rtgh
Headlines

ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವವರಿಗೆ ಆಹಾರ ಇಲಾಖೆ ಮಹತ್ವದ ಕ್ರಮ!

Ration card online apply
Share

ಬೆಂಗಳೂರು ಒನ್, ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರಗಳ ಮೂಲಕ ಸಲ್ಲಿಸುವಂತಹ ಅರ್ಜಿಗಳನ್ನು ಮಾತ್ರವೇ ಹೊಸ ಪಡಿತರ ಚೀಟಿಗೆ ಪರಿಗಣಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ನಿರ್ಧರಿಸಿದೆ.

Ration card online apply

ಖಾಸಗಿ ಸೈಬರ್ ಕೇಂದ್ರಗಳ ಮೂಲಕ ಸಲ್ಲಿಸುವಂತ ಅರ್ಜಿಯನ್ನು ಮಾನ್ಯ ಮಾಡದಿರಲು ತೀರ್ಮಾನ ಮಾಡಲಾಗಿದೆ. ಸೈಬರ್ ಕೇಂದ್ರಗಳು ಹೊಸ ಪಡಿತರ ಚೀಟಿಯ ತಿದ್ದುಪಡಿಗೆ ಅರ್ಜಿಯನ್ನು ಸಲ್ಲಿಸುವವರಿಂದ ಹೆಚ್ಚಿನ ಹಣವನ್ನು ಪಡೆಯುತ್ತವೆ ಎಂಬ ಆರೋಪವು ಕೇಳಿ ಬಂದಿವೆ.

ಅರ್ಜಿಗಳಲ್ಲಿ ಸಾಕಷ್ಟು ಲೋಪ ದೋಷಗಳು ಕಂಡು ಬಂದಿದೆ. ಈ ಕಾರಣದಿಂದ ನಾಗರಿಕ ಸೇವಾ ಕೇಂದ್ರಗಳ ಮೂಲಕ ಸಲ್ಲಿಕೆಯಾಗುವ ಅರ್ಜಿಯನ್ನು ಮಾತ್ರ ಪರಿಗಣಿಸಲು ತೀರ್ಮಾನಿಸಲಾಗಿದೆ. ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಪಡಿತರ ಚೀಟಿಯ ಅರ್ಜಿಯನ್ನು ಆಹ್ವಾನಿಸಲು ತೀರ್ಮಾನ ಮಾಡಲಾಗಿದೆ.

ಇದನ್ನೂ ಸಹ ಓದಿ: ಇನ್ಮುಂದೆ ಗ್ಯಾಸ್ ಸಿಲಿಂಡರ್ ಪಡೆಯಲು ಈ ದಾಖಲೆ ಕಡ್ಡಾಯ! ಇಲ್ಲಿದೆ ಹೊಸ ಅಪ್ಡೇಟ್

ಹೊಸ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸುವವರು ಆನ್ಲೈನ್ ಮೂಲಕವಾಗಿ ಅರ್ಜಿಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಅರ್ಜಿ ಸಲ್ಲಿಸುವ ಪೋರ್ಟಲ್ ಸುಮಾರು ಒಂದೂವರೆ ವರ್ಷದಿಂದಲೂ ಸ್ಥಗಿತವಾಗಿದ್ದು, ಜೂನ್ 4ರ ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಜೂನ್ ಮೊದಲನೇ ವಾರದಿಂದ ವೆಬ್ ಪೋರ್ಟಲ್ ನಲ್ಲಿ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗುವುದು ಎಂದು ಹೇಳಲಾಗಿದೆ.

ನಿಮ್ಮ ಟ್ರಾಫಿಕ್ ಚಲನ್ ಅನ್ನು ಮನ್ನಾ ಮಾಡಲು ಬಯಸುತ್ತೀರಾ? ಇಂದೇ ಈ ಕೆಲಸ ಮಾಡಿ

ರಾಜ್ಯದಲ್ಲಿ ಮುಂದಿನ 5 ದಿನ ಗುಡುಗು ಸಹಿತ ಭಾರೀ ಮಳೆ! IMD ಮುನ್ಸೂಚನೆ


Share

Leave a Reply

Your email address will not be published. Required fields are marked *