ಹಲೋ ಸ್ನೇಹಿತರೆ, ಕೆಲವೊಂದು ಸರ್ಕಾರಿ ಕೆಲಸಗಳು ಅಥವಾ ಯಾವುದೇ ಕೆಲಸಗಳು ನಡೆಯಬೇಕಾದರೆ ಕೆಲವು ದಾಖಲೆ ಪತ್ರಗಳುಅಗತ್ಯವಾಗಿ ಬೇಕಾಗುತ್ತವೆ. ಅವುಗಳು ನಮ್ಮ ಬಳಿ ಇಲ್ಲದಿದ್ದಲ್ಲಿ ಆ ಕೆಲಸ ಅರ್ಧಕ್ಕೆ ನಿಲ್ಲುತ್ತವೆ ಅಥವಾ ಅದರಿಂದಾಗಿ ನಮಗೆ ಸಾಕಷ್ಟು ನಷ್ಟ ಹಾಗೂ ತೊಂದರೆ ಆಗುವಂತಹ ಸಾಧ್ಯತೆ ಕೂಡ ಇರುತ್ತದೆ. ಅಂತಹ ಪ್ರಮುಖ ಸರ್ಕಾರಿ ದಾಖಲೆಗಳಲ್ಲಿ ಪ್ಯಾನ್ ಕಾರ್ಡ್ ಕೂಡ ಮುಖ್ಯವಾಗಿದೆ. ಈ ಬಗ್ಗೆ ಸರ್ಕಾರ ಒಂದು ಮಹತ್ತವದ ಮಾಹಿತಿ ನೀಡಿದೆ ಹೆಚ್ಚಿನ ಮಾಹಿತಿ ತಿಳಿಯಲು ಈ ಲೇಖನವನ್ನು ಕೊನೆವರೆಗೂ ತಪ್ಪದೇ ಓದಿ.
ನಿಮಗೆಲ್ಲರಿಗೆ ತಿಳಿದಿರುವ ಹಾಗೇ ಬ್ಯಾಂಕಿಂಗ್ ಹಾಗೂ ಹಣಕಾಸಿನ ವಿಚಾರದಲ್ಲಿ ಪ್ಯಾನ್ ಕಾರ್ಡ್ ಅತ್ಯಂತ ಪ್ರಮುಖವಾದ ದಾಖಲೆ ಪತ್ರವಾಗಿದೆ. ಹಣ ಹಾಗೂ ಟ್ಯಾಕ್ಸ್ ವಿಚಾರದಲ್ಲಿ ಪ್ಯಾನ್ ಕಾರ್ಡ್ ಇಲ್ಲದೆ ಯಾವುದೇ ಕೆಲಸಗಳು ಪೂರ್ಣವಾಗುವುದಿಲ್ಲ . ಇದೇ ಕಾರಣಕ್ಕಾಗಿ ಪ್ರತಿಯೊಬ್ಬರ ಬಳಿ ಕೂಡ ಪ್ಯಾನ್ ಕಾರ್ಡ್ ಇದ್ದೇ ಇರುತ್ತದೆ ಆದರೆ ಇದು ಕಳೆದು ಹೋದಾಗ ಅವರ ಚಿಂತೆ ಕೂಡ ಅಷ್ಟೇ ಹೆಚ್ಚಾಗಿ ಇರುತ್ತದೆ.
