ಹಲೋ ಸ್ನೇಹಿತರೇ, ಸಾಮಾನ್ಯವಾಗಿ ನಾವು ಯಾವುದೇ ಬ್ಯಾಂಕ್ / ಯಾವುದೇ ದಲ್ಲಾಳಿಗಳ ಬಳಿ ಸಾಲ ಪಡೆದುಕೊಳ್ಳಬೇಕೆಂದರೆ ನಮ್ಮ ಮನೆ ಪತ್ರ/ ನಮ್ಮ ಜಾಮೀನಿನ ಪಾತ್ರವನ್ನು ಅಡವಿಟ್ಟು ನಂತರ ಸಾಲ ಪಡೆದುಕೊಳ್ಳಬೇಕು. ಆದರೆ ಕೇಂದ್ರ ಸರ್ಕಾರವು ಈಗ ಯಾವುದೇ ಪತ್ರವನ್ನು / ಒಡವೆಯನ್ನು ಅಡವಿಡದೇ ನಿಮಗೆ ಬರೋಬ್ಬರಿ 10 ಲಕ್ಷ ರೂ. ಸಾಲವನ್ನು ನೀಡಲಿದೆ. ಕಡಿಮೆ ಬಡ್ಡಿದರದಲ್ಲಿ / ಯಾವುದೇ documents ನೀಡದೆ ಈ ಯೋಜನೆಯಡಿಯಲ್ಲಿ ಸಾಲವನ್ನು ಪಡೆಯಬಹುದಾಗಿದೆ.
Contents
ಪಿಎಂ ಮುದ್ರಾ ಯೋಜನೆಯ ಮಾಹಿತಿ
ಇದು ಭಾರತ ಸರ್ಕಾರದ ಉತ್ತಮ ಯೋಜನೆಯಲ್ಲಿ ಒಂದಾಗಿದೆ, ಈ ಯೋಜನೆಯ ಮೂಲ ಉದ್ದೇಶ ದೇಶದ ಸೂಕ್ಷ್ಮ ವ್ಯವಹಾರ ವ್ಯಾಪಾರ ಘಟಕಗಳ ಅಭಿವೃದ್ಧಿ ಮಾಡುವುದರ ಜೊತೆಗೆ ಆರ್ಥಿಕ ನೆರವು ನೀಡುವುದಾಗಿ. ಈ ಯೋಜನೆಯನ್ನು 2006 ರ ಕೇಂದ್ರ ಹಣಕಾಸು ಬಜೆಟ್ ಮಂಡನೆಯಲ್ಲಿ ಘೋಷಣೆ ಮಾಡಿತ್ತು.
3 ವಿಭಾಗಗಳಲ್ಲಿ ಪಿಎಂ ಮುದ್ರಾ ಯೋಜನೆಯ ಸಾಲ ಸಿಗುತ್ತದೆ
ಈ ಯೋಜನೆಯಲ್ಲಿ 3 ಹಂತಗಳಲ್ಲಿ ಸಾಲವನ್ನು ನೀಡಲಾಗುವುದು. ಸಾಲ ನೀಡಲು 3 ವರ್ಗಗಳು ಇದೆ. ಮೊದಲನೆಯದಾಗಿ ಶಿಶು ಸಾಲ ಯೋಜನೆ. ಈ ಯೋಜನೆಯಲ್ಲಿ 50,000 ರೂ.ಗಳ ವರೆಗೆ ಸಾಲವನ್ನು ನೀಡಲಾಗುವುದು. 2ನೇ ವರ್ಗ ಕಿಶೋರ್ ಸಾಲ ಯೋಜನೆ, ಇದರಲ್ಲಿ ನೀವು 50 ಸಾವಿರ ರೂ ನಿಂದ 5 ಲಕ್ಷ ರೂ. ವರೆಗೂ ಸಾಲವನ್ನು ನೀಡಲಾಗುವುದು. ಇನ್ನು ಕೊನೆಯದಾಗಿ ತರುಣ್ ಸಾಲ, ಇದರಲ್ಲಿ ಸಾಲವನ್ನು ಪಡೆಯಬೇಕೆಂದರೆ 5 ಲಕ್ಷ ರೂ. 10ಲಕ್ಷ ರೂ. ವರೆಗೆ ಸಾಲ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಪಿಎಂ ಮುದ್ರಾ ಯೋಜನೆಯ ಯಾವುದೇ ವಿಭಾಗದಲ್ಲಿ ಸಾಲವನ್ನು ಪಡೆದರೆ ಶೇಕಡಾ 9% ಇಂದ ಶೇಕಡಾ 12% ವರೆಗೆ ಬಡ್ಡಿ ಪಡೆಯಬೇಕು..
ಯಾರು ಯಾರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು?:
ಪಿಎಂ ಮುದ್ರಾ ಯೋಜನೆಯಲ್ಲಿ ಸಾಲವನ್ನು ಪಡೆಯಬೇಕೆಂದರೆ ನೀವು ಸಣ್ಣ ಅಂಗಡಿ ಪ್ರಾರಂಭ ಮಾಡುವ ಉದ್ದೇಶವನ್ನು ಹೊಂದಿರಬೇಕು / ಇಲ್ಲವೇ ನೀವು ವ್ಯಾಪಾರಸ್ಥರಾಗಿದ್ದರೆ. ಇಲ್ಲವೇ ಹೊಸದಾಗಿ ನಿಮ್ಮದೇ ಸ್ವಂತ ವ್ಯವಹಾರವನ್ನು ಶುರು ಮಾಡಬಹುದಾಗಿದೆ.
ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?: ಈ www.mudra.org.in ಲಿಂಕ್ಗೆ ಭೇಟಿ ನೀಡಿ ಮುಖಪುಟದಲ್ಲಿ ಕಾಣುವ ಶಿಶು, ತರುಣ, ಕಿಶೋರ್ ಎಂಬ 3 ಆಯ್ಕೆಯಲ್ಲಿ ನೀವು ಯಾವ ಅರ್ಜಿ ಹಾಕುತ್ತೀರಿ ಎಂಬುದನ್ನು ತಿಳಿದುಕೊಂಡು ಅರ್ಜಿ ನಮೂನೆಯಲ್ಲಿ ನಿಮ್ಮ ಹೆಸರು, ನಿಮ್ಮ ವಿಳಾಸ, ನಿಮ್ಮ ವ್ಯಾಪಾರದ ವಿವರಗಳು ನಿಮಗೆ ಬೇಕಾದ ಸಾಲದ ಮೊತ್ತವನ್ನು ಭರ್ತಿ ಮಾಡಿ ಅಪ್ಲೇ ಮಾಡಿ.
ಇತರೆ ವಿಷಯಗಳು
2nd ಪಿಯುಸಿ ಫಲಿತಾಂಶ ಏಪ್ರಿಲ್ 3ನೇ ವಾರದಲ್ಲಿ!!
ಶಾಲಾ ಮಕ್ಕಳಿಗೆ ಬೇಸಿಗೆ ರಜೆಯ ಮಜಾ.! ರಾಜ್ಯದಲ್ಲಿ ಎಷ್ಟು ದಿನ ರಜೆ ಇಲ್ಲಿದೆ ವೇಳಾಪಟ್ಟಿ