ಹಲೋ ಸ್ನೇಹಿತರೆ, ಆಸ್ತಿ ಹೊಂದಿರುವವರ ಗಮನಕ್ಕೆ ಬಿಬಿಎಂಪಿ ಘೋಷಿಸಿದ್ದ ಒಂದು ಬಾರಿ ತೀರುವಳಿ ಯೋಜನೆಯು ಇದೇ ತಿಂಗಳು ಜುಲೈ 31ಕ್ಕೆ ಮುಕ್ತಾಯಗೊಳ್ಳಲಿದೆ. ಈ ಯೋಜನೆ ಅಡಿಯಲ್ಲಿ ಬಾಕಿ ಇರುವ ಸಂಪೂರ್ಣ ಬಡ್ಡಿಯನ್ನು ಸಹ ಮನ್ನಾ ಮಾಡಲಾಗುತ್ತಿದೆ. ಬೆಂಗಳೂರಿನ ನಾಗರಿಕರು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಿ.
Contents
ಆನ್ಲೈನ್ ಮೂಲಕ ತೆರಿಗೆ ಪಾವತಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ಆಸ್ತಿ ತೆರಿಗೆ ಎಷ್ಟು ಪಾವತಿಸಬೇಕಿದೆ? ಎಲ್ಲಿ ಪಾವತಿಸಬೇಕು ಎಂಬ ಬಗ್ಗೆ ಗೊಂದಲಗಳಿದ್ದಲ್ಲಿ ಸಹಾಯವಾಣಿ 1533 ಗೆ ಕರೆ ಮಾಡಿ ಸಂಭಂದಿಸಿದ ಮಾಹಿತಿ ಪಡೆದುಕೊಳ್ಳಬಹುದು ಎಂದು ಪ್ರಕಟಣೆ ಹೊರಡಿಸಿದೆ.
ಈ ಸುವರ್ಣಾವಕಾಶವು ಜುಲೈ 31 2024 ರಂದು ಕೊನೆಗೊಳ್ಳಲಿದೆ. ಜೀವಮಾನದಲ್ಲಿ ಒಮ್ಮೆ ಮಾತ್ರ ಈ ಯೋಜನೆಗೆ ಅವಕಾಶವಿದ್ದು, ಇದರ ವಿಸ್ತರಣೆ ಮತ್ತೆ ಇರುವುದಿಲ್ಲ. ಇಲ್ಲಿಯವರೆಗೆ 4 ಲಕ್ಷ ಆಸ್ತಿ ಮಾಲೀಕರ ಪೈಕಿ ಸುಮಾರು 50,000 ಜನರು ಮಾತ್ರ ಈ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಈ ಸುವರ್ಣಾವಕಾಶವನ್ನು ಬಳಸಿಕೊಂಡು ನಿಮ್ಮ ಸ್ವತ್ತಿನ ಬಾಕಿ ಆಸ್ತಿತೆರಿಗೆಯನ್ನು ಪಾವತಿಸಬೇಕೆಂದು ಕೋರುತ್ತೇನೆ.
BBMP ಕಾಯ್ದೆಯಲ್ಲಿ ಆಸ್ತಿತೆರಿಗೆ ಬಾಕಿ ವಸೂಲಾತಿ ಮಾಡಲು ಅವಕಾಶವಿದ್ದು ಆದಾಗ್ಯೂ, ಒಟಿಎಸ್ ನಾಗರಿಕರಿಗೆ ಸಹಾಯ ಮಾಡಲು ಸರ್ಕಾರ ಮತ್ತು ಬಿಬಿಎಂಪಿಯೂ ಜೊತೆಯಾಗಿ ಸೇರಿ ಕಾರ್ಯನಿರ್ವಹಿಸಲಿದೆ. ನಾಗರಿಕರು https://bbmptax.karnataka.gov.in ಮೂಲಕ ಆನ್ಲೈನ್ ನಲ್ಲಿ ಆಸ್ತಿತೆರಿಗೆಯನ್ನು ಸುಲಭವಾಗಿ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಒಟಿಎಸ್ ಪ್ರಕಾರ ಆಸ್ತಿ ತೆರಿಗೆ ಬಾಕಿಗಳನ್ನು ಈಗಾಗಲೇ ಕಡಿಮೆ ಮಾಡಲಾಗಿದ್ದು, ಆಗಸ್ಟ್ 1, 2024 ರಿಂದ ಮತ್ತೆ ಹೆಚ್ಚಾಗಲಿದೆ.
ಇತರೆ ವಿಷಯಗಳು:
ಕಾರ್ಮಿಕರ ಖಾತೆಗೆ ಪ್ರತಿ ತಿಂಗಳು ₹3000.! ಹೊಸ ಪಿಂಚಣಿ ಯೋಜನೆ ಜಾರಿ
ಬೆಳೆ ಪರಿಹಾರದ 3ನೇ ಕಂತಿನ ಹಣ ಜಮಾ.! ಈಗಲೇ ಚೆಕ್ ಮಾಡಿ ನಿಮ್ಮ ಖಾತೆ