rtgh

ಪಿಎಂ ಕಿಸಾನ್ ಯೋಜನೆ ಹೊಸ ಅಪ್ಡೇಟ್.!‌ E-kyc ಮಾಡಿಸಿದವರ ಖಾತೆಗೆ 16 ನೇ ಕಂತಿನ ಹಣ ಜಮೆ

PM kisan samman nidhi scheme
Share

ಹಲೋ ಸ್ನೇಹಿತರೇ, ಕಿಸಾನ್ ಸಮ್ಮಾನ್ ಎನ್ನುವುದು ರೈತರಿಗೆ ಕೇಂದ್ರ ಸರ್ಕಾರ ಪ್ರತಿ ವರ್ಷ 6,000 ರೂ ಸಹಾಯಧನ ನೀಡುವ ಯೋಜನೆಯಾಗಿದೆ. ಈಗಾಗಲೇ 15 ಕಂತಿನ ಹಣ ಬಿಡುಗಡೆಯಾಗಿದೆ. ಈ 5 ತಪ್ಪು ಮಾಡದವರಿಗೆ ಮಾತ್ರ 16 ನೇ ಕಂತಿನ ಹಣ ಖಾತೆಗೆ ಜಮೆ, ಯಾವುದು ಆ 5 ತಪ್ಪುಗಳು ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

PM kisan samman nidhi scheme

ಇನ್ನೇನು ಲೋಕಸಭಾ ಚುನಾವಣೆ ಹತ್ತಿರದಲ್ಲಿ ಇದ್ದು ಈಗ ಚುನಾವಣೆಗೂ ಮೊದಲು 16 ಕಂತಿನ ಹಣ ಬಿಡುಗಡೆಯಾಗಲಿದೆ. ಆದರೆ ಈಗಾಗಲೇ ಸಾಕಷ್ಟು ಸುಳ್ಳು ಮಾಹಿತಿ ನೀಡಿ ಕಿಸಾನ್ ಯೋಜನೆಯ ಹಣ ಪಡೆದವರನ್ನು ಪಟ್ಟಿಯಿಂದ ಗುರುತಿಸಿ ಅವರನ್ನು ಯೋಜನೆಯ ಫಲಾನುಭವಿ ಪಟ್ಟಿಯಿಂದ ಹೊರಗೆ ಇಡಲಾಗಿದೆ.

ಸುಳ್ಳು ಮಾಹಿತಿಯ ನೀಡಿದವರನ್ನು ಪತ್ತೆ ಹಚ್ಚಲು ರೈತರಿಗೆ E-kyc ಮಾಡಿಸಲು ಸೂಚನೆ ನೀಡಿತ್ತು. ಆದರೆ ಕೆಲವು ರೈತರು ಈಗಲೂ ಕೆಲವು ಸಣ್ಣ ಪುಟ್ಟ ತಪ್ಪುನ್ನು ಮಾಡಿ ಯೋಜನೆಯ ಫಲಾನುಭವಿ ಪಟ್ಟಿಯಿಂದ ದೂರ ಉಳಿದುಕೊಂಡಿದ್ದಾರೆ. ಹಾಗಾದರೆ ಯಾವ ಯಾವ ತಪ್ಪುಗಳಿಂದ ರೈತರು ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿ ಪಟ್ಟಿಯಿಂದ ಹೊರಗುಳಿದಿದ್ದಾರೆ ಎಂಬುದನ್ನು ತಿಳಿಯಿರಿ.

ಇದನ್ನು ಓದಿ: ಆಧಾರ್‌ ಕಾರ್ಡ್‌ ಮತ್ತೊಂದು ಅಪ್ಡೇಟ್!!‌ ಈ ಕೆಲಸ ಮಾಡಲು ಕೊನೆಯ ದಿನಾಂಕ ನಿಗದಿ

ಈ 5 ತಪ್ಪು ಮಾಡಿದ್ರೆ ನಿಮಗೆ ಕಿಸಾನ್ ಸಮ್ಮಾನ್ ಯೋಜನೆಯ ಹಣ ಬರುವುದಿಲ್ಲ:-

ತಪ್ಪು ಬ್ಯಾಂಕ್ ಖಾತೆಯ ನೀಡುವುದು.

