ಹಲೋ ಸ್ನೇಹಿತರೆ, ರಾಜ್ಯದ ಅಂಗನವಾಡಿಗಳನ್ನು ಉನ್ನತೀಕರಣಗೊಳಿಸುತ್ತಿದ್ದು ಜುಲೈ 22ರಂದು 250 ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಸಾಂಕೇತಿಕವಾಗಿ ಆರಂಭಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಜುಲೈ 22ರಂದು ಸಾಂಕೇತಿಕವಾಗಿ 250 ಅಂಗನವಾಡಿಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸಲಿದ್ದು, ಮಕ್ಕಳಿಗೆ ಇಲಾಖೆಯಿಂದಲೇ ಬ್ಯಾಗ್, ಪುಸ್ತಕ, ಸಮವಸ್ತ್ರ ವಿತರಿಸಲಾಗುವುದು. ಮೊದಲ ಹಂತದಲ್ಲಿ 15 ರಿಂದ 20 ಸಾವಿರ ಶಾಲೆಗಳಲ್ಲಿ ಸರ್ಕಾರಿ ಮಾಂಟೆಸ್ಸರಿ ಆರಂಭಿಸಲಾಗುತ್ತದೆ. ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಈಗಾಗಲೇ ಇಲಾಖೆಯಿಂದ ಗುಣಮಟ್ಟದ ಆಹಾರ, ಶಿಕ್ಷಕಿಯರಿಗೆ ಸೀರೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಇದನ್ನು ಓದಿ: ಶತಕ ಬಾರಿಸಿದ ಟೊಮೆಟೊ ಬೆಲೆ! ಭಾರೀ ಮಳೆಯಿಂದ ತರಕಾರಿ ಬೆಲೆ ಹೆಚ್ಚಳ
ಅಂಗನವಾಡಿ ಶಿಕ್ಷಕಿಯರನ್ನು ಯಾವುದೇ ಕಾರಣಕ್ಕೂ ಕೆಲಸದಿಂದ ತೆಗೆಯುವ ಪ್ರಶ್ನೆಯೇ ಇಲ್ಲ. ಅಂಗನವಾಡಿ ಕಾರ್ಯಕರ್ತೆಯರಿಗೆ ವಿಮೆ, ಗೌರವಧನ ಹೆಚ್ಚಳ ಬಗ್ಗೆ ನೀಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಹೇಳಿದ್ದಾರೆ.
ಇತರೆ ವಿಷಯಗಳು:
‘ಗೃಹಲಕ್ಷ್ಮಿ’ ಹಣ ಜಮೆಯ ದಿನಾಂಕ ಬದಲಾವಣೆ!
KSRTC ಪ್ರಯಾಣಿಕರಿಗೆ ಬಿಗ್ ಶಾಕ್! ಬಸ್ ಟಿಕೆಟ್ ದರ 20% ಹೆಚ್ಚಿಸಿದ ಸರ್ಕಾರ