ಹಲೋ ಸ್ನೇಹಿತರೇ, ಸರ್ಕಾರದಿಂದ ನೀಡುವ ಹಾಸ್ಟೆಲ್ ವ್ಯವಸ್ಥೆ ಪಡೆದುಕೊಳ್ಳಬೇಕೆ.? ಹಾಗಿದ್ದರೆ ಅರ್ಜಿ ಸಲ್ಲಿಸಲು ಯಾರೆಲ್ಲಾ ಅರ್ಹರು, ಯಾವೆಲ್ಲಾ ದಾಖಲೆಗಳು ಬೇಕು, ಹೇಗೆ ಅರ್ಜಿ ಸಲ್ಲಿಸುವುದು ಎಂಬ ಎಲ್ಲಾ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ಹೆಚ್ಚಿನ ವ್ಯಾಸಂಗಕ್ಕಾಗಿ ದೂರದ ಊರಿಗೆ ಹೋಗುವ ವಿದ್ಯಾರ್ಥಿಗಳ ಅನುಕೂಲವಾಗುವ ದೃಷ್ಠಿಯಿಂದ ಸರ್ಕಾರದಿಂದ ವಸತಿ ನಿಲಯಗಳ ವ್ಯವಸ್ಥೆ ಮಾಡಲಾಗಿದೆ. ಅದಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.
Contents
Karnataka Post Matric ಹಾಸ್ಟೇಲ್ ಅಪ್ಲಿಕೇಶನ್
ಯೋಜನೆಯ ಹೆಸರು | ಮೆಟ್ರಿಕ್ ನಂತರದ ವಸತಿ ನಿಲಯದ ಪ್ರವೇಶ |
ಯಾರು ಅರ್ಜಿ ಸಲ್ಲಿಬಹುದು | ಮೆಟ್ರಿಕ್ ನಂತರದ ವಿದ್ಯಾರ್ಥಿಗಳು |
ಅರ್ಜಿ ಸಲ್ಲಿಕೆ ವಿಧಾನ | ಆನ್ಲೈನ್ |
ಲೇಖನ ವಿಭಾಗ | ಸರ್ಕಾರಿ ಯೋಜನೆ |
ಸಮಾಜ ಕಲ್ಯಾಣ ಇಲಾಖೆ & ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಪರಿಶಿಷ್ಟ ಜಾತಿ & ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಸತಿ ನಿಲಯಗಳ ಪ್ರವೇಶಕ್ಕಾಗಿ ಈಗಾಗಲೇ ಅರ್ಜಿಯನ್ನು ಆಹ್ವಾನಿಸಲಾಗಿದೆ, ಆಸಕ್ತ ವಿದ್ಯಾರ್ಥಿಗಳು ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಅಗತ್ಯ ದಾಖಲೆಗಳು:
- SSP ವಿದ್ಯಾರ್ಥಿ ID
- SSLC/ CBSE/ ICSE ನೋಂದಣಿಯ ಸಂಖ್ಯೆ
- ಜಾತಿ & ಆದಾಯ ಪ್ರಮಾಣ ಪತ್ರ RD ಸಂಖ್ಯೆ
- ವಿದ್ಯಾರ್ಥಿಯ ಆಧಾರ್ ಮಾಹಿತಿಗಳು
- ವಿದ್ಯಾರ್ಥಿಯ ಪೋಷಕರ ಆಧಾರ್ ಮಾಹಿತಿ
- ವಿದ್ಯಾರ್ಥಿಯ ಮತ್ತು ಪೋಷಕರ ಮೊಬೈಲ್ ಸಂಖ್ಯೆ
- ಇ-ಮೇಲ್ ID
- ಕಾಲೇಜು ದಾಖಲಾತಿ / ನೋಂದಣಿ ಸಂಖ್ಯೆ (University Registration Number)
- College Study Certificate
- ಹಿಂದಿನ ವರ್ಷದ ಅಂಕಗಳ ಮಾಹಿತಿ
- Passport ಗಾತ್ರದ ವಿದ್ಯಾರ್ಥಿ ಫೋಟೋ
ಅರ್ಹತೆ:
- ಪರಿಶಿಷ್ಟ ಜಾತಿ & ಪರಿಶಿಷ್ಟ ವರ್ಗಗಳ ಸಮೂದಾಯಕ್ಕೆ ಸೇರಿದ ವಿದ್ಯಾರ್ಥಿಯಾಗಿರಬೇಕು.
- ಕುಟುಂಬದ ಒಟ್ಟು ಆದಾಯ 2.5 ಲಕ್ಷ ರೂ. ಮೀರಬಾರದು.
SHP Post Matric Hostel Application Link:
ಅಧಿಕೃತ ವೆಬ್ಸೈಟ್ & ಅರ್ಜಿ ಸಲ್ಲಿಕೆ ಲಿಂಕ್: Apply ಮಾಡಿ
ಮೆಟ್ರಿಕ್ ನಂತರದ ವಸತಿ ನಿಲಯಗಳ ಪ್ರವೇಶಕ್ಕಾಗಿ ಅರ್ಹ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ. 15/3/ 2024.
ಇತರೆ ವಿಷಯಗಳು
ಗ್ರಾಮ ಪಂಚಾಯತ್ ಸೇವೆಗಳು ಮೊಬೈಲ್ನಲ್ಲಿ ಲಭ್ಯ.! ಅರ್ಜಿ ಸಲ್ಲಿಸಲು ಪಂಚಮಿತ್ರ ವಾಟ್ಸಾಪ್ ಚಾಟ್ ಬಿಡುಗಡೆ
ಕಾರ್ಮಿಕ ಕಾರ್ಡ್ ಹೊಂದಿದವರಿಗೆ ಹೊಸ ಅಪ್ಡೇಟ್.! ವಿವಿಧ ಸೌಲಭ್ಯಕ್ಕೆ ಈ ಕಾರ್ಡ್ ಪಡೆಯಲು ಅರ್ಜಿ ಆಹ್ವಾನ