rtgh

ಮಾರ್ಚ್‌ 25 ರಿಂದ SSLC ಪರೀಕ್ಷೆ ಆರಂಭ.! ಎಕ್ಸಾಮ್ ಹಾಲ್‌ಗೆ ಶಿಕ್ಷಣ ಮಂಡಳಿಯ ಹೊಸ ರೂಲ್ಸ್

new guidelines for sslc exam
Share

ಹಲೋ ಸ್ನೇಹಿತರೇ, ಎಲ್ಲಾ ವಿದ್ಯಾರ್ಥಿಗಳ ಜೀವನದಲ್ಲಿ ಎಸೆಸೆಲ್ಸಿ ಒಂದು ಮುಖ್ಯ ಘಟ್ಟ . SSLC ಯಲ್ಲಿ ಪಡೆವ ಅಂಕಗಳ ಆಧಾರದ ಮೇಲೆ ಮುಂದಿನ ಶಿಕ್ಷಣದ ಬದುಕು ನಿಂತಿದೆ. ಹೆಚ್ಚಿನ ಸ್ಕೋರ್‌ನ್ನು ಪಡೆದುಕೊಂಡರೆ ಉತ್ತಮ ಗುಣಮಟ್ಟದ ಕಾಲೇಜ್ ಗೆ ಹೋಗಲು ಸಾಧ್ಯ. SSLC Exam ವ್ಯವಸ್ಥೆಯಲ್ಲಿ ಏನು ಹೊಸ ಬದಲಾವಣೆಯಾಗಿದೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

new guidelines for sslc exam

ಈಗ ಶಿಕ್ಷಣ ಇಲಾಖೆಯು ಹೊಸದಾಗಿ SSLC ಎಕ್ಸಾಮ್ ಹಾಲ್ ಗೆ ಹೊಸ ರೂಲ್ಸ್ ಬಿಡುಗಡೆ ಮಾಡಿದೆ.

ಕರ್ನಾಟಕ ಶಾಲಾ ಶಿಕ್ಷಣ ಮೌಲ್ಯಮಾಪನ ಮಂಡಳಿಯ ಹೊಸ ನಿಯಮ 

ಮಾರ್ಚ್ 25 ರಿಂದ ಆರಂಭವಾಗುವ SSLC ಪರೀಕ್ಷೆಯಲ್ಲಿ ನಕಲು ತಡೆಗಟ್ಟಲು ಕರ್ನಾಟಕ ಶಾಲಾ ಶಿಕ್ಷಣ ಮೌಲ್ಯಮಾಪನ ಮಂಡಳಿ ಕೆಲವು ಕ್ರಮಗಳನ್ನು ಕೈಗೊಂಡಿದೆ ಎಲ್ಲಾ ಜಿಲ್ಲೆಗಳ ಉಪ ನಿರ್ದೇಶಕರಿಗೆ ಡೆಸ್ಕ್‌ನ್ನು ಗೋಡೆಗೆ ಜೋಡಿಸಲು ಸೂಚನೆಯನ್ನು ನೀಡಲಾಗಿದೆ.

ಮಂಡಳಿಯ ನಿರ್ದೇಶಕರಾದ ಎಚ್.ಎನ್.ಗೋಪಾಲಕೃಷ್ಣ ಅವರು ಪತ್ರಿಕಾ ಹೇಳಿಕೆಯಲ್ಲಿ ಈ ಕ್ರಮದಿಂದ ನಕಲು ತಡೆಗಟ್ಟುವುದರ ಜೊತೆಗೆ, ಪರೀಕ್ಷಾ ಕೊಠಡಿಗೆ ವಿಕ್ಷಣ ದಳ ಪ್ರವೇಶಿಸಿದಾಗ ವಿದ್ಯಾರ್ಥಿಗಳ ಗಮನ ಸೆಳೆಯುವುದನ್ನು ತಪ್ಪಿಸಬಹುದು. ಗೋಡೆಗೆ ಮುಖ ಮಾಡಿ ಕುಳಿತಿದ್ದರೆ, ಯಾರು ಬಂದು ಹೋದರೂ ವಿದ್ಯಾರ್ಥಿಗಳ ಗಮನಕ್ಕೆ ಬರುವುದಿಲ್ಲ. ಹೀಗಾಗಿ ಈ ಸೂಚನೆಗಳನ್ನು ನೀಡಲಾಗಿದೆ ಎಂದು ಹೇಳಿದರು.

