ಹಲೋ ಸ್ನೇಹಿತರೇ, ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ಸಿಗುವ ವಿಶ್ವ ಪ್ರಸಿದ್ಧ ತಿರುಪತಿ ಪ್ರಸಾದವಾದ ಲಡ್ಡುಗೆ ಮತ್ತೆ ಕರ್ನಾಟಕದ ಹೆಮ್ಮೆಯ ನಂದಿನಿ ತುಪ್ಪ ಪೂರೈಕೆಯಾಗಲಿದೆ. ನಂದಿನಿ ಉತ್ಪನ್ನ ಹಾಗೂ ನಂದಿನಿ ತುಪ್ಪಕ್ಕೆ ಕೇವಲ ಕರ್ನಾಟಕ ಮಾತ್ರವಲ್ಲ ದೇಶದ ವಿವಿಧ ರಾಜ್ಯಗಳಲ್ಲಿ ಬೇಡಿಕೆ ಇದೆ. ನಂದಿನಿ ಉತ್ಪನ್ನಗಳಲ್ಲಿ ಗುಣಮಟ್ಟ ಹಾಗೂ ರುಚಿ, ಶುಚಿಯನ್ನು ಕಾಪಾಡಿಕೊಂಡಿರುವುದು ಸಹ ಇದಕ್ಕೆ ಕಾರಣ.
Contents
ತಿರುಪತಿ ಲಡ್ಡುಗೆ ಮತ್ತೆ ಕರ್ನಾಟಕದ ನಂದಿನಿ ತುಪ್ಪ:
ಕಳೆದ ವರ್ಷ ಉಂಟಾಗಿದ್ದ ಗೊಂದಲಗಳಿಂದಾಗಿ ತಿರುಪತಿ ದೇವಸ್ಥಾನದ ಲಡ್ಡಿನಲ್ಲಿ ಬಳಸಲಾಗುತ್ತಿದ್ದ ನಂದಿನಿ ತುಪ್ಪದ ಪೂರೈಕೆಯನ್ನು ನಿಲ್ಲಿಸಲಾಗಿತ್ತು. ಈಗಾಗಲೇ 2013-14ನೇ ಸಾಲಿನಿಂದ 2021-22 ರವರೆಗೆ 5 ಸಾವಿರ ಟನ್ ನಂದಿನಿ ತುಪ್ಪವನ್ನು ತಿರುಪತಿ ದೇವಸ್ಥಾನಕ್ಕೆ ಸರಬರಾಜು ಮಾಡಿದೆ. ಪ್ರಸಕ್ತ ಸಾಲಿನಲ್ಲಿ ಆರಂಭಿಕವಾಗಿ 350 ಟನ್ ತುಪ್ಪವನ್ನು ಸರಬರಾಜು ಮಾಡಲು ಟೆಂಡರ್ ಮೂಲಕ ಬೇಡಿಕೆ ಬಂದಿದೆ.
ನಂದಿನಿ ತುಪ್ಪದ ಬೇಡಿಕೆಗೆ ಅನುಗುಣವಾಗಿ ಹಸುವಿನ ತುಪ್ಪವನ್ನು ಟ್ಯಾಂಕರ್ ಮೂಲಕ ಸರಬರಾಜು ಮಾಡಲಾಗುತ್ತದೆ ಎಂದು ಕೆಎಂಎಫ್ ತಿಳಿಸಿದೆ. ಈ ಮೂಲಕ ತಿರುಪತಿ ತಿಮ್ಮಪ್ಪನ ದೇವಸ್ಥಾನದ ಲಡ್ಡಿನಲ್ಲಿ ಮತ್ತೆ ನಂದಿನಿ ತುಪ್ಪದ ಘಮಲು ಮೂಡಲಿದೆ.
ಎರಡೂ ರಾಜ್ಯಗಳ ನಡುವೆ ವಿವಾದಕ್ಕೆ ಕಾರಣವಾಗಿದ್ದ ನಂದಿನಿ ತುಪ್ಪ!
