rtgh
Headlines

ಏಪ್ರಿಲ್‌ 1 ರಿಂದ ಹೊಸ APL, BPL ಕಾರ್ಡ್‌ ವಿತರಣೆ.! ಅರ್ಜಿ ಸಲ್ಲಿಸಿದವರು ಈ ಕೇಂದ್ರಕ್ಕೆ ಭೇಟಿ ನೀಡಿ

new ration card distribution
Share

ಹಲೋ ಸ್ನೇಹಿತರೇ, ಕರ್ನಾಟಕದಲ್ಲಿ ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಿ ಕಾಯುತ್ತಿದ್ದವರಿಗೆ ಸರ್ಕಾರ ಒಳ್ಳೆ ಸುದ್ದಿ ನೀಡಿದೆ, ಏಪ್ರಿಲ್‌ 1 ರಿಂದ APL, BPL ಕಾರ್ಡ್‌ ವಿತರಣೆ ಮಾಡಲಾಗುತ್ತದೆ. ಮಾರ್ಚ್‌ 31ರೊಳಗೆ ಎಲ್ಲಾ ಪರಿಶೀಲನೆ ನಡೆಸಲಾಗುತ್ತದೆ. ಅದಲ್ಲದೇ ತುರ್ತು ಕಾರಣಗಳಿಗಾಗಿ ಅರ್ಜಿ ಸಲ್ಲಿಸಿದವರಿಗೆ ತಕ್ಷಣ ರೇಷನ್‌ ಕಾರ್ಡ್‌ಗಳನ್ನು ನೀಡಿದ್ದೇವೆ ಎಂಬ ಮಾಹಿತಿಯನ್ನು ನೀಡಲಾಗಿದೆ.

new ration card distribution

Contents

ಆಹಾರ & ನಾಗರಿಕ ಸರಬರಾಜು ಇಲಾಖೆ

ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ ಕಾಯುತ್ತಿರುವ ರಾಜ್ಯದ ಜನತೆಗೆ ಆಹಾರ & ನಾಗರಿಕ ಸರಬರಾಜು ಇಲಾಖೆ ಸಚಿವರಾದ ಕೆಎಚ್‌ ಮುನಿಯಪ್ಪ ಸಿಹಿಸುದ್ದಿ ತಿಳಿಸಿದ್ದಾರೆ. ಏಪ್ರಿಲ್‌ 1 ರಿಂದ ರಾಜ್ಯಾದ್ಯಂತ APL, BPL ಕಾರ್ಡ್‌ಗಳನ್ನು ವಿತರಿಸಲಾಗುತ್ತದೆ. ಪಡಿತರ ಚೀಟಿಗಾಗಿ ಅರ್ಜಿಯನ್ನು ಮಾರ್ಚ್‌ 31ರೊಳಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಸಚಿವರು ಮಾಹಿತಿ ತಿಳಿಸಿದ್ದಾರೆ.

ಗುರುವಾರ ನಡೆದ ವಿಧಾನಸಭೆಯ ಕಲಾಪದಲ್ಲಿ ಪ್ರಶ್ನೋತ್ತರದ ವೇಳೆ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ & ವಿರೋಧ ಪಕ್ಷದ ನಾಯಕ ಆರ್‌ ಅಶೋಕ್‌ ಕೇಳಿದ ಪ್ರಶ್ನೆ ಉತ್ತರ ನೀಡಿದ ಅವರು, ಪಡಿತರ ಚೀಟಿಗೆ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಮಾರ್ಚ್ 31 ರೊಳಗೆ ಪರಿಶೀಲನೆ ಮಾಡಿ ಕಾರ್ಡ್‌ಗಳನ್ನು ವಿತರಿಸುವ ತೀರ್ಮಾನವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಆದೇಶ ಹೊರಡಿಸಲಾಗಿದೆ. ಈ ಕೆಲಸ ಮುಗಿದ ನಂತರ ಹೊಸ BPL ಕಾರ್ಡ್‌ಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

