ಹಲೋ ಸ್ನೇಹಿತರೆ, ಮುಂಗಾರು ಮಳೆ ರಾಜ್ಯದಲ್ಲಿ ಜೋರಾಗಿ ಸದ್ದು ಮಾಡುತ್ತಿದೆ, ಅದರಲ್ಲೂ ಮಳೆ ಹೀಗೆ ಆರ್ಭಟ ಮಾಡುತ್ತಿರುವ ಪರಿಣಾಮ ಡ್ಯಾಂಗಳು ತುಂಬುತ್ತಿವೆ. ಮತ್ತೊಂದು ಕಡೆ ಇದೇ ರೀತಿ ಮುಂದಿನ ಹಲವು ದಿನಗಳ ಕಾಲ ಮುಂಗಾರು ಮಳೆ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದೆ ಹವಾಮಾನ ಇಲಾಖೆ. ಈ ಬಗ್ಗೆ ಹವಮಾನ ಇಲಾಖೆಯ ನೀಡಿರುವ ಮಾಹಿತಿ ಬಗ್ಗೆ ಸಂಪೂರ್ಣವಾಗಿ ತಿಳಿಯಲು ಈ ಲೇಖನವನ್ನು ಕೊನೆವರೆಗೂ ಓದಿ.
ಮುಂದಿನ 48 ಗಂಟೆ ಕಾಲ ಮಳೆಯ ಹೆಚ್ಚಾಗಲಿದೆ ಎಂದು ಅಲರ್ಟ್ ಘೋಷಣೆ ಮಾಡಲಾಗಿದೆ. ಭಾರಿ ಮಳೆ ಸುರಿಯುವ ಜಿಲ್ಲೆಗಳ ವಿವರವನ್ನು ತಿಳಿಸಲಾಗಿದೆ. ಮುಂಗಾರು ಮಳೆ ಕರ್ನಾಟಕದ ಮೂಲೆ ಮೂಲೆಯಲ್ಲೂ ಸಹ ಅಬ್ಬರಿಸುತ್ತಿದ್ದು, ಕನ್ನಡ ನಾಡು ಈಗ ಸಂಪೂರ್ಣ ಹಸಿರು ಹಸಿರಾಗಿ ಕಂಗೊಳಿಸುತ್ತಿದೆ.
ಇದನ್ನು ಓದಿ: ಇನ್ಮುಂದೆ ಸಿಮ್ ಪೋರ್ಟ್ ಮಾಡುವುದು ಸುಲಭವಲ್ಲ; ಸರ್ಕಾರದ ಹೊಸ ರೂಲ್ಸ್
ಹೀಗಿರುವಾಗ ಕರಾವಳಿ ಕರ್ನಾಟಕ ಭಾಗದಲ್ಲಿ ಮುಂದಿನ 48 ಗಂಟೆಗಳ ಕಾಲ ಭರ್ಜರಿ ಮಳೆಯಾಗುವ ಎಚ್ಚರಿಕೆಯ ಸಂದೇಶವನ್ನು ನೀಡಲಾಗಿದ್ದು. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳ ಕರಾವಳಿಯ ಭಾಗದಲ್ಲಿ ಎಚ್ಚರಿಕೆ ವಹಿಸಲಾಗಿದೆ. ಈಗಾಗಲೇ ಕಳೆದ ಹಲವು ದಿನಗಳಿಂದಲೂ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಆಗುತ್ತಿದ್ದೂ, ಮುಂದಿನ ಕೆಲವು ದಿನಗಳ ಕಾಲ ಇದೇ ರೀತಿ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗುತ್ತಿದೆ.
ಕೃಷ್ಣಾ & ಭೀಮಾ ನದಿಗಳ ಆರ್ಭಟ!
ಚಿಕ್ಕಮಗಳೂರು, ಕೊಡಗು & ಶಿವಮೊಗ್ಗ, ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಜಿಲ್ಲೆಗಳನ್ನು ಹೊರತುಪಡಿಸಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು ಜಿಲ್ಲೆಗಳನ್ನು ಸೇರಿ ರಾಮನಗರ ಹಾಗೂ ಚಾಮರಾಜನಗರ,ದಾವಣಗೆರೆ ಜಿಲ್ಲೆ, ಹಾಸನ, ತುಮಕೂರು, ಚಿಕ್ಕಮಗಳೂರಿನಲ್ಲಿ ಹಗುರ ಮಳೆ ಬೀಳಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಹಾಗೇ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲೂ ಮಳೆರಾಯ ಅಬ್ಬರಿಸುವುದು ಖಚಿತ. ಕೃಷ್ಣಾ ನದಿ ಅಚ್ಚುಕಟ್ಟು ಪ್ರದೇಶ, ಭೀಮಾ ನದಿ ಅಣೆಕಟ್ಟು ಪ್ರದೇಶದಲ್ಲಿ ಭಾರಿ ಮಳೆಯ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ.
ಇತರೆ ವಿಷಯಗಳು:
ಇನ್ಮುಂದೆ ಸಿಮ್ ಪೋರ್ಟ್ ಮಾಡುವುದು ಸುಲಭವಲ್ಲ; ಸರ್ಕಾರದ ಹೊಸ ರೂಲ್ಸ್
ಯಾತ್ರಿಕರಿಗೆ ಸಿಹಿಸುದ್ದಿ! ಆನ್ಲೈನ್ ನಲ್ಲೇ ಸಬ್ಸಿಡಿ ಪಾವತಿಗೆ ಸರ್ಕಾರ ಆದೇಶ