ಕಿಸಾನ್ ಸಮ್ಮಾನ್ ಯೋಜನೆಗೆ ಅರ್ಜಿ ಸಲ್ಲಿಕೆಯ ಸಮಯದಲ್ಲಿ ಬ್ಯಾಂಕ್ ಖಾತೆಯ ವಿವರಗಳನ್ನು ತಪ್ಪಾಗಿ ಭರ್ತಿ ಮಾಡಿದ್ದಲ್ಲಿ ನಿಮಗೆ ಕಿಸಾನ್ ಸಮ್ಮಾನ್ ಯೋಜನೆಯ ಹಣ ಬರುವುದಿಲ್ಲ. ಉದಾಹರಣೆಗೆ ನಿಮ್ಮ ಬ್ಯಾಂಕ್ ಖಾತೆಯ ಹೆಸರು ಮತ್ತು ನಿಮ್ಮ ಆಧಾರ್ ಹೆಸರು ಬೇರೆ ಇದ್ದರೆ / ಬ್ಯಾಂಕ್ ಖಾತೆಯಲ್ಲಿ ಇರುವ ವಿಳಾಸ ನೀವು ನೀಡಿದ್ದ ನಿಮ್ಮ ಅಧಿಕೃತ ವಿಳಾಸವು ಬೇರೆಯಾಗಿದ್ದು ಅದು ತಪ್ಪು ಬ್ಯಾಂಕ್ ಮಾಹಿತಿ ಎಂದು ಅಪ್ಲಿಕೇಶನ್‌ ರಿಜೆಕ್ಟ್ ಆಗುತ್ತದೆ.

ಆಧಾರ್ ಲಿಂಕ್ ಆಗದೆ ಇರುವುದು

ಯಾವುದೇ ಸರ್ಕಾರಿ ಸವಲತ್ತುಗಳನ್ನು ಪಡೆಯಬೇಕೆಂದರೆ ಮೊದಲು ನಿಮ್ಮ ಬ್ಯಾಂಕ್ ಖಾತೆಗೆ ನಿಮ್ಮ ಆಧಾರ್ ಲಿಂಕ್ ಮಾಡಿರಬೇಕು. ಆಗ ನೀವು ಕಿಸಾನ್ ಸಮ್ಮಾನ್ ಯೋಜನೆಯ ಹಣ ಬರಲು ನೀಡಿದ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗದೆಯಿದ್ದಲ್ಲಿ ನಿಮಗೆ ಮುಂದಿನ ಕಂತಿನ ಹಣ ಸಿಗುವುದಿಲ್ಲ.

E-kyc ಮಾಡಿಸದೆ ಇದ್ದಲ್ಲಿ

ಈಗಾಗಲೇ ಸರ್ಕಾರದಿಂದ ಬ್ಯಾಂಕ್ ಖಾತೆಗೆ E-kyc ಮಾಡಿಸಬೇಕು ಎಂದು ಆದೇಶವನ್ನು ಹೊರಡಿಸಿದೆ. ಆದರೆ ಅದನ್ನು ಕಡೆಗಣಿಸಿ E-kyc ಮಾಡಿಸದೆ ಇದ್ರೆ ಮುಂದಿನ ಕಂತಿನ ಹಣ ಬಾರುವುದಿಲ್ಲ.