APL, BPL ಕಾರ್ಡ್‌ ವಿತರಣೆ

ವಿಧಾನಸಭೆ ಚುನಾವಣೆ ಬಂತು ಎಂದು ಹಿಂದಿನ ಸರ್ಕಾರ 2.95 ಲಕ್ಷ ಕಾರ್ಡ್‌ಗಳನ್ನು ವಿತರಿಸದೆ ಬಾಕಿ ಉಳಿಸಿತ್ತು. ಆದರೆ, ನಾವು ಇಲ್ಲಿಯವರೆಗೆ 57,000 ಹೊಸ ಕಾರ್ಡ್‌ಗಳನ್ನು ವಿತರಿಸಿದ್ದೇವೆ. ಆರೋಗ್ಯ ಚಿಕಿತ್ಸೆಗಾಗಿ ಅರ್ಜಿ ಸಲ್ಲಿಸಿದವರಿಗೆ ಮಾತ್ರ ತಕ್ಷಣ ಕಾರ್ಡ್ಗಳನ್ನು ವಿತರಿಸಲು ಸೂಚಿಸಲಾಗಿದೆ. ಆರೋಗ್ಯ ತುರ್ತು ಕಾರಣಕ್ಕೆ 744 ಜನರಿಗೆ BPL ಕಾರ್ಡ್ ಕೊಟ್ಟಿದ್ದೇವೆ ಎಂದು ತಿಳಿಸಲಾಯಿತು.

ಈ ವೇಳೆ ನಯನಾ ಮೋಟಮ್ಮನವರ ಪ್ರಶ್ನೆಗೆ ದನಿಗೂಡಿಸಿದ ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್, BPL ಕಾರ್ಡ್ ಕೊಡುವುದನ್ನು ರಾಜ್ಯ ಸರ್ಕಾರ ನಿಲ್ಲಿಸಿದೆ. ಸರ್ವರ್ ಡೌನ್ ಅದೂ ಇದೂ ಸಾಕಷ್ಟು ಸಮಸ್ಯೆಗಳನ್ನು ಹೇಳುತ್ತಿದ್ದೀರಿ. 5 ಗ್ಯಾರಂಟಿಗಳಿಗೆ ಫಲಾನುಭವಿಗಳ ಸಂಖ್ಯೆಯು ಹೆಚ್ಚಾಗಬಾರದು ಎಂದು BPL ಕಾರ್ಡ್ ಕೊಡುತ್ತಿಲ್ವಾ? ಇದುವರೆಗೆ ಎಷ್ಟು BPL ಕೊಟ್ಟಿದ್ದೀರಿ ತಿಳಿಸಿ ಎಂದು ಸಚಿವರನ್ನು ಪ್ರಶ್ನೆ ಮಾಡಿದ್ದಾರೆ.

ಬೆಳೆ ನಷ್ಟಕ್ಕೆ ಪರಿಹಾರವಾಗಿ ರೈತರಿಗೆ 22,500 ರೂ ನಿಗದಿ.! ತೋಟಗಾರಿಕ ಬೆಳೆಗೆ NDRF ಮಾರ್ಗಸೂಚಿ ಅನ್ವಯ

ಯುವ ನಿಧಿ ಯೋಜನೆಯಲ್ಲಿ ದಿಢೀರ್ ಬದಲಾವಣೆ! ಇನ್ಮುಂದೆ ಹಣ ಪಡೆಯಲು ಈ ಕೆಲಸ ಕಡ್ಡಾಯ

1.ಆರೋಗ್ಯ ತುರ್ತು ಕಾರಣಕ್ಕೆ ಎಷ್ಟು ಜನರಿಗೆ ಕಾರ್ಡ್‌ ವಿತರಣೆ ಮಾಡಲಾಯಿತು.

744 ಜನರಿಗೆ ವಿತರಣೆ ಮಾಡಲಾಯಿತು.

2.ಆಹಾರ & ನಾಗರಿಕ ಸರಬರಾಜು ಇಲಾಖೆ ಸಚಿವರು ಯಾರು?

ಕೆಎಚ್‌ ಮುನಿಯಪ್ಪ.


Share

Leave a Reply

Your email address will not be published. Required fields are marked *