ಹಲೋ ಸ್ನೇಹಿತರೆ, ರಾಜ್ಯದಲ್ಲಿ ಕೋವಿಡ್ ಸಮಯದಲ್ಲಿ 3,800 ಸರ್ಕಾರಿ ಬಸ್ ಮಾರ್ಗಗಳನ್ನು ಸ್ಥಗಿತಗೊಳಿಸಲಾಗಿತ್ತು. ಈ ಪೈಕಿ ಬಹುತೇಕ ಕಡೆಗೆ ರೂಟ್ ಬಸ್ಗಳ ಓಡಾಟ ಆರಂಭವಾಗದೆ ಜನರು ಪರದಾಡುವಂತಾಗಿದೆ. ಈಗ ಸಾರಿಗೆ ಇಲಾಖೆ ಸ್ಥಗಿತಗೊಳಿಸಿದ್ದ ಬಸ್ ರೂಟ್ಗಳ ಪುನರಾರಂಭಕ್ಕೆ ಚಿಂತನೆ ನಡೆಸಿದೆ. ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ಯಾವಾಗ ಆರಂಭವಾಗಲಿದೆ? ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಈ ಲೇಖನವನ್ನು ಕೊನೆವರೆಗೂ ಓದಿ.
“ಕೋವಿಡ್ ವೇಳೆ ಸ್ಥಗಿತಗೊಳಿಸಲಾಗಿದ್ದ ಬಸ್ ಸೇವೆ ಪುನರಾರಂಭಕ್ಕೆ ಕ್ರಮ ವಹಿಸಲಾಗುತ್ತಿದ್ದು, ಹಿಂದಿನ ಸರ್ಕಾರದ ಅವಧಿಯಲ್ಲಿ ಹೊಸ ಬಸ್ಗಳನ್ನು ಖರೀದಿಸಿಲ್ಲ. ಇದರಿಂದ ಬಸ್ ಕೊರತೆ ಕಾಡುತ್ತಿದ್ದು, ಈಗ ಖರೀದಿಗೆ ಕ್ರಮವಹಿಸಲಾಗುತ್ತಿದೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸಲಾಗುತ್ತದೆ” ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಇದನ್ನು ಓದಿ: ಮನೆ-ಪ್ಲಾಟ್ ನೋಂದಣಿಗೆ ಬಂತು ಹೊಸ ರೂಲ್ಸ್!
ಬಸ್‌ಗಳ ಖರೀದಿಗೆ ಕ್ರಮ:
ರಾಜ್ಯದಲ್ಲಿ ಸಮರ್ಪಕವಾಗಿ ಬಸ್ ಸೌಲಭ್ಯ ಒದಗಿಸಲು ಸಾಕಷ್ಟು ತೊಂದರೆಗಳಿವೆ. ಅದರಲ್ಲೂಈ ಹಿಂದಿನ ಸರಕಾರ ಬಸ್ ಖರೀದಿಸದೇ ಇರುವುದು ಬಸ್‌ಗಳ ಕೊರತೆ ಒಂಟಾಗಿದೆ. ಇದರೊಂದಿಗೆ ಸಿಬ್ಬಂದಿ ಕೊರತೆ ಕೂಡ ಸಾರಿಗೆ ಇಲಾಖೆಯನ್ನು ಕಾಡುತ್ತಿದೆ. ಈ ಕಾರಣಕ್ಕಾಗಿ ಸರಕಾರ 5800 ಹೊಸ ಬಸ್‌ಗಳ ಸೇರ್ಪಡೆಗೆ ಮುಂದಾಗಿದ್ದು, ಕಳೆದ 1 ವರ್ಷದ ಅವಧಿಯಲ್ಲಿ 2,236ಕ್ಕೂ ಹೆಚ್ಚು ಬಸ್‌ಗಳು ಸೇರ್ಪಡೆಯಾಗಿವೆ.
ಜತೆಗೆ 970 ಬಸ್‌ಗಳನ್ನು ಪುನಶ್ಚೇತನಗೊಳಿಸಿ ನವೀಕರಿಸಲಾಗಿದೆ. ಜೊತೆಗೆ 250 ಮಂದಿ ತಾಂತ್ರಿಕ ಸಿಬ್ಬಂದಿ ನೇಮಕ ಮಾಡುವ ಮೂಲಕ ಸಿಬ್ಬಂದಿ ಸಮಸ್ಯೆ ನೀಗಿಸಲು ಪ್ರಯತ್ನ ಮಾಡಲಾಗುತ್ತಿದೆ. ಈ ಮೂಲಕ ಸಮರ್ಪಕ ಬಸ್ ಸೇವೆ ಒದಗಿಸುವ ಸಲುವಾಗಿ ಸಾರಿಗೆ ಇಲಾಖೆ ಪ್ರಯತ್ನ ನಡೆಯುತ್ತಿದೆ.
ಇತರೆ ವಿಷಯಗಳು:
ಸಾರ್ವಜನಿಕರಿಗೆ ಮತ್ತೊಂದು ದರ ಏರಿಕೆ ಬರೆ: ದಿಢೀರ್ ನೀರಿನ ಶುಲ್ಕ ಹೆಚ್ಚಳ!
ಎಣ್ಣೆ ಪ್ರಿಯರಿಗೆ ಬೆಲೆ ಇಳಿಕೆ ಕಿಕ್! ಜುಲೈ 1ರಿಂದ ದುಬಾರಿ ಮದ್ಯ ಕಡಿಮೆ ಬೆಲೆಗೆ ಲಭ್ಯ