ಕಳೆದ ವರ್ಷ ಆಂಧ್ರಪ್ರದೇಶ ಹಾಗೂ ಕರ್ನಾಟಕ ರಾಜ್ಯದ ನಡುವೆ ನಂದಿನಿ ತುಪ್ಪ ಪೂರೈಕೆಯ ವಿಚಾರ ವಿವಾದಕ್ಕೆ ಕಾರಣವಾಗಿತ್ತು. ವಿಶ್ವ ವಿಖ್ಯಾತ ಹಾಗೂ ಭಾರತದ ಪ್ರಸಿದ್ಧ ದೇವಾಲಯಗಳಲ್ಲಿ ತಿರುಪತಿ ತಿಮ್ಮಪ್ಪನ ದೇವಾಲಯವೂ ಒಂದಾಗಿದೆ. ಅಲ್ಲದೇ ವಿಶ್ವದ ಶ್ರೀಮಂತ ದೇವಸ್ಥಾನಗಳಲ್ಲಿ ತಿರುಪತಿ ತಿಮ್ಮಪ್ಪನ ದೇವಸ್ಥಾನವೂ ಒಂದು ಎನ್ನುವ ಖ್ಯಾತಿ ಇದೆ.
ಅಲ್ಲದೇ ಕಳೆದ ಹಲವು ವರ್ಷಗಳಿಂದ ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ತಯಾರಾಗುವ ಲಡ್ಡಿಗೆ ಕರ್ನಾಟಕದ ಹೆಮ್ಮೆಯ ನಂದಿನಿ ತುಪ್ಪವನ್ನೇ ಪೂರೈಸಲಾಗುತ್ತಿತ್ತು. ಕಳೆದ ವರ್ಷ ಉಂಟಾಗಿದ್ದ ಗೊಂದಲದಿಂದ ನಂದಿನಿ ತುಪ್ಪ ಪೂರೈಕೆ ಸ್ಥಗಿತವಾಗಿತ್ತು.
ಇದನ್ನೂ ಸಹ ಓದಿ : HDFC ಬ್ಯಾಂಕ್ ನಿಂದ ವಿದ್ಯಾರ್ಥಿಗಳಿಗೆ 75,000 ರೂ. ಸ್ಕಾಲರ್‌ಶಿಪ್! ಈಗಲೇ ಅರ್ಜಿ ಸಲ್ಲಿಸಿ
ಇನ್ನು ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಕೆಲವು ವರ್ಷಗಳಿಂದ ಅಸ್ಮಾರ್ಕ್ ಸ್ಪೇಷಲ್ ಗ್ರೇಡ್ ಎನ್ನುವ ಹಸುವಿನ ತುಪ್ಪವನ್ನು ಟ್ಯಾಂಕರ್ ಮೂಲಕ ತಿರುಪತಿ ಲಡ್ಡಿನ ಪ್ರಸಾದ ತಯಾರಿಕೆಗೆ 5 ಸಾವಿರ ಟನ್ ನಂದಿನಿ ತುಪ್ಪವನ್ನು ಪೂರೈಕೆ ಮಾಡಲಾಗಿತ್ತು.
ಕಳೆದ ವರ್ಷ ಸೃಷ್ಟಿಯಾಗಿದ್ದ ಗೊಂದಲ ಮತ್ತು ಟೆಂಡರ್ ಕೈತಪ್ಪಿದ್ದರಿಂದಾಗಿ ತಿರುಪತಿಗೆ ಕೆಎಂಎಫ್ನಿಂದ ತುಪ್ಪ ಸರಬರಾಜು ಸ್ಥಗಿತ ಮಾಡಲಾಗಿತ್ತು. ಇದೀಗ ಮತ್ತೆ ನಂದಿನಿ ತುಪ್ಪ ಪೂರೈಸಲು ಕೆಎಂಎಫ್ ಮುಂದೆ ಬಂದಿದೆ.
ತುಪ್ಪದ ಗುಣಮಟ್ಟದ ಬಗ್ಗೆ ಆಕ್ಷೇಪ
ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡುವ ಲಡ್ಡಿನ ರುಚಿ ಮೊದಲಿನಂತೆ ಇಲ್ಲ ಎನ್ನುವ ಅಭಿಪ್ರಾಯ ಭಕ್ತರಿಂದ ಕೇಳಿಬಂದಿತ್ತು. ನಂದಿನಿ ತುಪ್ಪವನ್ನು ಬಳಸುವ ಸಂದರ್ಭದಲ್ಲಿ ಲಡ್ಡಿನ ಪರಿಮಳ ಅದ್ಭತವಾಗಿತ್ತು. ರುಚಿಯೂ ಅಮೋಘವಾಗಿತ್ತು. ಆದರೆ, ಕರ್ನಾಟಕದ ನಂದಿನಿ ತುಪ್ಪವನ್ನು ಬಳಸುವುದನ್ನು ನಿಲ್ಲಿಸಿದ ನಂತರದಲ್ಲಿ ಮೊದಲಿನ ಪರಿಮಳ ಹಾಗೂ ಸ್ವಾದ ಲಡ್ಡಿನಲ್ಲಿ ಇರಲಿಲ್ಲ ಎಂದು ಭಕ್ತಾಧಿಗಳು ಬೇಸರ ವ್ಯಕ್ತಪಡಿಸಿದ್ದರು.
