rtgh
Headlines

ಎಲ್ಲಾರಿಗೂ ಈ ತಿಂಗಳ ಪಿಂಚಣಿ ಹಣ ಜಮಾ! ನಿಮಗೂ ಹಣ ಬಂದಿದೆಯಾ ನೋಡಿ

Pension Scheme Amount
Share

ಹಲೋ ಸ್ನೇಹಿತರೆ, ಏಪ್ರಿಲ್ 2024, ಮಾಸಿಕ ಪಿಂಚಣಿ ಬಿಡುಗಡೆ ಮಾಡಲಾಗಿದ್ದು, ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಮಾಡಲಾಗಿದೆ. ಪಿಂಚಣಿ ನಿರ್ದೇಶನಾಲಯ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದೆ ತಿಳಿಯಲು ಈ ಲೇಖನವನ್ನು ಕೊನೆವರೆಗೂ ಓದಿ.

Pension Scheme Amount

ಕಂದಾಯ ಇಲಾಖೆಯ ಪಿಂಚಣಿ ನಿರ್ದೇಶನಾಲಯ ಪ್ರತಿ ತಿಂಗಳು ಫಲಾನುಭವಿಗಳಿಗೆ ಪಿಂಚಣಿ ಹಣವನ್ನು ಡಿಬಿಟಿ ವ್ಯವಸ್ಥೆಯ ಮೂಲಕ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತದೆ. ಪ್ರತಿ ತಿಂಗಳು 15ನೇ ತಾರೀಖಿನ ನಂತರ ಹಣ ಜಮಾ ಮಾಡುವ ಕಾರ್ಯ ಆರಂಭವಾಗುತ್ತದೆ. ಏಪ್ರಿಲ್ ತಿಂಗಳ ಹಣ ನಿಮ್ಮ ಖಾತೆಗೆ ಜಮಾ ಆಗಿದೆಯಾ, ಇಲ್ಲವೋ ಎನ್ನುವುದನ್ನು ನೀವು ಯಾವುದೇ ಬ್ಯಾಂಕ್ ಗೆ ಹೋಗದೆ ನಿಮ್ಮ ಮೊಬೈಲ್ ನಲ್ಲಿ ಆನ್ಲೈನ್ ನಲ್ಲಿ ಚೆಕ್ ಮಾಡಬಹುದು.

ಲೋಕಸಭಾ ಎಲೆಕ್ಷನ್ ಇರುವ ಕಾರಣಕ್ಕಾಗಿ ಏಪ್ರಿಲ್ ತಿಂಗಳ ಹಣವನ್ನು ಬೇಗ ಬಿಡುಗಡೆ ಮಾಡಲಾಗಿದೆ. ಜೊತೆಗೆ ಮೇ ತಿಂಗಳಲ್ಲಿಯೂ ಕೂಡ 15ನೇ ತಾರೀಕಿಗೆ ಮೊದಲೇ ಪಿಂಚಣಿ ಹಣ ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಿದೆ. ಇನ್ನು ಮೊಬೈಲ್ ನಲ್ಲಿ ನೀವು ನಿಮ್ಮ ಡಿಬಿಟಿ ಸ್ಟೇಟಸ್ ಚೆಕ್ ಮಾಡುವುದು ಹೇಗೆ ಎಂದು ತಿಳಿಸಲಾಗಿದೆ ಕೊನೆವರೆಗೂ ಓದಿ.