SSLC ಪರೀಕ್ಷೆಯ ವೇಳಾಪಟ್ಟಿ :-

  • 25.03.2024 ಸೋಮವಾರ – ಪ್ರಥಮ ಭಾಷೆ – ಕನ್ನಡ, ಇಂಗ್ಲಿಷ್, ಸಂಸ್ಕೃತ, ತೆಲುಗು, ಹಿಂದಿ, ಮರಾಠಿ ತಮಿಳು, ಉರ್ದು, ಪರೀಕ್ಷಾ ಸಮಯ ಬೆಳಗ್ಗೆ 10.15 ರಿಂದ ಮಧ್ಯಾಹ್ನ 1 .
  • 27.03.2024 ಬುಧವಾರ – ಸಮಾಜ ವಿಜ್ಞಾನ .
  • 30.03.2024 ಶನಿವಾರ – ವಿಜ್ಞಾನ, ರಾಜ್ಯಶಾಸ್ತ್ರ ಸಮಯ ಹಿಂದೂಸ್ತಾನ ಸಂಗೀತ, ಕರ್ನಾಟಕ ಸಂಗೀತ, ಸಮಯ – ಮಧ್ಯಾಹ್ನ 2.00 ರಿಂದ ಸಂಜೆ 5.15
  • 02.04.2024 ಮಂಗಳವಾರ – ಗಣಿತ , ಸಮಾಜ ಶಾಸ್ತ್ರ.
  • 03.04.2024 ಬುಧವಾರ – ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕಲ್ ಎಂಜಿನಿಯರ್ , ಎಲಿಮೆಂಟ್ಸ್ ಆಫ್ ಮೆಕಾನಿಕಲ್ and ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಪ್ರೋಗ್ರಾಮಿಂಗ್ ಇನ್ ASNI ‘c’, ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್ , ಅರ್ಥಶಾಸ್ತ್ರ –ಬೆಳಗ್ಗೆ 10.15 ರಿಂದ ಮಧ್ಯಾಹ್ನ 1 ಗಂಟೆ ಮತ್ತು ಇಂಜಿನಿಯರಿಂಗ್ ಗ್ರಾಫಿಕ್ಸ್ -2 ಮಧ್ಯಾಹ್ನ 2.00 ರಿಂದ ಸಾಂಜೆ 5.15 .
  • 04.04.2024 ಗುರುವಾರ – ತೃತೀಯ ಭಾಷೆ – ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು ಮತ್ತು ಎನ್. ಎಸ್. ಕ್ಯೂ . ಎಫ್ ವಿಷಯಗಳು (ಮಾಹಿತಿ ತಂತ್ರಜ್ಞಾನ, ರಿಟೇಲ್, automobile, helath care, ಬ್ಯೂಟಿ ಅಂಡ್ ವೆಲ್ನೆಸ್, ಎಲೆಕ್ಟ್ರಾನಿಕ್ and ಹಾರ್ಡ್ವೇರ್ – ಸಮಯ ‌ಬೆಳಗ್ಗೆ 10.15 ರಿಂದ ಮಧ್ಯಾಹ್ನ 1 ಗಂಟೆ.
  • 06.04.2024 – ದ್ವಿತೀಯ ಭಾಷೆ – ಇಂಗ್ಲಿಷ್ , ಕನ್ನಡ ಸಮಯ ‌ಬೆಳಗ್ಗೆ 10.15 ರಿಂದ ಮಧ್ಯಾಹ್ನ 1 ಗಂಟೆ.

ಇತರೆ ವಿಷಯಗಳು

13 ಲಕ್ಷ ರೈತರಿಗೆ 1,400 ಕೋಟಿ ಬೆಳೆ ವಿಮೆ ಪರಿಹಾರ ವರ್ಗಾವಣೆ.! ಈ ಯೋಜನೆಯಡಿ ಅರ್ಜಿ ಸಲ್ಲಿಸಿದವರಿಗೆ ಮಾತ್ರ

ಕೇಂದ್ರ ಪ್ರೌಢಶಿಕ್ಷಣ ಮಂಡಳಿಯಲ್ಲಿ ನೇಮಕಾತಿ.! ವಿವಿಧ ಹುದ್ದೆಗೆ ಅರ್ಜಿ ಆಹ್ವಾನ.! ಆಸಕ್ತರು ಅಪ್ಲೇ ಮಾಡಿ


Share

Leave a Reply

Your email address will not be published. Required fields are marked *