rtgh

ಎಣ್ಣೆ ಪ್ರಿಯರಿಗೆ ಸಿಹಿ ಸುದ್ದಿ: ಮದ್ಯದ ದರದಲ್ಲಿ ಯಾವುದೇ ಬದಲಾವಣೆ ಇಲ್ಲ!!

Liquor Price
Share

ಬೆಂಗಳೂರು: ಮದ್ಯದ ಬೆಲೆ ಏರಿಕೆಗೆ ಸರ್ಕಾರದ ಬ್ರೇಕ್ ಹಾಕಿದೆ. 1 ತಿಂಗಳ ಮಟ್ಟಿಗೆ ಹಳೆಯ ದರವನ್ನೇ ಮುಂದುವರೆಸಲು ನಿರ್ಧರ ಮಾಡಿದೆ. ಪಕ್ಕದ ರಾಜ್ಯಗಳ ಬೆಲೆಗೆ ತಕ್ಕಂತೆ ಮದ್ಯದ ದರವನ್ನು ಪರಿಷ್ಕರಿಸಿ ದರ ಏರಿಕೆ ಮಾಡುವ ಸಾಧ್ಯತೆ ಇದೆ.

Liquor Price

ಜುಲೈ 1ರಿಂದಲೇ ಮದ್ಯದ ಬೆಲೆ ಪರಿಷ್ಕರಣೆಗೆ ಸರ್ಕಾರವು ಮುಂದಾಗಿತ್ತು. ಇದೀಗ 1 ತಿಂಗಳು ದರ ಪರಿಷ್ಕರಣೆಯನ್ನು ಮುಂದೂಡಲಾಗಿದೆ. ಕಡಿಮೆ ಬೆಲೆಯ ಮದ್ಯಗಳ ಬೆಲೆಯ ಹೆಚ್ಚಳ 1 ತಿಂಗಳು ತಡವಾಗುತ್ತದೆ.

ಜುಲೈ 1ರಿಂದ ಮದ್ಯದ ಬೆಲೆ ಪರಿಷ್ಕರಣೆ ನಡೆಸುವುದಾಗಿ ಸರ್ಕಾರವು ಅಧಿಸೂಚನೆಯನ್ನು ಹೊರಡಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯ ಮೇರೆಗೆ ಅಬಕಾರಿ ಇಲಾಖೆಯು 1 ತಿಂಗಳ ಮಟ್ಟಿಗೆ ದರವನ್ನು ಪರಿಷ್ಕರಿಸದೆ ಯಥಾಸ್ಥಿತಿಯಲ್ಲಿ ಮುಂದುವರಿಸಲಿದೆ.

ಇದನ್ನೂ ಸಹ ಓದಿ: ಸರ್ಕಾರವೇ ಭರಿಸಲಿದೆ ನಿಮ್ಮ ಮನೆ ನಿರ್ಮಾಣದ ಸಂಪೂರ್ಣ ಖರ್ಚು..!

ಆ. 1 ರಿಂದ ಪರಿಷ್ಕೃತ ಬೆಲೆ ಜಾರಿಯಾಗಲಿದೆ‌. ಅಬಕಾರಿ ಇಲಾಖೆಯಲ್ಲಿ ರಾಜ್ಯಸ್ವ ಸಂಗ್ರಹ ಹೆಚ್ಚಳದ ಉದ್ದೇಶದಿಂದ ನೆರೆಹೊರೆಯ ರಾಜ್ಯಗಳ ಮದ್ಯದ ಬೆಲೆಗೆ ಹೋಲಿಸಿದರೆ ನಮ್ಮಲ್ಲಿಯೂ ದರ ಪರಿಷ್ಕರಣೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು.

ನೆರೆಯ ರಾಜ್ಯಗಳಲ್ಲಿ ಬಡವರು ಸೇವಿಸುವ ಮದ್ಯದ ಬೆಲೆ ಹೆಚ್ಚಾಗಿದೆ. ದುಬಾರಿ ಮದ್ಯದ ದರ ಕರ್ನಾಟಕಕ್ಕಿಂತಲೂ ಸ್ವಲ್ಪ ಕಡಿಮೆಯಿದೆ. ಆ ಸರಾಸರಿಗೆ ಅನುಗುಣವಾಗಿ ರಾಜ್ಯದಲ್ಲಿ ಮದ್ಯದ ಬೆಲೆ ಪರಿಷ್ಕರಿಸಲಾಗುವುದು ಎಂದು ಹೇಳಲಾಗಿದೆ.

ಜುಲೈ 3 ರಿಂದ ಎಲ್ಲಾ ರೀಚಾರ್ಜ್ ಯೋಜನೆಗಳು ದುಬಾರಿ..!‌ ಹೊಸ ಪ್ಲಾನ್‌ ಬಿಡುಗಡೆ

ರಾಜ್ಯ ಸರ್ಕಾರದ ಕಠಿಣ ನಿರ್ಧಾರ! ಎಲ್ಲಾ ಗ್ಯಾರಂಟಿಗಳು ವಾಪಸ್..?


Share

Leave a Reply

Your email address will not be published. Required fields are marked *