ಹಲೋ ಸ್ನೇಹಿತರೇ, ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳು ನಿರ್ದಿಷ್ಟವಾಗಿ ಮರುಕಳಿಸುವ ಠೇವಣಿಗೆ (RD), ಸಣ್ಣ ಉಳಿತಾಯಕ್ಕಾಗಿ ಅತ್ಯುತ್ತಮ ಆಯ್ಕೆಯಾಗಿದೆ. ಅವರು ಸರ್ಕಾರದ ಬೆಂಬಲದ ಭದ್ರತೆಯನ್ನು ಪಡೆದುಕೊಂಡು & ಉತ್ತಮ ಬಡ್ಡಿದರವನ್ನು ಕೂಡಾ ಕೊಡುತ್ತಾರೆ. ಪೋಸ್ಟ್ ಆಫೀಸ್‌ನ ಹೊಸ ಯೋಜನೆಯ ಬಗ್ಗೆ ನಮ್ಮ ಲೇಖನದಲ್ಲಿ ತಿಳಿಯಿರಿ.
ಈ ಪೋಸ್ಟ್ ಆಫೀಸ್ ಯೋಜನೆಗಳಲ್ಲಿ, ನಿಮ್ಮ ಹಣ ಸುರಕ್ಷಿತವಾಗಿ ಹೆಚ್ಚಾಗುತ್ತದೆ & ನಿಮ್ಮ ಹಣವನ್ನು ಉಳಿಸಲು & ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಲು ಬಯಸುವವರಿಗೆ ಇದು ಒಳ್ಳೆಯ ಆಯ್ಕೆಯಾಗಿರುತ್ತದೆ. ನಿಮ್ಮ ಆರ್ಥಿಕ ಭವಿಷ್ಯವನ್ನು ಸುರಕ್ಷಿತವಾಗಿರಿಸಿಕೊಳ್ಳಲು ಈ ಪೋಸ್ಟ್ ಆಫೀಸ್ ಸ್ಕೀಮ್‌ನ ಅವಕಾಶವನ್ನು ಕಳೆದುಕೊಳ್ಳಬೇಡಿ.
Contents
ಅಂಚೆ ಕಚೇರಿಯ ಉಳಿತಾಯ ಯೋಜನೆಯಿಂದ ಪ್ರತಿ ತಿಂಗಳು ಕೈತುಂಬ ಸಿಗುತ್ತೆ ಬಡ್ಡಿ ಹಣ
ದೇಶದ ಕೋಟ್ಯಂತರ ಜನರು ಅಂಚೆ ಕಚೇರಿ ಉಳಿತಾಯ ಯೋಜನೆಯಲ್ಲಿ ತಮ್ಮ ಹಣವನ್ನು ಹೂಡಿಕೆ ಮಾಡಿದ್ದಾರೆ & ಉತ್ತಮ ಲಾಭವನ್ನೂ ಪಡೆದುಕೊಳ್ಳುತ್ತಿದ್ದಾರೆ. ಆದರೆ ಇದೀಗ ಅಂಚೆ ಕಛೇರಿಯ ಉಳಿತಾಯ ಯೋಜನೆಯಲ್ಲಿ 9 ಲಕ್ಷ ರೂ. ಠೇವಣಿಯ ಮೇಲೆ ಪ್ರತಿ ತಿಂಗಳು 5500 ರೂ. ಬಡ್ಡಿ ದೊರೆಯಲಿದೆ / ಅದಕ್ಕಿಂತ ಹೆಚ್ಚಿನ ಆದಾಯವನ್ನೂ ನೀಡುತ್ತದೆ.
ಅಂಚೆ ಕಛೇರಿಯ ಮಾಸಿಕ ಆದಾಯ ಯೋಜನೆ:
ಅಂಚೆ ಇಲಾಖೆಯ ಮಾಸಿಕ ಆದಾಯ ಯೋಜನೆಯಲ್ಲಿ ವಾರ್ಷಿಕ ಶೇ.7.4ರಷ್ಟು ಬಡ್ಡಿ ಸಿಗುತ್ತದೆ. ಇದರಲ್ಲಿ ಗರಿಷ್ಠ 9 ಲಕ್ಷ ರೂ. ಹೂಡಿಕೆಯ ಆಧಾರದ ಮೇಲೆ, ನೀವು ಪ್ರತಿ ತಿಂಗಳು ರೂ 5500 ಬಡ್ಡಿ ಪಡೆದುಕೊಳ್ಳುತ್ತೀರಿ.