ಈ ರೀತಿ ಗುಣಮಟ್ಟ ಕುಸಿಯುವುದಕ್ಕೆ ಇತ್ತೀಚಿನ ದಿನಗಳಲ್ಲಿ ನಂದಿನಿ ತುಪ್ಪವನ್ನು ಬಳಸದೆ ಅನ್ಯ ತುಪ್ಪವನ್ನು ಬಳಸಿದ್ದೂ ಸಹ ಒಂದು ಕಾರಣ ಎನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು.
ಹೀಗಾಗಿ, ಇದೀಗ ತಿರುಪತಿ ತಿರುಮಲ ದೇವಸ್ಥಾನದ ಆಡಳಿತ (ಟಿಡಿಪಿ) ಮಂಡಳಿಯು ಮತ್ತೆ ಕರ್ನಾಟಕದ ಕೆಎಂಎಫ್ ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಕರ್ನಾಟಕದ ಹೆಮ್ಮೆಯ ನಂದಿನಿ ತುಪ್ಪದ ಘಮಲು ಮತ್ತೆ ತಿರುಪತಿ ತಿರುಮಲ ದೇವಸ್ಥಾನದ ಪ್ರಸಾದವಾದ ಲಡ್ಡಿನಲ್ಲಿ ಮೂಡಲಿದೆ.
ರಾಜಕೀಯ ಮಾಕ್ಸಮರಕ್ಕೆ ಕಾರಣವಾಗಿದ್ದ “ನಂದಿನಿ ತುಪ್ಪ”
ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಪೂರೈಕೆಯಾಗುವ ಲಡ್ಡಿಗೆ ಬಳಸಲಾಗುತ್ತಿದ್ದ ನಂದಿನಿ ತುಪ್ಪದ ಪೂರೈಕೆ ಸ್ಥಗಿತವಾದ ಬೆನ್ನಲ್ಲೇ ಇದು ರಾಜಕೀಯ ಸ್ವರೂಪವನ್ನೂ ಪಡೆದುಕೊಂಡಿತ್ತು.
ಕಳೆದ ವರ್ಷ ನಂದಿನಿ ತುಪ್ಪ ಪೂರೈಕೆ ಸ್ಥಗಿತವಾದ ಬೆನ್ನಲ್ಲೇ ಬಿಜೆಪಿ ಹಾಗೂ ಕಾಂಗ್ರೆಸ್‌ನ ನಡುವೆ ವಾಕ್ಸಮರ ನಡೆದಿತ್ತು. ನಂದಿನಿ ತುಪ್ಪ ಪೂರೈಕೆ ಸ್ಥಗಿತವಾಗಿರುವುದಕ್ಕೆ ಕಾಂಗ್ರೆಸ್ ಸರ್ಕಾರವೇ ಕಾರಣ. ಕಾಂಗ್ರೆಸ್‌ನ ನಿರ್ಲಕ್ಷ್ಯದಿಂದಲೇ ಈ ರೀತಿ ಆಗಿದೆ ಎಂದು ವಿರೋಧ ಪಕ್ಷವಾದ ಬಿಜೆಪಿ ವಿರೋಧಿಸಿತ್ತು. ಇದು ಎರಡೂ ಪಕ್ಷಗಳ ನಡುವೆ ವಾಕ್ಸಮರಕ್ಕೂ ಕಾರಣವಾಗಿತ್ತು.
ಇತರೆ ವಿಷಯಗಳು:
ʻHSRPʼ ನಂಬರ್ ಪ್ಲೇಟ್ ಅಳವಡಿಸಲು ಸೆ.15 ಕೊನೆಯ ದಿನ! ಇಲ್ಲದಿದ್ದರೆ ದಂಡ ಫಿಕ್ಸ್
ಬಿಯರ್ ಪ್ರಿಯರಿಗೆ ದರ ಹೆಚ್ಚಳದ ಬಿಸಿ! ಪ್ರೀಮಿಯಂ ಮದ್ಯದ ದರ ಇಳಿಕೆ
ಮಹಿಳೆಯರಿಗೆ ಸಿಹಿ ಸುದ್ದಿ! 50 ಸಾವಿರ ರೂ. ಸಾಲದ ಜೊತೆ 25 ಸಾವಿರ ಸಬ್ಸಿಡಿ