಿಸಬೇಕು ಎಂದು ನಿಯಮಗಳಲ್ಲಿ ಹೇಳಲಾಗಿದೆ.
ಇತರೆ ವಿಷಯಗಳು
ಮದ್ಯ ಪ್ರಿಯರಿಗೆ ಶಾಕ್ ಕೊಟ್ಟ ಸರ್ಕಾರ! ಬಿಯರ್ ದರ ಮತ್ತೆ ಏರಿಕೆ
ಮಳೆಹಾನಿ ಸಂತ್ರಸ್ತರಿಗೆ ಗುಡ್ ನ್ಯೂಸ್! ನೆರೆ ಪರಿಹಾರಕ್ಕೆ 777 ಕೋಟಿ ಹಣ ಬಿಡುಗಡೆ