ಅಂಚೆ ಕಛೇರಿಯಲ್ಲಿ ಅನೇಕ ಉಳಿತಾಯ ಯೋಜನೆ ಇದ್ದು, ಮಾಸಿಕ ಆದಾಯ ಯೋಜನೆಯು ಹೂಡಿಕೆದಾರರಿಗೆ ಪ್ರತಿ ತಿಂಗಳು ಆದಾಯವನ್ನು ನೀಡುವ ಯೋಜನೆಯಾಗಿದೆ. ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ, ನೀವು ಏಕಾಂಗಿಯಾಗಿ ./ ನಿಮ್ಮ ಜೀವನ ಸಂಗಾತಿಯೊಂದಿಗೆ ಜಂಟಿ ಖಾತೆಯನ್ನು ಕೂಡ ಓಪನ್ ಮಾಡಬಹುದು.
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಡಿಯಲ್ಲಿ ನೀವು ಒಬ್ಬರೇ ಖಾತೆಯನ್ನು ತೆರೆದರೆ, ನೀವು ಗರಿಷ್ಠ 9 ಲಕ್ಷ ರೂ. & ಜಂಟಿ ಖಾತೆಯಲ್ಲಿ ನೀವು ಗರಿಷ್ಠ 15 ಲಕ್ಷ ರೂ. ಠೇವಣಿ ಮಾಡಬಹುದಾಗಿದೆ. ಈ ಮೊತ್ತವನ್ನು ಕನಿಷ್ಠ 5 ವರ್ಷಗಳವರೆಗೆ ಠೇವಣಿಯಲ್ಲಿ ಇರಿಸಲಿದ್ದು. ನೀವು ಠೇವಣಿ ಮಾಡಿದ ಹಣದ ಮೇಲಿನ ಬಡ್ಡಿಯಿಂದ ಪ್ರತಿ ತಿಂಗಳು ನೀವು ಆದಾಯವನ್ನು ಗಳಿಸುತ್ತೀರಿ.
ನೀವು ನಿಮ್ಮ ಜೀವನ ಸಂಗಾತಿಯೊಂದಿಗೆ ಈ ಖಾತೆಯನ್ನು ತೆರೆದರೆ & 15 ರೂ. ಲಕ್ಷವನ್ನು ಠೇವಣಿ ಮಾಡಿದರೆ, ನೀವು ಪ್ರತಿ ತಿಂಗಳು 9,250 ರೂ. ವರೆಗೆ ಹೆಚ್ಚುವರಿ ಆದಾಯವನ್ನು ಗಳಿಸಬಹುದಾಗಿದೆ. 9 ಲಕ್ಷ ರೂ. ಠೇವಣಿಯ ಮೇಲೆ ಪ್ರತಿ ತಿಂಗಳು 5500 ರೂ. ಬಡ್ಡಿ ಸಿಗುತ್ತದೆ.
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ಶೇಕಡಾ 7.4% ದರದಲ್ಲಿ ಬಡ್ಡಿಯನ್ನು ನೀಡಲಾಗುತ್ತಿದೆ. ಈ ಯೋಜನೆಯಲ್ಲಿ ಯಾವುದೇ ನಾಗರಿಕರು ಖಾತೆಯನ್ನು ತೆರೆಯಬಹುದಾಗಿದೆ. ನೀವು ಮಗುವಿನ ಹೆಸರಿನಲ್ಲಿ ಕೂಡ ಖಾತೆಯನ್ನು ಸಹ ತೆರೆಯಬಹುದು. ಜಂಟಿ ಖಾತೆಗೆ ಗರಿಷ್ಠ 3 ಜನರು ಸೇರಿಕೊಳ್ಳಬಹುದು.
