rtgh

1 ರಿಂದ 8ನೇ ತರಗತಿಗೆ RTE ಮೂಲಕ ಪ್ರವೇಶಾತಿಗೆ ಅರ್ಜಿ ಆಹ್ವಾನ.! ಶಿಕ್ಷಣ ಇಲಾಖೆಯ ನೋಟಿಫಿಕೇಶನ್‌ ಬಿಡುಗಡೆ

RTE Karnataka Admission Application Form
Share

ಹಲೋ ಸ್ನೇಹಿತರೇ, ಕರ್ನಾಟಕದ ಖಾಸಗಿ ಶಾಲೆಗಳು & ಅನುದಾನಿತ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆ 2009 ಮೂಖಾಂತರ 1 ರಿಂದ 8ನೇ ತರಗತಿಗೆ ಪ್ರವೇಶಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

RTE Karnataka Admission Application Form

ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆಯು ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಮೂಲಕ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕೆ ಸಂಬಂಧಿಸಿದ ಪ್ರಕಟಣೆ ಹೊರಡಿಸಿ, ಅರ್ಜಿ ಆಹ್ವಾನಿಸಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ ನಲ್ಲಿ ಅರ್ಜಿ ಸಲ್ಲಿಸಲು ಈಗಾಗಲೇ ಆನ್‌ಲೈನ್‌ ಲಿಂಕ್‌ ಕೂಡ ಬಿಡುಗಡೆ ಮಾಡಲಾಗಿದೆ.

RTE ಕಾಯ್ದೆ ಪ್ರಕಾರ 1 ರಿಂದ 8ನೇ ತರಗತಿ ಪ್ರವೇಶಕ್ಕೆ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಯಲ್ಲಿ ತಮ್ಮ ಮಕ್ಕಳನ್ನು ಅಡ್ಮಿಷನ್‌ ಮಾಡಿಸಲು ಇಚ್ಛಿಸುವ ಪೋಷಕರು ಈಗ ಅರ್ಜಿ ಸಲ್ಲಿಸಬಹುದಾಗಿದೆ.

ಶಿಕ್ಷಣ ಹಕ್ಕು ಕಾಯ್ದೆ ಅನ್ವಯ ಸರ್ಕಾರಿ, ಖಾಸಗಿ, ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದಂತೆ, ಪ್ರಾರಂಭಿಕ ತರಗತಿಗಳಿಗೆ ಮಕ್ಕಳ ಪ್ರವೇಶಕ್ಕೂ ವಯಸ್ಸು ನಿಗದಿಪಡಿಸಲಾಗಿದೆ. LKG ಗೆ ಪ್ರವೇಶ ಪಡೆಯುವ ಮಕ್ಕಳಿಗೆ ಕನಿಷ್ಠ 4 ವರ್ಷವಾಗಿರಬೇಕು, 1 ನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳಿಗೆ ಕನಿಷ್ಠ 5 ವರ್ಷ 5 ತಿಂಗಳು ಮತ್ತು ಗರಿಷ್ಠ 7 ವರ್ಷ ನಿಗದಿ ಮಾಡಲಾಗಿದೆ.

2024-25ನೇ ಸಾಲಿಗೆ RTE ಪ್ರವೇಶದ ವೇಳಾಪಟ್ಟಿ

  • ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆಯ ದಿನ : 22-04-2024
  • ಅರ್ಜಿ ಪರಿಶೀಲನೆ ನಂತರ ಲಾಟ್ರಿ ಪ್ರಕ್ರಿಯೆಯಲ್ಲಿ ಅರ್ಹರ ಪಟ್ಟಿಯನ್ನು ಬಿಡುಗಡೆ ಮಾಡಲಾಗುವ ದಿನಾಂಕ : 26-04-2024
  • ಆನ್‌ಲೈನ್‌ ಮುಖಾಂತರ ಮೊದಲ ಸುತ್ತಿನ ಸೀಟು ಹಂಚಿಕೆ ದಿನಾಂಕ : 30-30-2024
  • ಮೊದಲ ಸುತ್ತಿನಲ್ಲಿ ಸೀಟುಪಡೆದುಕೊಂಡವರು ಶಾಲೆಗೆ ದಾಖಲಾತಿ ಪಡೆಯಲು ಕೊನೆಯ ದಿನ : 13-05-2024
  • ಆನ್‌ಲೈನ್‌ ತಂತ್ರಾಂಶದಲ್ಲಿ 2ನೇ ಸುತ್ತಿನ ಸೀಟು ಹಂಚಿಕೆ ದಿನ : 22-05-2024

RTE ಅಡಿ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಹೇಗೆ?

