rtgh

ಪೌರ ಕಾರ್ಮಿಕರಿಗೆ ವಾರದಲ್ಲಿ 1 ದಿನ ರಜೆ ಘೋಷಣೆ! ರಾಜ್ಯ ಸರ್ಕಾರ ಆದೇಶ

Pourakarmikas Association
Share

ಬೆಂಗಳೂರು : ಪೌರ ಕಾರ್ಮಿಕರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ ನೀಡಿದ್ದು, ವಾರದಲ್ಲಿ 1 ದಿನ ರಜೆಯನ್ನು ಘೋಷಣೆ ಮಾಡಲು ಸರ್ಕಾರ ಆದೇಶವನ್ನು ಹೊರಡಿಸಿದೆ.

Pourakarmikas Association

State Pourakarmikas Association Archives – Urban Update

ರಾಜ್ಯದ ನಗರದ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಪ್ರಸ್ತುತ ವಾರಕ್ಕೆ 2 ಭಾರಿ ಅರ್ಧ ದಿನದ ರಜೆಯನ್ನು ನೀಡುತ್ತಿದ್ದು, ಮುಂದಿನ ದಿನಗಳಲ್ಲಿ, ಈ ಕೆಳಕಂಡ ಷರತ್ತುಗಳನ್ನು ಪೂರೈಸಿಕೊಂಡು, ವಾರದಲ್ಲಿ ಪೂರ್ತಿ 1 ದಿನಗಳ ರಜೆಯನ್ನು ಘೋಷಿಸಲು ಸರ್ಕಾರ ಅನುಮೋದನೆಯನ್ನು ನೀಡಿ ಆದೇಶವನ್ನು ಹೊರಡಿಸಿದೆ.

ನಿಬಂಧನೆಗಳು

1. ದಿನನಿತ್ಯದ ಸ್ವಚ್ಛತಾ ಕೆಲಸದ ಕಾರ್ಯಗಳಿಗೆ ತೊಂದರೆಯಾಗದಂತೆ ಶೇ.85% ರಷ್ಟು ಹಾಜರಾತಿಯನ್ನು ಖಚಿತಪಡಿಸಿಕೊಂಡು 1 ರಜೆಯನ್ನು ನೀಡಲು ತಿಳಿಸಿದೆ.

2. ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಕ್ಕೆ ಈಗಾಗಲೇ ನೇಮಕಾ ಮಾಡಿರುವ ಸಿಬ್ಬಂದಿಗೆ ವಾರದ ರಜೆಯನ್ನು ನೀಡುವ ಸಂದರ್ಭದಲ್ಲಿ ಬೇರೊಬ್ಬ ನೌಕರರನ್ನು ಸದರಿ ಕಾರ್ಯಕ್ಕೆ ನಿಯೋಜನೆ ಮಾಡುವ ಮೇರೆಗೆ ರಜೆಯನ್ನು ಅವಶ್ಯಕತೆಯಿರುವ ಪೌರಕಾರ್ಮಿಕರಿಗೆ ವಾರದಲ್ಲಿ 1 ದಿನ ರಜೆಯನ್ನು ನೀಡಲು ಅವಕಾಶವನ್ನು ಕಲ್ಪಿಸಬಹುದು.

3. ವಾರದ ರಜೆಯನ್ನು ನೌಕರರು / ಪೌರ ಕಾರ್ಮಿಕರ ಹಕ್ಕು ಎಂದು ಪರಿಗಣಿಸತಕ್ಕದ್ದಲ್ಲ ಹಾಗೂ 1 ವಾರದ 1 ರಜೆಯನ್ನು ಮುಂದಿನ ವಾರಕ್ಕೆ ಹಿಂಬಾಕಿ ಎಂದು ಪರಿಗಣಿಸಿ ಸತತವಾಗಿ ರಜೆಯನ್ನು ಪಡೆಯಲು ಅವಕಾಶವಿರುವುದಿಲ್ಲ.

4. ಸ್ಥಳೀಯ ಜಾತ್ರೆ, ಪಕೃತಿ ವಿಕೋಪ, ಸಭೆ ಸಮಾರಂಭಗಳ ವಿಶೇಷವಾದ ಸಂದರ್ಭಗಳಲ್ಲಿ ವಾರದ ರಜೆಯನ್ನು ಕಡ್ಡಾಯವಾಗಿ ನೀಡಬೇಕೆಂದು ಒತ್ತಾಯಿಸುವಂತಿಲ್ಲ ಹಾಗೂ ಈ ಸಂದರ್ಭದಲ್ಲಿ ವಾರದ ರಜೆಯನ್ನು ನೀಡುವ ಅಧಿಕಾರದ ಆಯಾ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರ ವಿವೇಚನೆಗೆ ಒಳಪಟ್ಟಿರುತ್ತದೆ.

5. ರಜೆಯ ಮೇಲೆ ತೆರಳಿದ ನೌಕರ / ಪೌರ ಕಾರ್ಮಿಕರ ವ್ಯಾಪ್ತಿಗೆ ಸೇರಿದ ಪ್ರದೇಶದ (Area) ಸ್ವಚ್ಛತಾ ಕಾರ್ಯವನ್ನು ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಹಾಜರಾಗಿರುವ ಇತರೆ ಸಿಬ್ಬಂದಿಯಿಂದ ಸ್ವಚ್ಛಗೊಳಿಸತಕ್ಕದ್ದು.

ಈ ರಾಶಿಯವರಿಗೆ ಇನ್ಮುಂದೆ ಶುಕ್ರದೆಸೆ : ಬೆನ್ನ ಹಿಂದೆಯೇ ಇರುವುದು ಅದೃಷ್ಟ

ರಾಜ್ಯದಲ್ಲಿ ಏಳನೇ ವೇತನ ಆಯೋಗ ಜಾರಿ!


Share

Leave a Reply

Your email address will not be published. Required fields are marked *