rtgh
Headlines

UPI ಪೇಮೆಂಟ್ಸ್ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದೀರಾ? ಹಾಗಿದ್ದರೆ NPCI ನ ಹೊಸ ನಿಯಮ ತಿಳಿಯಿರಿ

npci new rules
Share

ಹಲೋ ಸ್ನೇಹಿತರೇ, UPI ಪೇಮೆಂಟ್ಸ್ ಅಪ್ಲಿಕೇಶನ್‌ಗಳು ಈಗ ಭಾರತದಲ್ಲಿ ಹೆಚ್ಚಿನ ಜನರು ಬಳಸುತ್ತಿರುವ ಮೊಬೈಲ್ ಅಪ್ಲಿಕೇಷನ್‌ ಆಗಿದ್ದು, ಕೆಲವೇ ನಿಮಿಷದಲ್ಲಿ ಖಾತೆಯಿಂದ UPI ಪೇಮೆಂಟ್ಸ್ ಮೂಲಕ ಹಣ ವರ್ಗಾವಣೆ ಮಾಡಲು / ಬೇರೆಯವರಿಂದ ಹಣ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಈಗ ಹೊಸದಾಗಿ NPCI ಪಾವತಿ ಮಾಡಲು ಕೆಲವು ನಿಬಂಧನೆಯನ್ನು ಹೇರಲು ಮುಂದಾಗಿದೆ. NPCI ನ ಹೊಸ ನಿಯಮಗಳೇನು ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

npci new rules

Contents

ಮಾರುಕಟ್ಟೆಯಲ್ಲಿ ಹೆಚ್ಚು ಬಳಸುವ UPI ಪೇಮೆಂಟ್ಸ್ ಅಪ್ಲಿಕೇಶನ್ ಯಾವುವು ?

UPI ಮೂಲಕ ಹಣ ಪಾವತಿ ಮಾಡಲು ನೂರಾರು ಅಪ್ಲಿಕೇಶನ್‌ಗಳಿವೆ. ಆದರೆ ಸದ್ಯದ ಮಾರುಕಟ್ಟೆಯ ಸರ್ವೇ ಪ್ರಕಾರ ದೇಶದ ಅತಿ ಹೆಚ್ಚಾಗಿ 2 ಪೇಮೆಂಟ್ ಅಪ್ಲಿಕೇಶನ್‌ಗಳು ಹೆಚ್ಚಿನ ಜನರು ಬಳಸುತ್ತಿದ್ದಾರೆ. ಅವು ಯಾವುವು ಎಂದರೆ ಫೋನ್ ಪೇ & ಗೂಗಲ್ ಪೇ. ಇವೆರಡೂ ಅಪ್ಲಿಕೇಶನ್‌ಗಳನ್ನು ಜನರು ಹೆಚ್ಚಾಗಿ ನಂಬುವ & ಬಳಸುವ ಅಪ್ಲಿಕೇಶನ್‌ಗಳಾಗಿವೆ.. ದೇಶದ 80% ಜನರು ಈ ಎರಡು ಅಪ್ಲಿಕೇಶನ್‌ಗಳನ್ನು ಬಳಸುತ್ತಾರೆ ಎಂದು ವರದಿ ತಿಳಿಸಿದೆ. ಇದನ್ನು ಗಮನದಲ್ಲಿಟ್ಟು ಮಾರುಕಟ್ಟೆಯ ಸಮತೋಲನ ತರುವ ಉದ್ದೇಶದಿಂದ ಕೆಲವು ಹೊಸ ನಿಯಮಗಳನ್ನು ಜಾರಿಗೆ ತರಲು NPCI ತಿಳಿಸಿದೆ.

NPCI ಜಾರಿಗೆ ತರಬಹುದಾದ ನಿಯಮಗಳು ಏನು? 

