rtgh
Headlines

ಲೋಕಸಭಾ ಚುನಾವಣೆಗೂ ಮುನ್ನ ನೌಕರರ ವೇತನ 25% ಹೆಚ್ಚಳ!!

Salary Increase Of Government Employees
Share

ಬೆಂಗಳೂರು: ಲೋಕಸಭೆ ಚುನಾವಣೆಯ ಸಂದರ್ಭಕ್ಕೆ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಸಿಗಲಿದೆ. 7ನೇ ವೇತನ ಆಯೋಗದ ವರದಿಯ ಜಾರಿಗೆ ಕ್ಷಣಗಣನೆ ಆರಂಭವಾಗಿದೆ, ಶೇ. 25 ರಷ್ಟು ವೇತನವು ಹೆಚ್ಚಳವಾಗಬಹುದು ಎಂದು ಹೇಳಲಾಗಿದೆ.

Salary Increase Of Government Employees

ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿಗಳಾದ ಸುಧಾಕರರಾವ್ ನೇತೃತ್ವದ ವೇತನ ಆಯೋಗದ ಅವಧಿವು ಮಾರ್ಚ್ 15ಕ್ಕೆ ಮುಕ್ತಾಯವಾಗಲಿದೆ. ಕಳೆದ ವರ್ಷ ಜೂನ್ ತಿಂಗಳಿನಲ್ಲಿ ವೇತನ ಪರಿಷ್ಕರಣೆ ಆಗಬೇಕಿತ್ತಿ ಆದರು ಸರ್ಕಾರ ಆಯೋಗದ ಅವಧಿ ಅನ್ನು 6 ತಿಂಗಳು ವಿಸ್ತರಣೆ ಮಾಡಿತ್ತು.

ಆಯೋಗದ ಅವಧಿಯು ಮುಕ್ತಾಯವಾಗುತ್ತಿರುವುದರಿಂದ ಯಾವುದೇ ಕ್ಷಣದಲ್ಲಿ ಬೇಕಾದರು ವರದಿ ಸಲ್ಲಿಕೆಯಾಗಲಿದ್ದು, ಕೇಂದ್ರ & ರಾಜ್ಯ ಸರ್ಕಾರಿ ನೌಕರರ ನಡುವೆ ಇರುವ ವೇತನದ ವ್ಯತ್ಯಾಸವನ್ನು ಸರಿಪಡಿಸಿ ಸಮಾನ ಕೆಲಸಕ್ಕೆ ಸಮಾನ ವೇತನ ಎನ್ನುವುದು ಜಾರಿಗೊಳಿಸಬೇಕೇಂಬ ಸರ್ಕಾರಿ ಉದ್ಯೋಗಿಗಳ ಒತ್ತಾಯಕ್ಕೆ ಸರ್ಕಾರ ಸ್ಪಂದಿಸುವ ಸಾಧ್ಯತೆ ಇದೆ.

ಇದನ್ನೂ ಸಹ ಓದಿ: ಉಚಿತ ಮನೆ ಯೋಜನೆಯಡಿ ₹1 ಲಕ್ಷ ಸಹಾಯಧನ! ಈ ಸುಲಭ ವಿಧಾನದಲ್ಲಿ ಅರ್ಜಿ ಸಲ್ಲಿಸಿ

7ನೇ ವೇತನ ಆಯೋಗದ ವರದಿ ಸ್ವೀಕರಿಸಿದ ಕೂಡಲೇ ಶೇ. 25% ವೇತನವನ್ನು ಹೆಚ್ಚಳ ಮಾಡಿ ಜಾರಿಗೊಳಿಸುವ ಸಾಧ್ಯತೆ ಇದೆ. ರಾಜ್ಯದಲ್ಲಿ 5.11 ಲಕ್ಷ ಸರ್ಕಾರಿ ಉದ್ಯೋಗಿಗಳು, 5.62 ಲಕ್ಷ ಪಿಂಚಣಿದಾರರು ಇದ್ದು, ಲೋಕಸಭೆಯ ಚುನಾವಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದ್ದಾರೆ.

ಮಹಾರಾಷ್ಟ್ರ ತಮಿಳುನಾಡು, ಸೇರಿ 23 ರಾಜ್ಯಗಳು ಕೇಂದ್ರದ ವೇತನ ಆಯೋಗದ ಶಿಫಾರಸುಗಳನ್ನು ಯಥಾವತ್ತಾಗಿ ಜಾರಿ ಮಾಡುತ್ತಿವೆ. ಆದರೆ, ಕರ್ನಾಟಕ, ಉತ್ತರಾಖಂಡ್, ಕೇರಳ, ಪಂಜಾಬ್ ಹಿಮಾಚಲ ಪ್ರದೇಶ, ಉತ್ತರ ಪ್ರದೇಶ ಕೇಂದ್ರದ ವೇತನ ಆಯೋಗ ಶಿಫಾರಸು ಜಾರಿ ಮಾಡುವುದಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಿ ಉದ್ಯೋಗಿಗಳ ನಡುವೆ ಶೇ. 67.55% ವೇತನದ ವ್ಯತ್ಯಾಸವಿದೆ. ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ 15ನೇ ಬಜೆಟ್ ನಲ್ಲಿ ನೌಕರರ ವೇತನಕ್ಕೆ 13,000 ಕೋಟಿ ರೂ. ಮೀಸಲಿಟ್ಟಿದ್ದಾರೆ. ಶೇ. 25 ರಷ್ಟು ವೇತನವು ಹೆಚ್ಚಳವಾಗಬಹುದು ಎನ್ನಲಾಗಿದೆ.

ಉಚಿತ ಆಧಾರ್ ಕಾರ್ಡ್‌ ಅಪ್ಡೇಟ್‌ಗೆ ಇನ್ನು 2 ದಿನ ಮಾತ್ರ ಅವಕಾಶ.! ಮಾಡಿಸದವರಿಗೆ ಇಲ್ಲಿದೆ ಡೈರೆಕ್ಟ್‌ ಲಿಂಕ್

ರೈತರಿಗೆ ಪ್ರತಿ ಎಕರೆಗೆ 10,000!! DBT ವಿಧಾನದ ಮೂಲಕ ಖಾತೆಗೆ ಹಣ ಜಮಾ


Share

Leave a Reply

Your email address will not be published. Required fields are marked *