rtgh

ಕೇಂದ್ರದ ಹೊಸ ಗ್ಯಾರಂಟಿ ಸ್ಕೀಮ್.! ಈಗಲೇ ಅರ್ಜಿ ಸಲ್ಲಿಸಿ; ಇಲ್ಲಿದೆ ಡೀಟೇಲ್ಸ್

New Guarantee Scheme of the Centre
Share

ಹಲೋ ಸ್ನೇಹಿತರೇ, ರಾಜ್ಯದಲ್ಲಿ ಬಹುತೇಕ ಎಲ್ಲರಿಗೂ 200 ಯೂನಿಟ್ ಗಳವರೆಗೆ ಉಚಿತ ವಿದ್ಯುತ್ ಅನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿದೆ. ಆದರೆ ಇದು ಪ್ರತಿಯೊಬ್ಬರಿಗೂ ಲಭ್ಯವಾಗುವ ಯೋಜನೆ ಅಲ್ಲ. ಈ ಯೋಜನೆಯ ಬಗ್ಗೆ ಹೆಚ್ಚಿನ ವಿವರವನ್ನು ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ. ಹೀಗಾಗಿ ತಪ್ಪದೇ ಈ ಸುದ್ದಿಯನ್ನು ಕೊನೆವರೆಗೂ ಓದಿ ಮತ್ತು ನಿಮ್ಮ ಸ್ನೇಹಿತರಿಗೂ ಶೇರ್‌ ಮಾಡಿ.

New Guarantee Scheme of the Centre

ಸಾಕಷ್ಟು ಮನೆಗಳು ಹೆಚ್ಚಿಗೆ ವಿದ್ಯುತ್ ಬಳಕೆ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಅವರಿಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ ಅಪ್ಲೈ ಆಗುವುದಿಲ್ಲ. ಹಾಗಾಗಿಯೇ ಪ್ರತಿ ತಿಂಗಳು 2000 ರಿಂದ 3000ಗಳನ್ನು ಪಾವತಿ ಮಾಡಲೇಬೇಕು. ಆದ್ರೆ ಇನ್ಮುಂದೆ ಟೆನ್ಶನ್ ಬೇಡ ನೀವು ಕೂಡ ಉಚಿತ ವಿದ್ಯುತ್ ಪಡೆದುಕೊಳ್ಳಬಹುದು, ಅದು ನೀವೇ ವಿದ್ಯುತ್ ಉತ್ಪಾದನೆಯನ್ನು ಮಾಡುವುದರ ಮೂಲಕ ಪಡೆದುಕೊಳ್ಳಬಹುದಾಗಿದೆ.

ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆ

ಆತ್ಮ ನಿರ್ಭರ ಭಾರತ ನಿರ್ಮಾಣದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ಜನರ ಹಿತಾಸಕ್ತಿ ಕಾಯ್ದುಕೊಳ್ಳುವಂತಹ ಸಾಕಷ್ಟು ಯೋಜನೆಗಳನ್ನು ಪರಿಚಯಿಸಿದ್ದಾರೆ. ಅವುಗಳಲ್ಲಿ ಸೂರ್ಯನ ಶಕ್ತಿಗಳನ್ನು ಬಳಸಿಕೊಂಡು ನೀವೇ ಸ್ವತಃ ವಿದ್ಯುತ್ ಅನ್ನು ತಯಾರಿಸಬಹುದಾದ ಸೂರ್ಯೋದಯ ಯೋಜನೆ ಕೂಡ ಒಂದು. ಇದರಿಂದ ನೀವು ಜೀವನಪರ್ಯಂತ ಉಚಿತ ವಿದ್ಯುತ್ ಪಡೆದುಕೊಳ್ಳಲು ಸಾಧ್ಯವಿದೆ ಹೇಗೆ ಎನ್ನುವ ವಿವರವನ್ನು ನೋಡೋಣ.

