rtgh

ಸರಳ ವಿವಾಹಕ್ಕೆ 50,000 ಪ್ರೋತ್ಸಾಹ ಧನ.! ಮದುವೆ ಆಗುವವರಿಗೆ ರಾಜ್ಯ ಸರ್ಕಾರದ ಬಂಪರ್‌ ಕೊಡುಗೆ

marriage incentive karnataka
Share

ಹಲೋ ಸ್ನೇಹಿತರೇ, ರಾಜ್ಯ ಸರ್ಕಾರವು ಸರಳವಾಗಿ ಮದುವೆಯಾಗುವ ದಂಪತಿಗಳಿಗೆ ಒಂದು ಗುಡ್ ನ್ಯೂಸ್ ನೀಡಿದೆ. ಅದೇನೆಂದರೆ ಸಿಂಪಲ್ಲಾಗಿ ಮದುವೆ ಆದರೆ ರಾಜ್ಯ ಸರ್ಕಾರದಿಂದ ಪ್ರೋತ್ಸಾಹ ಧನವು ಸಿಗಲಿದೆ. ಎಷ್ಟು ಸಿಗಲಿದೆ ಮತ್ತು ಅದನ್ನು ಪಡೆಯುವುದು ಹೇಗೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

marriage incentive karnataka

Contents

ಸರಳವಾಗಿ ಮದುವೆಯಾದರೆ ಪ್ರೋತ್ಸಾಹ ಧನ :

ಮದುವೆ ಮಾಡಲು ಮುಖ್ಯವಾಗಿ ಬೇಕಾಗುವುದು ಹಣ, ಇಂದಿನ ದಿನಮಾನದಲ್ಲಿ ಎಲ್ಲರೂ ಅದ್ದೂರಿಯಾಗಿ ಅದೆಷ್ಟೋ ದುಡ್ಡನ್ನು ವೆಚ್ಚ ಮಾಡಿ ಮದುವೆಯಾಗುತ್ತಾರೆ. ಡೆಸ್ಟಿನೇಷನ್ ವೆಡ್ಡಿಂಗ್(Destination wedding) ಎಂಬ ಟ್ರೆಂಡ್ ಕೂಡ ಇದೆ. ಹೀಗಿರುವಾಗ ರಾಜ್ಯ ಸರ್ಕಾರವು ಸರಳವಾಗಿ ಮದುವೆಯಾಗುವವರಿಗೆ ಸಿಹಿ ಸುದ್ದಿ ನೀಡಿದೆ, ಸರಳ ವಿವಾಹಕ್ಕೆ ಪ್ರೋತ್ಸಾಹ ಧನ, ನೊಂದಾಯಿತ ಸಂಘ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು ವ್ಯವಸ್ಥೆ ಮಾಡುವ ಸಾಮೂಹಿಕ ಮದುವೆ ಕಾರ್ಯಕ್ರಮದಲ್ಲಿ ವಿವಾಹವಾಗುವ ಪರಿಶಿಷ್ಟ ಜಾತಿ ದಂಪತಿಗಳಿಗೆ ಹಣದ ನೆರವು ನೀಡಲಾಗುತ್ತದೆ. ಮದುವೆಯಾಗುವ ದಂಪತಿಗಳಿಗೆ 50,000ರೂ. ಗಳನ್ನು ಪ್ರೋತ್ಸಾಹ ಧನವಾಗಿ ನೀಡಲಾಗುತ್ತಿದೆ.

ಅರ್ಜಿ ಸಲ್ಲಿಸುವ ವಿಧಾನ :

ಹೀಗೆ ಸರಳವಾಗಿ ಮದುವೆಯಾದ ನಂತರದಲ್ಲಿ 50,000 /- ಪ್ರೋತ್ಸಾಹ ಧನವನ್ನು ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಪರಿಶಿಷ್ಟ ಜಾತಿಯ ದಂಪತಿಗಳು ಪ್ರೋತ್ಸಾಹಧನಕ್ಕಾಗಿ ಅರ್ಜಿಯನ್ನು ಸಲ್ಲಿಸಲು ಈ ಲಿಂಕ್‌ ಮೇಲೆ ಕ್ಲಿಕ್‌ಗೆ ಭೇಟಿ ನೀಡಿ: https://swdservices.karnataka.gov.in/swincentive/HAhome.aspx

ಮದುವೆಯಾದ 1 ವರ್ಷದ ಒಳಗೆ ಅರ್ಹ ದಾಖಲೆಯೊಂದಿಗೆ ಪ್ರೋತ್ಸಾಹ ಧನವನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಬೇಕು.
ಸರಳ ವಿವಾಹವಾದ ದಂಪತಿಗಳಿಗೆ 50,000 ರೂ. ಗಳನ್ನು ನೀಡಲಾಗುವುದು ಅಷ್ಟೇ ಅಲ್ಲದೆ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸಿದ ಆಯೋಜಕರಿಗೆ ಪ್ರೋತ್ಸಾಹ ಧನ ಮತ್ತು ವಿವಾಹದ ಖರ್ಚು ವೆಚ್ಚಗಳಿಗಾಗಿ ಪ್ರತಿ ಜೋಡಿಗೆ ರೂ.2000/- ಸಾವಿರಗಳನ್ನು ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಕಲ್ಯಾಣ ಮಿತ್ರ ಸಹಾಯವಾಣಿಗೆ ಕರೆ ಮಾಡಿ : 9482 300 400

ಇತರೆ ವಿಷಯಗಳು

ಸ್ವಯಂ ಉದ್ಯೋಗಕ್ಕೆ ಎಲ್ಲಾ ವರ್ಗದವರಿಗೂ ಸಿಗುತ್ತೆ 10 ಲಕ್ಷ.! ಪ್ರಧಾನ ಮಂತ್ರಿ ಮುದ್ರಾ ಯೋಜನೆ

ಪಿಂಚಣಿ ಹಣ ಪಡೆಯುತ್ತಿದ್ದೀರಾ? ಮನೆಯಲ್ಲೆ ಕುಳಿತು ಮಾಹಿತಿ ಕಣಜದಲ್ಲಿ ಪ್ರತಿ ತಿಂಗಳ ಸ್ಟೇಟಸ್‌ ಚೆಕ್‌ ಮಾಡಿ


Share

Leave a Reply

Your email address will not be published. Required fields are marked *