ಖಾತೆ ತೆರೆಯಲು ಬೇಕಾದ ದಾಖಲೆಗಳು
ಪೋಸ್ಟ್ ಆಫೀಸ್ ಮಾಸಿಕ ಆದಾಯ ಖಾತೆಯನ್ನು ತೆರೆಯಲು, ನಿಮ್ಮ ಮನೆಯ ವಿಳಾಸ, ಫೋಟೋ, ಗುರುತಿನ ಚೀಟಿ, ಆಧಾರ್ ಕಾರ್ಡ್ & ಪ್ಯಾನ್ ಕಾರ್ಡ್ & 2 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳನ್ನು ಫಾರ್ಮ್‌ನೊಂದಿಗೆ ಹತ್ತಿರದ ಅಂಚೆ ಕಚೇರಿಯಲ್ಲಿ ಭೇಟಿ ನೀಡಬೇಕಾಗುತ್ತದೆ.
ಒಂದು ವೇಳೆ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ 5 ವರ್ಷಗಳವರೆಗೆ ಹಣವನ್ನು ಠೇವಣಿ ಮಾಡಿದ್ದರು, ಕೆಲವು ಅಗತ್ಯಗಳ ಕಾರಣಗಳಿಂದ ನೀವು ಸಮಯಕ್ಕೆ ಹಣವನ್ನು ಹಿಂಪಡೆಯಲು ಬಯಸಿದರೆ, ಖಾತೆಯನ್ನು ತೆರೆದ 1 ವರ್ಷದ ನಂತರ ಮಾತ್ರ ನೀವು ಹಣವನ್ನು ಹಿಂಪಡೆದುಕೊಳ್ಳಬಹುದಾಗಿದೆ. ಇದರಲ್ಲಿ ನೀವು ಸ್ವಲ್ಪ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಒಂದರಿಂದ 3 ವರ್ಷಗಳೊಳಗೆ ಹಣವನ್ನು ಹಿಂಪಡೆದರೆ, ಒಟ್ಟು ಠೇವಣಿಯ ಶೇಕಡಾ 2 ರಷ್ಟು ಕಡಿಮೆಯಾಗಲಿದೆ. 3 ವರ್ಷಗಳ ನಂತರ & 5 ವರ್ಷಗಳ ಮೊದಲು ಹಣವನ್ನು ಹಿಂಪಡೆಯಲು ಒಂದು ಶೇಕಡಾ ಶುಲ್ಕವನ್ನು ವಿಧಿಸಲಾಗುವುದು. ಮೆಚ್ಯೂರಿಟಿಯಲ್ಲಿ 5 ವರ್ಷಗಳನ್ನು ಪೂರ್ಣಗೊಳಿಸಿ ನಿಮ್ಮ ಸಂಪೂರ್ಣ ಹಣವನ್ನು ನೀವು ಮರಳಿ ಪಡೆಯುತ್ತೀರಿ. ಮುಕ್ತಾಯದ ನಂತರವೂ ಹಣವನ್ನು ಹಿಂಪಡೆಯಲು ಬಯಸದಿದ್ದರೆ, ಮುಂದಿನ 5 ವರ್ಷಗಳವರೆಗೆ ನೀವು ಅದನ್ನು ಮತ್ತೆ ಠೇವಣಿ ಮಾಡಬಹುದಾಗಿದೆ. ಹಾಗಾದ್ರೆ ನೀವು ಕೂಡಾ ಸಣ್ಣ ಉಳಿತಾಯ ಮಾಡಲು ಯೋಚಿಸಿದ್ರೆ ಕೂಡಲೇ ಈ ಪೋಸ್ಟ್ ಆಫೀಸ್ ಯೋಜನೆಯ ಪ್ರಯೋಜನ ಪಡೆದುಕೊಳ್ಳಿ.
ಇತರೆ ವಿಷಯಗಳು
ಉಚಿತ ಆಧಾರ್ ಕಾರ್ಡ್ ಅಪ್ಡೇಟ್‌ಗೆ ಇನ್ನು 2 ದಿನ ಮಾತ್ರ ಅವಕಾಶ.! ಮಾಡಿಸದವರಿಗೆ ಇಲ್ಲಿದೆ ಡೈರೆಕ್ಟ್ ಲಿಂಕ್
ಉಚಿತ ಮನೆ ಯೋಜನೆಯಡಿ ₹1 ಲಕ್ಷ ಸಹಾಯಧನ! ಈ ಸುಲಭ ವಿಧಾನದಲ್ಲಿ ಅರ್ಜಿ ಸಲ್ಲಿಸಿ