ಕರ್ನಾಟಕ ಡಿಬಿಟಿ ಮೊಬೈಲ್ ಅಪ್ಲಿಕೇಶನ್

  • ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿರುವ ಮೊಬೈಲ್ ಅಪ್ಲಿಕೇಶನ್ ಮೂಲಕ ನೀವು ನಿಮ್ಮ ಖಾತೆಗೆ ಹಣ ಬಂದಿರುವ ಸಂಪೂರ್ಣ ವಿವರವನ್ನು ನೀವು ನೋಡಬಹುದು.
  • ಮೊದಲನೇದಾಗಿ ನೀವು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ DBT Karnataka mobile ಅಪ್ಲಿಕೇಶನ್ ಡೌನ್ಲೋಡ್ ಮಾಡಿ.
  • ಅಪ್ಲಿಕೇಶನ್ ಡೌನ್ಲೋಡ್ ಮಾಡಿದ ನಂತರ ಮೊಬೈಲ್ ನಲ್ಲಿ Install ಮಾಡಿ. ಬಳಿಕ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು.
  • ನಿಮ್ಮ ಮೊಬೈಲ್ ಗೆ ಒಂದು ಒಟಿಪಿ ಕಳುಹಿಸಲಾಗುತ್ತದೆ ಅದನ್ನು ನಮೂದಿಸಬೇಕು.
  • ಈಗ ನಾಲ್ಕು ಅಕ್ಷರದ mPIN ರಚನೆ ಮಾಡಬೇಕು.
  • ಇದು ನಿಮ್ಮ ಪಾಸ್ವರ್ಡ್ ಆಗಿರುತ್ತದೆ. ಪ್ರತಿ ಬಾರಿ ಡಿಬಿಟಿ ಸ್ಟೇಟಸ್ ಚೆಕ್ ಮಾಡಲು ಈ ಪಾಸ್ವರ್ಡ್ ನಮೂದಿಸಬೇಕಾಗುತ್ತದೆ.
  • ಈಗ ಅಪ್ಲಿಕೇಶನ್ ನಲ್ಲಿ ನಾಲ್ಕು ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ನಾಲ್ಕನೇ ಆಯ್ಕೆಯಾದ ಪಾವತಿ ಸ್ಥಿತಿ ಾಯ್ಕೆ ಮೇಲೆ ಕ್ಲಿಕ್ ಮಾಡಿ.
  • ಇಲ್ಲಿ ನಿಮ್ಮ ಖಾತೆಗೆ ಹಣ ಜಮಾ ಆಗಿರುವ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ದರೆ ಮಾತ್ರ ಪಿಂಚಣಿ ನಿಮ್ಮ ಖಾತೆಗೆ ಹಣ ಬರುತ್ತೆ!

https://dssp.karnataka.gov.in/dssp/villageWise_list_Of_beneficiaries.aspx ಈ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಜಿಲ್ಲೆ, ತಾಲೂಕು ಇತರೆ ಮೊದಲಾದ ಮಾಹಿತಿಗಳನ್ನು ನೀಡಿದ ಬಳಿಕ ಒಂದು ಲಿಸ್ಟ್ ಕಾಣಿಸುತ್ತದೆ. ಅದರಲ್ಲಿ ನಿಮ್ಮ ಹೆಸರು ಇದ್ದರೆ ಈ ತಿಂಗಳ ಪಿಂಚಣಿ ಹಣ ನಿಮಮ್‌ ಖಾತೆಗೆ ಬಂದಿದೆ ಎಂದು ಅರ್ಥ ಅಂದರೆ ನಿಮ್ಮ ಖಾತೆಗೆ ತಪ್ಪದೇ ಪಿಂಚಣಿ ಹಣ ಜಮಾ ಆಗುತ್ತದೆ.

ಇತರೆ ವಿಷಯಗಳು:

10ನೇ ತರಗತಿ ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಭರ್ಜರಿ ನೇಮಕಾತಿ! 32 ಸಾವಿರ ಹುದ್ದೆಗಳ ಭರ್ತಿ

ಇಂದಿನಿಂದ ಗ್ಯಾಸ್‌ ಹಾಗೂ ಬ್ಯಾಂಕ್‌ ನಿಯಮದಲ್ಲಿ ಬದಲಾವಣೆ! ಸೇವಾ ಶುಲ್ಕದಲ್ಲಿ ಗಣನೀಯ ಹೆಚ್ಚಳ


Share

Leave a Reply

Your email address will not be published. Required fields are marked *