ಹಲೋ ಸ್ನೇಹಿತರೇ, ದಿನನಿತ್ಯ ವಸ್ತುಗಳ ಬೆಲೆ ಏರಿಕೆಯಲ್ಲಿರುವ ಜನಸಾಮಾನ್ಯರಿಗೆ ಬಿಗ್ ಶಾಕ್ ಎದುರಾಗಿದ್ದು, ಈರುಳ್ಳಿ, ಬೆಳ್ಳುಳ್ಳಿ ಬೆಲೆ ಹೆಚ್ಚಳವಾಗುತ್ತಿದೆ. ಹಬ್ಬಗಳು ಸಮೀಪಿಸುತ್ತಿರುವ ನಡುವೆ ಈರುಳ್ಳಿ ಬೆಲೆ ಕೆಜಿಗೆ 70 ರೂ ಸಮೀಪಿಸಿದ್ದು, ಬೆಳ್ಳುಳ್ಳಿ 400 ರ ಗಡಿ ದಾಟಿದೆ.
ವೆಜ್ ಇರಲಿ, ನಾನ್ ವೆಜ್ ಇರಲಿ ಈರುಳ್ಳಿ, ಬೆಳ್ಳುಳ್ಳಿ ಬೇಕೇ ಬೇಕು. ತರಕಾರಿ ತರಲು ಹೋದ ಜನರು ಈರುಳ್ಳಿ, ಬೆಳ್ಳುಳ್ಳಿ ತರಲು ಹಿಂದೇಟು ಹಾಕುತ್ತಿದ್ದಾರೆ. ಗೌರಿ ಗಣೇಶ ಹಬ್ಬದ ವೇಳೆಗೆ ಇನ್ನಷ್ಟು ದರ ಹೆಚ್ಚಾಗುವ ಸಾಧ್ಯತೆಯಿದೆ.
ಧಾರಾಕಾರ ಮಳೆಯಿಂದಾಗಿ ಕೆಲವೆಡೆ ಬೆಳೆ ನಾಶವಾಗಿದ್ದರಿಂದ ಸದ್ಯ ಬೆಳ್ಳುಳ್ಳಿಯ ಬೆಲೆ ಪ್ರತಿ ಕೆ.ಜಿಗೆ 400 ರೂಪಾಯಿ ಇದೆ. ಕೊಳೆ ರೋಗ ಬಂದು ಈರುಳ್ಳಿ ಇಳುವರಿ ಕಡಿಮೆಯಾದ ಪರಿಣಾಮ ಸದ್ಯ ಬೆಲೆ ಹೆಚ್ಚು ಆಗಿದ್ದು ಕೆ.ಜಿಗೆ 60-70 ರೂಪಾಯಿ ಇದೆ. ಮುಂದಿನ ದಿನಗಳಲ್ಲಿ ಈರುಳ್ಳಿ ಬೆಲೆ ಇನ್ನಷ್ಟು ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ.
ಇದೇ ಅವಧಿಯಲ್ಲಿ ಶುಂಠಿ ಬೆಲೆ ಹಿಂದೆಂದೂ ಕಾಣದ ರೀತಿಯಲ್ಲಿ ಕೆಜಿಗೆ 80 ರೂ.ಗೆ ಏರಿಕೆಯಾಗಿದ್ದು, ಇದೀಗ ಕೆಜಿಗೆ 300 ರೂ.ಗೆ ಮಾರಾಟವಾಗುತ್ತಿದೆ. ಬಳ್ಳಾರಿ, ಕುನ್ನೂರು ಮತ್ತು ನಾಸಿಕ್ನಂತಹ ಪ್ರಮುಖ ಪ್ರದೇಶಗಳಲ್ಲಿ ಈರುಳ್ಳಿ ರೈತರ ಮೇಲೆ ತೀವ್ರ ಪರಿಣಾಮ ಬೀರಿರುವ ಅಕಾಲಿಕ ಮತ್ತು ಅತಿಯಾದ ಮಳೆಯಿಂದಾಗಿ ಕೊರತೆಯು ಪ್ರಾಥಮಿಕವಾಗಿ ಕಾರಣವಾಗಿದೆ.
