rtgh
Headlines

ಕೃಷಿ ಪಂಪ್‌ಸೆಟ್‌ಗಳಿಗೆ ಸೋಲಾರ್ ಅಳವಡಿಕೆ! ಮೊದಲು ಅರ್ಜಿ ಸಲ್ಲಿಸಿದವರಿಗೆ 80% ಸಬ್ಸಿಡಿ

Solar Agricultural Pumpset Scheme
Share

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ರಾಜ್ಯ ಸರ್ಕಾರದಿಂದ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಸಹಾಯವಾಗಲು ಕೃಷಿ ಪಂಪ್‌ಸೆಟ್ ಗಳಿಗೆ ನಿರಂತರ ಹಾಗೂ ಸಮರ್ಪಕ ವಿದ್ಯುತ್ ಕಲ್ಪಿಸುವ ನಿಟ್ಟಿನಲ್ಲಿ ಶೇ. 80ರಷ್ಟು ಸಹಾಯಧನದಲ್ಲಿ ಸೋಲಾರ್ ವಿದ್ಯುತ್ ಘಟಕ ಅಳವಡಿಸಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗುತ್ತಿದೆ. ಈ ಯೋಜನೆಗೆ ಸಂಬ೦ಧಿಸಿದ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿ.

Solar Agricultural Pumpset Scheme

Contents

ಈ ಸೋಲಾರ್ ಯೋಜನೆ ಯಾವುದು?

ಸರಕಾರವು ರೈತರಿಗೆ ಕೃಷಿ ಚಟುವಟಿಕೆಗಳಿಗಾಗಿ ನಿರಂತರ ಕರೆಂಟ್ ಒದಗಿಸುವ ಉದ್ದೇಶದಿಂದ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯ ಹೆಸರು ‘ಕುಸುಮ್-ಬಿ ಯೋಜನೆ’ (Kusum B yojana) ಈ ಯೋಜನೆಯಡಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರ ಪ್ರಾಯೋಜಿತ ಯೋಜನೆಯಾಗಿದ್ದು ಅರ್ಹ ರೈತರಿಗೆ ಪ್ರಯೋಜನವನ್ನು ನೀಡಲಾಗುತ್ತದೆ.

ಇದನ್ನೂ ಸಹ ಓದಿ: ರೈಲು ನಿಲ್ದಾಣದಲ್ಲೂ ಸಿಗುತ್ತೆ ಅಗ್ಗದ ಬೆಲೆಗೆ ಅಕ್ಕಿ, ಗೋಧಿ ಹಿಟ್ಟು: 500 ನಿಲ್ದಾಣಗಳಲ್ಲಿ ಈ ಸೌಲಭ್ಯ ಜಾರಿ

ಸೌರ ಘಟಕ ಅಳವಡಿಸಲು ತಗಲುವ ವೆಚ್ಚವೆಷ್ಟು?

ಕೃಷಿ ಪಂಪ್‌ಸೆಟ್’ಗಳಿಗೆ ಸೋಲಾರ್ ಘಟಕವನ್ನು ಅಳವಡಿಸಿಕೊಳ್ಳಲು ರೈತರ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರವು ಜೋತೆಗೂಡಿ ಶೇ. 80ರಷ್ಟು ಸಹಾಯಧನವನ್ನು ನೀಡಲಿವೆ. ಇದರಲ್ಲಿ ರಾಜ್ಯ ಸರ್ಕಾರವು ಶೇ. 50ರಷ್ಟು ಸಹಾಯಧನ ಮತ್ತು ಕೇಂದ್ರ ಸರ್ಕಾರ ಶೇ. 30ರಷ್ಟು ಸಹಾಯಧನ ನೀಡಲಿವೆ. ಅಂದರೆ ರೈತರು ಭರಿಸಬೇಕಾಗಿರುವುದು ಕೇವಲ ಶೇ. 20ರಷ್ಟು ಹಣ ಮಾತ್ರ.

ಈ ರೈತರಿಗೆ ಮಾತ್ರ ಅವಕಾಶ ಸಿಗಲಿದೆ

ಆದ್ಯತೆ 1 : ರಾಜ್ಯದಲ್ಲಿ ಹಲವು ರೈತರು ಅಕ್ರಮ ಪಂಪ್‌ಸೆಟ್ ಗಳನ್ನು ಅಳವಡಿಸಲು ಯೋಜನೆಯ ಅಡಿಯಲ್ಲಿ ₹10,000ಕ್ಕಿಂತ ಅಧಿಕ ಮೊತ್ತವನ್ನು ಪಾವತಿಸಿ ಅರ್ಜಿ ಸಲ್ಲಿಸಿದ್ದಾರೆ. ಈ ರೈತರು ಕೊರೆದ ಅಥವಾ ತೆರೆದ ಬಾವಿಗಳ ಟ್ರಾನ್ಸಫಾರ್ಮೆರ್ ಕೇಂದ್ರದಿ೦ದ 500 ಮೀಟರ್’ಗಿಂತ ಹೆಚ್ಚಿನ ದೂರದಲ್ಲಿದ್ದವರಿಗೆ ಮೊದಲು ಆದ್ಯತೆ ನೀಡಲಾಗುವುದು.