ಇದನ್ನು ಓದಿ: ರಾಜ್ಯದ ಈ 10 ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯ ಮುನ್ಸೂಚನೆ! ತಗ್ಗಿದ ತಾಪಮಾನ
ಈ ರೀತಿಯಾಗಿ ಮತ್ತೆ ಅರ್ಜಿ ಸಲ್ಲಿಸಬಹುದು:
ಕೆಲವೊಬ್ಬರ ಪ್ಯಾನ್ ಕಾರ್ಡ್ ಕಳೆದು ಹೋದಾಗ ಅದನ್ನು ಯಾವ ರೀತಿ ಮತ್ತೆ ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ ಸಾಕಷ್ಟು ಚಿಂತೆ ಇರುತ್ತದೆ. ಇನ್ಮುಂದೆ ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ ಮನೆಯಲ್ಲಿ ಕುಳಿತುಕೊಂಡಲ್ಲೇ ಮತ್ತೆ ಪ್ಯಾನ್ ಕಾರ್ಡಿಗೆ ಅರ್ಜಿ ಸಲ್ಲಿಸಿ ಪಡೆಯಬಹುದಾಗಿದೆ. NSDL ವೆಬ್ ಸೈಟ್ ನಲ್ಲಿ ಇದನ್ನು ಮಾಡಿಸುವಾಗ ಕೆಲವೊಂದು ಪ್ರಮುಖ ಮಾಹಿತಿಗಳನ್ನು ನೀವು ನೀಡಬೇಕಾಗಿರುತ್ತದೆ.
ಇಲ್ಲಿ ಪ್ಯಾನ್ ಕಾರ್ಡ್ ನಂಬರ್ ಮತ್ತು ಆಧಾರ್ ಕಾರ್ಡ್ ನಂಬರ್ ಮಾಹಿತಿಯನ್ನು ನೀಡಿದ ನಂತರ ನೀವು ಸಬ್ಮಿಟ್ ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗಿರುತ್ತದೆ. ಈ ಸಂದರ್ಭದಲ್ಲಿ ನೀವು ಪಾನ್ ಕಾರ್ಡ್ ಡುಪ್ಲಿಕೇಟ್ ಮಾಡುವಂತಹ ಆಯ್ಕೆ ಅನ್ನು ಕ್ಲಿಕ್ ಮಾಡಬೇಕಾಗುತ್ತದೆ. ಇದಾದ ನಂತರ ತಮ್ಮ ಮೊಬೈಲ್ ನಂಬರ್ ಅನ್ನು ಹಾಕಲಿ ನೀವು ಸಬ್ಮಿಟ್ ಮಾಡಬೇಕಾಗಿರುತ್ತದೆ.
ಈಗ ಕೊನೆಯಲ್ಲಿ ನೀವು ಡ್ಯೂಪ್ಲಿಕೇಟ್ ಪ್ಯಾನ್ ಕಾರ್ಡ್ ಪಡೆಯಲು 50 ರೂಪಾಯಿಗಳ ಶುಲ್ಕವನ್ನು ಕಟ್ಟಬೇಕಾಗುತ್ತದೆ. ಇದಾದ ನಂತರ ನಿಮ್ಮ ಡುಪ್ಲಿಕೇಟ್ ಪ್ಯಾನ್ ಕಾರ್ಡ್ ನಿಮ್ಮ ಕೈಗೆ ಬಂದು ಸೇರುತ್ತದೆ. ಮೊದಲು ಇರುವಂತಹ ಪ್ಯಾನ್ ಕಾರ್ಡ್ ನಂಬರ್ ಇದರಲ್ಲಿ ಇರುತ್ತದೆ ಇದು ಕೇವಲ ಕಳೆದು ಹೋಗಿರುವ ಕಾರಣಕ್ಕಾಗಿ ನಿಮ್ಮ ಕೈಗೆ ಬಂದು ಸೇರಿರುವಂತಹ ಡ್ಯೂಪ್ಲಿಕೇಟ್ ಪ್ಯಾನ್ ಕಾರ್ಡ್ ಆಗಿರುತ್ತದೆ ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ.
ಇತರೆ ವಿಷಯಗಳು:
ಸರ್ಕಾರದ ಅಪ್ಡೇಟ್: ರೈತರ ಖಾತೆಗೆ ₹4,000 ಜಮಾ ಕಾರ್ಯ ಆರಂಭ!!
ಬರ ಪರಿಹಾರದ ಮೂರನೇ ಕಂತಿನ ಹಣ ಬಿಡುಗಡೆ ಡೇಟ್ ಫಿಕ್ಸ್!