ಈಗ ನಾವು ಬಳಸುವ UPI ಪೇಮೆಂಟ್ಸ್ ನಿತ್ಯ ಇಷ್ಟೇ ಹಣ ಪಾವತಿಸಬೇಕು ಅಂತ ಯಾವುದೇ ನಿಯಮವಿಲ್ಲಾ. ಅದೇ ಕಾರಣದಿಂದ ನಾವು ಎಲ್ಲಾ ಕಡೆಯಲ್ಲಿ UPI ಬಳಸುತ್ತಿದ್ದೇವೆ. ಇದನ್ನು ಗಮನಿಸಿದ NPCI ಈಗ ಒಬ್ಬರು ಮಾಡಬಹುದಾದ ವಹಿವಾಟಿನ ಸಂಖ್ಯೆಯ ಮೇಲೆ ಗರಿಷ್ಠ ಮಿತಿಯನ್ನು ಹೇರಲು ಮುಂದಾಗಿದೆ. ಇದು ಜಾರಿಗೆ ಬಂದರೆ ನಾವು ನಿಯಮಿತ ಹಣವನ್ನು ಮಾತ್ರ ಪಾವತಿಸಲು ಸಾಧ್ಯವಾಗುವುದು.

UPI ಪ್ಲಾಟ್‌ಫಾರ್ಮ್‌ಗಳ ಮೂಲಕ ಡಿಜಿಟಲ್ ಪಾವತಿಗಳ ಮಿತಿಗೊಳಿಸುವಿಕೆಯ ನಕಾರಾತ್ಮಕ ಪರಿಣಾಮ

  • UPI ಪ್ಲಾಟ್‌ಫಾರ್ಮ್‌ಗಳ ಮೂಲಕ ಡಿಜಿಟಲ್ ಪಾವತಿಯನ್ನು ಮಿತಿಗೊಳಿಸಿದರೆ, ಸಣ್ಣ ವ್ಯಾಪಾರಗಳ ಮೇಲೆ ಪರಿಣಾಮ ಬೀರುತ್ತದೆ. ಏಕೆಂದರೆ, ಅವರಿಗೆ ಡಿಜಿಟಲ್ ಪಾವತಿಗಳನ್ನು ಸ್ವೀಕರಿಸಲು ಕಷ್ಟವಾಗಲಿದೆ.
  • UPI ಪ್ಲಾಟ್‌ಫಾರ್ಮ್‌ಗಳ ಮೂಲಕ ಡಿಜಿಟಲ್ ಪಾವತಿಗಳನ್ನು ಕಡಿಮೆಗೊಳಿಸುವುದರಿಂದ, ಜನರಿಗೆ ತೊಂದರೆ ಉಂಟಾಗುತ್ತದೆ. ಏಕೆಂದರೆ, ಅವರಿಗೆ ದೊಡ್ಡ ಮೊತ್ತದ ಪಾವತಿಗಳನ್ನು ಮಾಡಲು ನಗದು / ಇತರ ಪಾವತಿ ವಿಧಾನವನ್ನು ಅನುಸರಿಸಬೇಕಾಗುತ್ತದೆ.
  • UPI ಪ್ಲಾಟ್‌ಫಾರ್ಮ್‌ಗಳ ಮೂಲಕ ಡಿಜಿಟಲ್ ಪಾವತಿಯನ್ನು ಕಡಿಮೆಗೊಳಿಸುವುದರಿಂದ, ಡಿಜಿಟಲ್ ಪಾವತಿಗಳ ಬಳಕೆ ಕಡಿಮೆಯಾಗುತ್ತದೆ. ಏಕೆಂದರೆ, ಜನರ ನಗದು ಪಾವತಿ ಮಾಡುವ ಸಾಧ್ಯತೆ ಇರಲಿದೆ.

ಇತರೆ ವಿಷಯಗಳು

ಅನ್ನದಾತರಿಗೆ ಭರ್ಜರಿ ಆಫರ್.‌!! ಸೋಲಾರ್‌ ಪಂಪ್‌ ಸಬ್ಸಿಡಿ ಇಲ್ಲಿಂದಲೇ ಲಭ್ಯ

ಕೃಷಿ ಮಾಡುವ ರೈತರಿಗೆ ಸರ್ಕಾರದಿಂದ 10 ಲಕ್ಷ ಸಹಾಯಧನ.! ಈ ಯೋಜನೆಗೆ ಅಪ್ಲೇ ಮಾಡಿ


Share

Leave a Reply

Your email address will not be published. Required fields are marked *