ಇದನ್ನೂ ಸಹ ಓದಿ : ಮಹಿಳೆಯರಿಗೆ ಸಿಹಿ ಸುದ್ದಿ! 50 ಸಾವಿರ ರೂ. ಸಾಲದ ಜೊತೆ 25 ಸಾವಿರ ಸಬ್ಸಿಡಿ
ಬೆಳ್ಳುಳ್ಳಿಯೂ ದುಬಾರಿ:
ಈರುಳ್ಳಿ ಮಾತ್ರವಲ್ಲದೆ ಬೆಳ್ಳುಳ್ಳಿ ದರ ಕೂಡ ಕೆಜಿಗೆ 400 ರೂ.ಗೆ ಏರಿಕೆಯಾಗಿದೆ. ಇದಕ್ಕೂ ಅತಿವೃಷ್ಟಿಯೇ ಕಾರಣ ಎನ್ನಲಾಗಿದೆ. ಬುಧವಾರ ಮಾರುಕಟ್ಟೆಯಲ್ಲಿ ಕೇಜಿಗೆ 400 ರೂ. ದರವಿತ್ತು. ಕಳೆದ ಡಿಸೆಂಬರ್, ಜನವರಿ ವೇಳೆಗೆ ಬೆಳ್ಳುಳ್ಳಿ ಕೆಜಿಗೆ ದಾಖಲೆಯ 500ವರೆಗೆ ಏರಿಕೆಯಾಗಿ ಬಳಿಕ 280, 250 ರೂ.ವರೆಗೆ ಇಳಿಕೆಯಾಗಿತ್ತು.
ಕರ್ನಾಟಕಕ್ಕೆ ಮಧ್ಯಪ್ರದೇಶ ಹಾಗೂ ರಾಜಸ್ಥಾನದಿಂದಲೇ ಬೆಳ್ಳುಳ್ಳಿ ಪೂರೈಕೆಯಾಗುತ್ತಿದೆ. ಆ ರಾಜ್ಯಗಳಲ್ಲಿ ಮಳೆ ಹೆಚ್ಚಾಗಿ ಬೆಳ್ಳುಳ್ಳಿ ಉತ್ಪಾದನೆ ಕುಸಿತವಾಗಿರುವುದೇ ದರ ಹೆಚ್ಚಳಕ್ಕೆ ಕಾರಣ. ಬೆಳ್ಳುಳ್ಳಿ ದರ ಕೆಜಿಗೆ 450 ರೂ.ವರೆಗೂ ಏರಿಕೆಯಾಗಬಹುದು ಎಂದು ವ್ಯಾಪಾರಿಗಳು ಅಂದಾಜಿಸಿದ್ದಾರೆ.
ಈರುಳ್ಳಿ, ಬೆಳ್ಳುಳ್ಳಿ ಜತೆಗೆ ತರಕಾರಿಗಳ ಬೆಲೆ ಕೂಡ ಕೊಂಚ ಜಾಸ್ತಿಯಾಗಿದೆ. ಇದೆ ರೀತಿ ಮಳೆ ಜಾಸ್ತಿಯಾದರೆ ತರಕಾರಿಗಳ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಇತರೆ ವಿಷಯಗಳು:
ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರ..! SSLC & 2nd PUC ವಿದ್ಯಾರ್ಥಿಗಳಿಗೆ ಹೊಸ ನಿಯಮ
ʻHSRPʼ ನಂಬರ್ ಪ್ಲೇಟ್ ಅಳವಡಿಸಲು ಸೆ.15 ಕೊನೆಯ ದಿನ! ಇಲ್ಲದಿದ್ದರೆ ದಂಡ ಫಿಕ್ಸ್
ಬಿಯರ್ ಪ್ರಿಯರಿಗೆ ದರ ಹೆಚ್ಚಳದ ಬಿಸಿ! ಪ್ರೀಮಿಯಂ ಮದ್ಯದ ದರ ಇಳಿಕೆ