Step 1: ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಛೇರಿಯಲ್ಲಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಉಚಿತವಾಗಿ / ಸರ್ಕಾರದ ಪಾವತಿ ಕೇಂದ್ರಗಳಾದ ಬೆಂಗಳೂರು ನಗರದಲ್ಲಿ, ಬೆಂಗಳೂರು-ಒನ್‌, ಇತರೆ ನಗರ ಪ್ರದೇಶದಲ್ಲಿ ಕರ್ನಾಟಕ-ಒನ್, ತಾಲ್ಲೂಕು & ಹೋಬಳಿ ಮಟ್ಟದಲ್ಲಿ ಅಟಲ್‌ಜೀ ಜನಸ್ನೇಹಿ ಕೇಂದ್ರಗಳ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಹಾಕಬಹುದು.

Step 2: ತಂದೆ, ತಾಯಿ, ಪಾಲಕರು ಸ್ವಂತ ಮೊಬೈಲ್‌ ಫೋನ್‌ & ಇಂಟರ್‌ನೆಟ್‌ ಸೌಲಭ್ಯ ಲಭ್ಯವಿದ್ದಲ್ಲಿ ಆನ್‌ಲೈನ್‌ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.

Step 3: ಪೋಷಕರು ಸಲ್ಲಿಸಿದ ಅರ್ಜಿಯಿಂದ ನೈಜತೆ ತಾಳೆ ಆಗದ ಅಪೂರ್ಣ/ ಕ್ರಮಬದ್ಧವಲ್ಲದ ಅರ್ಜಿಗಳ ತಂದೆ ಮತ್ತು ತಾಯಿ ಪೋಷಕರ ಮೊಬೈಲಿಗೆ ದೋಷಗಳನ್ನು ಸರಿಪಡಿಸಲು SMS ಕಳುಹಿಸಲಾಗುವುದು. ಸಂಬಂಧಿಸಿದ ಪೋಷಕರು ಸಕಾಲಕ್ಕೆ ಪ್ರತಿಕ್ರಿಯಿಸುವುದು ಕಡ್ಡಾಯ.

Step 4: ಶಿಕ್ಷಣ ಹಕ್ಕು ಕಾಯಿದೆಯಡಿ ಖಾಸಗಿ ಶಾಲೆಯಲ್ಲಿ ಉಚಿತ ಸೀಟಿಗಾಗಿ ಪ್ರವೇಶ ಕೋರುವ ಮಗು & ತಂದೆ / ತಾಯಿಯ ಆಧಾರ್ ಕಾರ್ಡ್, ಜಾತಿ & ಆದಾಯ ದೃಢೀಕರಣ ಪತ್ರ ಕಡ್ಡಾಯವಾಗಿರುತ್ತದೆ.

RTE ಮೂಲಕ ಪ್ರವೇಶಾತಿಗೆ ಶಾಲೆಗಳನ್ನು ಚೆಕ್‌ ಮಾಡುವುದು ಹೇಗೆ?

  • ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ http://www.schooleducation.kar.nic.in/ ಗೆ ಭೇಟಿ ನೀಡಿ.
  • Open ಆದ home ಪೇಜ್‌ನಲ್ಲಿ’ Neighbourhood School List for RTE 2024 (Provisional) – Know My School’ ಎಂಬ ಲಿಂಕ್‌ ಮೇಲೆ ಕ್ಲಿಕ್ ಮಾಡಿಕೊಳ್ಳಿ.
  • ಮತ್ತೊಂದು ಹೊಸ ವೆಬ್‌ಪೇಜ್‌ Open ಆಗುತ್ತದೆ. ಇಲ್ಲಿ ಜಿಲ್ಲೆ, ತಾಲ್ಲೂಕು, ಗ್ರಾಮ ಆಯ್ಕೆ ಮಾಡಿಕೊಳ್ಳಿ.
  • ಆಮೇಲಿ ‘View in GIS-MAP’ ಎಂಬುದನ್ನು ಕ್ಲಿಕ್ ಮಾಡಿ.
  • ಗ್ರಾಮದ ಅಕ್ಕಪಕ್ಕದ ಶಾಲೆಗಳ ಬಗ್ಗೆ ಮಾಹಿತಿಯು GIS ಮ್ಯಾಪ್‌ನಲ್ಲಿ ಮತ್ತೊಂದು ಹೊಸ ಪೇಜ್‌ನಲ್ಲಿ Open ಆಗುತ್ತದೆ.

ಇತರೆ ವಿಷಯಗಳು

ಸರ್ಕಾರದಿಂದ ಅನ್ನಭಾಗ್ಯ ಯೋಜನೆಯ ಹಣ ಬಿಡುಗಡೆ! ಇಂತವರ ಖಾತೆಗೆ ಮಾತ್ರ ಜಮಾ

ಮೌಲಾನಾ ಆಜಾದ್ ಉಚಿತ ವಸತಿ ಶಾಲೆ ಪ್ರವೇಶ ಆರಂಭ! ಈ ದಿನಾಂಕದೊಳಗೆ ಹೆಸರು ನೋಂದಾಯಿಸಿ


Share

Leave a Reply

Your email address will not be published. Required fields are marked *