ಹಲೋ ಸ್ನೇಹಿತರೇ, ಒಂದೆಡೆ ಬಿಸಿಲಿನ ಬೇಗೆ, ಮತ್ತೊಂದೆಡೆ ನೀರಿನ ಕೊರತೆಯ ಕಾರಣದಿಂದ ರಾಜ್ಯದ ಜನ ಹೈರಾಣಾಗಿ ಬಿಟ್ಟಿದ್ದಾರೆ. ಈ ಬಾರಿಯ ಬಿರು ಬೇಸಿಗೆಗೆ ಜನ ಕಂಗಾಲಾಗಿ ಹೋಗಿದ್ದು, ಯಾವಾಗ ವರುಣ ದೇವ ಕೃಪೆ ತೋರಿ ಧರೆಗಿಳಿಯುತ್ತಾನೆ ಎಂದು ಆಕಾಶದತ್ತ ಮುಖ ಮಾಡಿದ್ದಾರೆ.
ಈ ಬಾರಿ ಜನರ ನಿರೀಕ್ಷೆಗೂ ಮೊದಲೇ ನೀರಿನ ಬಿಕ್ಕಟ್ಟು ಆರಂಭವಾಗಿದೆ, ಬೆಂಗಳೂರಿನಂತಹ ಮಹಾನಗರ ಪ್ರದೇಶಗಳಲ್ಲಿ ನೀರಿಗೆ ಹಾಹಾಕಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಜನ ಮಳೆಗಾಗಿ ಕಾಯುತ್ತಿದ್ದಾರೆ. ಬಿಸಿಲಿನ ಧಗೆ ಕಡಿಮೆಯಾಗಲು ಹಾಗೂ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳದಿರಲಿ ಎಂದು ಜನ ಪ್ರಾರ್ಥಿಸುತ್ತಿದ್ದಾರೆ. ಈ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿರುವ ಜನರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ.
ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಮುಂದಿನ ಮೂರು ದಿನ ಮಳೆಯಾಗಲಿದೆ ಎಂಬ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ ಎಂದು ವರದಿಯಾಗಿದೆ. ಬಿಸಿಲಿ ಝಳಕ್ಕೆ ಕಾದಿದ್ದ ಭೂಮಿಗೆ ವರುಣ ಸದ್ಯದಲ್ಲೇ ತಂಪೆರೆಯಲಿದ್ದಾನೆ.
ರಾಜ್ಯದ ಜನತೆಗೆ ಬಿಸಿಲಿನಿಂದ ಮುಕ್ತಿ: ಇಂದಿನಿಂದ 4 ದಿನ ಭಾರೀ ಮಳೆ ಮುನ್ಸೂಚನೆ!
ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಮತ್ತು ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು, ಮೈಸೂರು, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ತಿಳಿಸಿದೆ.
ದಕ್ಷಿಣ ಮತ್ತು ಉತ್ತರ ಒಳನಾಡಿನಲ್ಲಿ ಮುಂದಿನ ಮೂರು ದಿನ ಮಳೆಯಾಗಲಿದ್ದು ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಒಣ ಹವೆ ಮುಂದುವರೆಯಲಿದ್ದು, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ ಮತ್ತು ಬೆಳಗಾವಿ, ಬೀದರ್, ಧಾರವಾಡ ಜಿಲ್ಲೆಗಳಲ್ಲಿ ಬಿಸಿಲಿನ ಝಳ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.
ಇತರೆ ವಿಷಯಗಳು:
‘ಮಾದರಿ ನೀತಿ ಸಂಹಿತೆ’ ಅಂದ್ರೆ ಏನು? ಇದನ್ನ ಮೀರಿದ್ರೆ ಏನಾಗುತ್ತೆ? ಇಲ್ಲಿದೆ ಕಂಪ್ಲೀಟ್ ಅಪ್ಡೇಟ್
ಕಾರ್ಮಿಕ ಮಂಡಳಿಯಿಂದ ₹10,000 ವಿದ್ಯಾರ್ಥಿವೇತನ.! ಪಡೆಯುವ ಸಂಪೂರ್ಣ ಡೀಟೆಲ್ಸ್