ಮನೆಯಲ್ಲಿ ಸ್ಥಾಪಿಸಿ ಸೋಲಾರ್ ಪ್ಯಾನೆಲ್

ನೀವು ನಿಮ್ಮ ಮನೆಯ ಮೇಲ್ಚಾವಣಿಯ ಮೇಲೆ ಸೋಲಾರ್ ಪ್ಯಾನೆಲ್ ಅಳವಡಿಸುವುದರ ಮೂಲಕ 300 ಯೂನಿಟ್ ಬರಕೆ ಉಚಿತ ವಿದ್ಯುತ್ ಪಡೆದುಕೊಳ್ಳಬಹುದು. ಅಷ್ಟೇ ಅಲ್ಲ ಹೆಚ್ಚಿನ ವಿದ್ಯುತ್ ತಯಾರಿಕೆ ಮಾಡಿ ವಿದ್ಯುತ್ ಸರಬರಾಜು ಕಂಪನಿ ಗಳಿಗೆ ಮಾರಾಟ ಮಾಡಲು ಕೂಡ ಅವಕಾಶ ಇದೆ. ಇದರಿಂದ ನೀವು ಕನಿಷ್ಠ 15,000 ಪ್ರತಿ ತಿಂಗಳು ಗಳಿಸುವುದಕ್ಕೆ ಸಾಧ್ಯವಾಗುತ್ತದೆ.

ಸೋಲಾರ್ ಪ್ಯಾನೆಲ್ ಅನ್ನು ಅಳವಡಿಸಲು ಸರ್ಕಾರದಿಂದ ಸಬ್ಸಿಡಿಯನ್ನು ಪಡೆದುಕೊಳ್ಳಬಹುದು. ಶೇಕಡ 40% ವರೆಗೆ ಸರ್ಕಾರವು ಸಬ್ಸಿಡಿ ಪಡೆದುಕೊಂಡು ಉಳಿದ ಹಣವನ್ನು ನೀವು ಬ್ಯಾಂಕ್ ನಲ್ಲಿ ಸಾಲವಾಗಿ ಪಡೆಯಬಹುದಾಗಿದೆ.

ಒಮ್ಮೆ ಸೋಲಾರ್ ಪ್ಯಾನೆಲ್ ನ್ನು ನಿಮ್ಮ ಮನೆಯ ಮೇಲ್ಚಾವಣಿಯ ಮೇಲೆ ಅಳವಡಿಸಿದರೆ ಮುಂದಿನ 25 ವರ್ಷಗಳವರೆಗೆ ಅದರ ಪೆಯೋಜನವನ್ನು ನೀವು ಪಡೆದುಕೊಳ್ಳಬಹುದಾಗಿದೆ. ಬ್ಯಾಂಕ್ ಗಳಲ್ಲಿ ಸಾಲವನ್ನು ತೆಗೆದುಕೊಂಡರೆ 5-6 ವರ್ಷಗಳಲ್ಲಿ ಆ ಹಣ ತೀರಿಸಬಹುದು. ಬಳಿಕ 20 ವರ್ಷಗಳ ವರೆಗೆ ಸಂಪೂರ್ಣ ಉಚಿತ ವಿದ್ಯುತ್ ಅನ್ನು ನೀವು ಪಡೆದುಕೊಳ್ಳಬಹುದಾಗಿದೆ.

ಕಾರ್ಮಿಕ ಕಾರ್ಡ್‌ ಹೊಂದಿದವರಿಗೆ ಹೊಸ ಅಪ್ಡೇಟ್.!‌ ವಿವಿಧ ಸೌಲಭ್ಯಕ್ಕೆ ಈ ಕಾರ್ಡ್ ಪಡೆಯಲು ಅರ್ಜಿ ಆಹ್ವಾನ

ಸೌರ ವಿದ್ಯುತ್ ಸ್ಥಾಪಿಸಲು ಬೇಕಾಗಿರುವ ದಾಖಲೆ:

ನಿಮ್ಮ ಮನೆಯ ಮೇಲ್ಚಾವಣಿಯ ಮೇಲೆ 10 ಚದರ್ ಮೀಟರ್ ನಷ್ಟು ಖಾಲಿ ಜಾಗ ಬೇಕು ಸೋಲಾರ್ ಪ್ಯಾನೆಲ್ ಅಳವಡಿಸಲು. ಒಂದು ಕಿಲೋ ವ್ಯಾಟ್ ಸೋಲಾರ್ ಪ್ಯಾನೆಲ್ ಅಳವಡಿಸುವುದಕ್ಕೆ ಯಾವುದೇ ವೆಚ್ಚವು ಇರುವುದಿಲ್ಲ. 1 – 3 ಕಿಲೋ ವ್ಯಾಟ್ ಸೌರ ಫಲಕ ಅಳವಡಿಸಲು ಸರ್ಕಾರ 40% ವರೆಗೆ ಸಹಾಯಧನ ನೀಡುತ್ತಿದೆ. ಗರಿಷ್ಠ 78,000ಗಳ ಸಹಾಯಧನವನ್ನು ಪಡೆಯಬಹುದು.

ಸೌರ ಫಲಕ ಅಳವಡಿಸಲು ಬೇಕಾಗಿರುವ ದಾಖಲೆ:

ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕಿನ ಕೆವೈಸಿ ಡೀಟೇಲ್ಸ್, ರೇಷನ್ ಕಾರ್ಡ್, ಮೊಬೈಲ್ ಸಂಖ್ಯೆ, ಪಾಸ್ಪೋರ್ಟ್ ಅಳತೆಯ ಫೋಟೋ, ಮೇಲ್ಚಾವಣಿಯ ಬಗ್ಗೆ ವಿವರ, ವಿಳಾಸದ ಪುರಾವೆ.

ಸೋಲಾರ್ ಪ್ಯಾನೆಲ್ ಸಬ್ಸಿಡಿಗೆ ಅರ್ಜಿ ಸಲ್ಲಿಸುವುದು ಹೇಗೆ?

https://pmsuryaghar.gov.in ಈ ಅಧಿಕೃತ ವೆಬ್ ಸೈಟ್‌ ಗೆ ಭೇಟಿ ನೀಡಿ. ಮೊದಲು ಮುಖಪುಟದಲ್ಲಿ ಕಾಣುವ ಸೋಲಾರ್ ಪ್ಯಾನೆಲ್ ಸಬ್ಸಿಡಿಗಾಗಿ ಅರ್ಜಿ ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ. ಅಲ್ಲಿ ಕಾಣಿಸುವ ಕ್ಯೂಆರ್ ಕೋಡ್ ಸ್ಕಾನ್ ಮಾಡಿ SANDES ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.

ಈಗ ನೀವು ಎಷ್ಟು ವ್ಯಾಟ್ ನ ಸೋಲಾರ್ ಅಳವಡಿಸಲು ಬಯಸುತ್ತೀರಿ ಎನ್ನುವುದರ ಆಯ್ಕೆ ಮಾಡಿಕೊಳ್ಳಿ. ವಿವರವನ್ನು ಭರ್ತಿ ಮಾಡಿದ ಅನಂತರ ನಿಮ್ಮ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ. ಅದನ್ನ ನಮೂದಿಸಿ ಬಳಿಕ ಸರಿಯಾದ ವಿವರ ಮತ್ತು ದಾಖಲೆಗಳನ್ನು ನೀಡಿ ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಿ.

ಮಾರ್ಚ್‌ 25 ರಿಂದ SSLC ಪರೀಕ್ಷೆ ಆರಂಭ.! ಎಕ್ಸಾಮ್ ಹಾಲ್‌ಗೆ ಶಿಕ್ಷಣ ಮಂಡಳಿಯ ಹೊಸ ರೂಲ್ಸ್

ಸರ್ಕಾರದ ಭರ್ಜರಿ ಆಫರ್.!!‌ ಹಸು, ಕುರಿ, ಕೋಳಿ ಸಾಕಾಣಿಕೆಗೆ ಸಿಗಲಿದೆ 50% ಸಹಾಯಧನ


Share

Leave a Reply

Your email address will not be published. Required fields are marked *