ನೀಡಿದ ಮಾಹಿತಿಯಲ್ಲಿ ತಪ್ಪಿದ್ದರೆ

ನಿಮ್ಮ ಕೃಷಿಯ ಬಗ್ಗೆ ನೀವು ನೀಡಿದ ಯಾವುದಾದರು ಮಾಹಿತಿ ತಪ್ಪಿದ್ದರೆ / ನಿಮ್ಮ ಹೆಸರು ನಿಮ್ಮ ಬ್ಯಾಂಕ್ ಖಾತೆ ಹೆಸರು ಮತ್ತು ಆಧಾರ್ ಕಾರ್ಡನಲ್ಲಿ ಇರುವ ಹೆಸರು ಬೇರೆ ಬೇರೆಯಾಗಿದ್ದರೆ ನಿಮ್ಮ ಅಪ್ಲಿಕೇಶನ್ ರಿಜೆಕ್ಟ್ ಲಿಸ್ಟ್ ಸೇರುತ್ತದೆ.

ಮಾಹಿತಿಯೂ ಸುಳ್ಳು ಎಂದು ತಿಳಿದಲ್ಲಿ 

ಈಗಾಗಲೇ ಸುಳ್ಳು ಮಾಹಿತಿ ನೀಡಿದವರಿಗೆ ಹಣ ಬರದಂತೆ ಕ್ರಮಗಳನ್ನು ಕೈಗೊಂಡಿದ್ದಾರೆ. 16ನೇ ಕಂತಿನ ಹಣವನ್ನು ಬಿಡುಗಡೆ ಮಾಡುವ ಮೊದಲು ಮತ್ತೊಮ್ಮೆ ಎಲ್ಲವನ್ನು ಪರಿಶೀಲನೆ ಮಾಡಿ ಸುಳ್ಳು ಮಾಹಿತಿ ನೀಡಿದ ಅರ್ಜಿಗಳನ್ನು ಕಂಡುಹಿಡಿದು ಅಂತಹವರ ಖಾತೆಗೆ ಹಣ ಹೋಗದಂತೆ ತಡೆಯಲಾಗುವುದು.

ನೀವು ಸಲ್ಲಿಸಿದ ನಿಮ್ಮ ಮಾಹಿತಿಗಳು / ನಿಮ್ಮ ಕಿಸಾನ್ ಸಮ್ಮಾನ್ ಯೋಜನೆಯ ಈಗಿನ ಸ್ಥಿತಿಯನ್ನು ನೋಡಲು ಕಿಸಾನ್ ಸಮ್ಮಾನ್ ಯೋಜನೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.

ಇತರೆ ವಿಷಯಗಳು

ಹೆಣ್ಣು ಮಕ್ಕಳಿಗೆ ₹50,000 ನೀಡಲು ಕೇಂದ್ರ ಸಜ್ಜು! ಈ ದಿನದಂದು ಖಾತೆಗೆ ಬರಲಿದೆ ಹಣ

ರೈತರಿಗೆ ಸಾಲ ಮನ್ನಾ ಸುಳಿವು ನೀಡಿದ ಸರ್ಕಾರ!! ಈ ಬ್ಯಾಂಕ್‌ನಲ್ಲಿ ಖಾತೆ ಇದ್ರೆ ಮಾತ್ರ ಮನ್ನಾ

FAQ

1.ಕಿಸಾನ್ ಸಮ್ಮಾನ್ ಯೋಜನೆ ಸ್ಥಿತಿ ತಿಳಿಯಲು ಏನು ಮಾಡಬೇಕು?

ಕಿಸಾನ್ ಸಮ್ಮಾನ್ ಯೋಜನೆ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು.

2.ಎಷ್ಟು ತಪ್ಪುಗಳನ್ನು ಮಾಡಿದ್ರೆ ಕಿಸಾನ್ ಸಮ್ಮಾನ್ ಯೋಜನೆ ಹಣ ಬರುವುದಿಲ್ಲ?

5 ತಪ್ಪುಗಳನ್ನು ಮಾಡಿದರೆ ಕಿಸಾನ್ ಸಮ್ಮಾನ್ ಯೋಜನೆ ಹಣ ಬರುವುದಿಲ್ಲ.


Share

Leave a Reply

Your email address will not be published. Required fields are marked *