ಆದ್ಯತೆ 2 : ರೈತರು ಪಂಪ್‌ಸೆಟ್ ಗಳನ್ನು ಅಳವಡಿಸಲು ಯೋಜನೆಯ ಅಡಿಯಲ್ಲಿ ನೋಂದಾಯಿಸಲು ಈಗಾಗಲೇ ರೂ. 50 ಅರ್ಜಿ ಶುಲ್ಕವನ್ನು ಪಾವತಿಸಿದ್ದು, ಇವರ ಕೊರೆದ/ತೆರೆದ ಬಾವಿಗಳು ಟ್ರಾನ್ಸ್ ಫಾರ್ಮರ್ ಕೇಂದ್ರದಿ೦ದ 500 ಮೀಟರ್ ಗಿಂತ ಹೆಚ್ಚಿನ ದೂರದಲ್ಲಿದ್ದವರಿಗೆ ಎರಡನೇ ಆದ್ಯತೆ ನೀಡಲಾಗುವುದು.

ಆದ್ಯತೆ 3 : ಪಂಪ್‌ಸೆಟ್ ಸೋಲಾರ್ ಘಟಕ ಯೋಜನೆಗೆ ಹೊಸದಾಗಿ ಅರ್ಜಿ ಸಲ್ಲಿಸುವ ರೈತರು 20% ರಷ್ಟು ಹಣವನ್ನು ಪಾವತಿಸಿದ್ದರೆ ಮತ್ತು ಕೊರೆದ ಅಥವಾ ತೆರೆದ ಬಾವಿಗಳು ಟ್ರಾನ್ಸ್ ಫಾರ್ಮರ್ ಕೇಂದ್ರದಿ೦ದ 500 ಮೀಟರ್ ಗಿಂತ ಹೆಚ್ಚಿನ ದೂರದಲ್ಲಿದ್ದವರಿಗೆ ಮೂರನೇ ಆದ್ಯತೆ ನೀಡಲಾಗುವುದು.

ಆದ್ಯತೆ 4 : ಈ ಯೋಜನೆಯಡಿಯಲ್ಲಿ ಹೊಸದಾಗಿ ಅರ್ಜಿ ಸಲ್ಲಿಸುವ ರೈತರುಗಳ ಕೊರೆದ/ತೆರೆದ ಬಾವಿಗಳು ಪರಿವರ್ಥಕ (Transformer) ಕೇಂದ್ರದಿಂದ 500 ಮೀಟರ್‌ಗಿಂತ ಒಳಗಿದ್ದು ಮತ್ತು ಹಾಗೂ ಶೇಕಡ 20 ರಷ್ಟು ಹಣ ಪಾವತಿಸುವವರಿಗೆ ನಾಲ್ಕನೇ ಆದ್ಯತೆಯಲ್ಲಿ ಹಾಗೂ ಈ ವರ್ಗದಲ್ಲಿ ನೋಂದಾಯಿಸುವ ರೈತರಿಗೆ ಮೊದಲು ನೋಂದಾಯಿಸಿದವರಿಗೆ ಮೊದಲು ನೀಡುವ ಆಧಾರದ ಮೇರೆಗೆ (First Come First Serve basis) ಅಳವಡಿಸಲಾಗುವುದು.

ಅರ್ಜಿ ಸಲ್ಲಿಸುವ ಪ್ರಕ್ರಿಯೆ?

ಕೃಷಿ ಪಂಪ್‌ಸೆಟ್ ಸೋಲಾರ್ ಘಟಕ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸುವುದಾದರೆ ಈ ಯೋಜನೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಅಥವಾ ಈ ಡೈರೆಕ್ಟ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಗತ್ಯವಿರುವ ಎಲ್ಲ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ ಅರ್ಜಿ ಸಲ್ಲಿಸಿ.

ಇತರೆ ವಿಷಯಗಳು

ಇಕೋರ್ಟ್ ನಲ್ಲಿ ಭರ್ಜರಿ ಉದ್ಯೋಗಾವಕಾಶ!! ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಉಚಿತ ಬಸ್ ಪ್ರಯಾಣಕ್ಕೆ ಅವಕಾಶ!


Share

Leave a Reply

Your email address will not be published. Required fields are marked *