ಹಲೋ ಸ್ನೇಹಿತರೇ, ಕರಾವಳಿ ಮತ್ತು ದಕ್ಷಿಣ ಕನ್ನಡ ಒಳನಾಡಿನ ಹಲವೆಡೆ ಇಂದಿನಿಂದ ನಾಲ್ಕು ದಿನಗಳ ಕಾಲ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ, ದಕ್ಷಿಣ ಒಳನಾಡಿನ ಬಳ್ಳಾರಿ ಹಾಗೂ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು ಹಾಗೂ ಮೈಸೂರಿನಲ್ಲಿ ಇಂದು ಮಳೆ ಸುರಿಯುವ ಸಾಧ್ಯತೆ ಹೆಚ್ಚಾಗಿಯೇ ಇದೆ ಎಂದು ಮುನ್ಸೂಚನೆಯನ್ನು ನೀಡಿದೆ.
ಉತ್ತರ ಒಳನಾಡಿನ ಕೊಪ್ಪಳ ಮತ್ತು ದಕ್ಷಿಣ ಒಳನಾಡಿನಲ್ಲಿ ಬೆಂಗಳೂರು ಗ್ರಾಮಾರಂತರ, ಮೈಸೂರು ಹಾಗೂ ಮಂಡ್ಯದಲ್ಲಿ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ ತುಸು ಹೆಚ್ಚಳ ಆಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆಯನ್ನು ನೀಡಿದೆ. ಇನ್ನು ಗುರುವಾರ (ಮಾರ್ಚ್ 21) ಕೊಪ್ಪಳದಲ್ಲಿ ಗರಿಷ್ಠ ತಾಪಮಾನ 38.6 ಡಿಗ್ರಿ ಸೆಲ್ಸಿಯಸ್ ಹಾಗೂ ಬೀದರ್‌ನಲ್ಲಿ ಕನಿಷ್ಠ ತಾಪಮಾನ 19.4 ಡಿಗ್ರಿ ಸೆಲ್ಸಿಯಸ್ ದಾಖಲು ಆಗಿದೆ ಎನ್ನುವ ಮಾಹಿತಿಯನ್ನು ನೀಡಿದೆ.
ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಈ ಮೇಲಿನ ಜಿಲ್ಲೆಳಲ್ಲಿ ಮಳೆಯಾದರೆ ಇಲ್ಲಿನ ರೈತರು, ಜನರ ಮುಖದಲ್ಲಿ ಮಂದಹಾಸ ಮುಡುವುದಂತೂ ಗ್ಯಾರಂಟಿ. ಈಗಾಗಲೇ ಚಿಕ್ಕಮಗಳೂರು, ಕೊಡಗು ಮತ್ತು ಮೈಸೂರು, ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಹಲವೆಡೆ ಮಳೆರಾಯನು ಕರುಣೆಯನ್ನು ತೋರಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಹೀಗೆ ಮುಂದುವರೆಯುತ್ತಾ ರಾಜ್ಯದಲ್ಲಿ ಬಿಸಿಲಿನ ಬೇಗೆಗೆ ಬೆಂದಿರುವ ಜಿಲ್ಲೆಗಳಿಗೂ ತಂಪೆರೆಯಲಿದ್ದಾನಾ ಎಂದು ಕಾದುನೋಡಬೇಕದೆ.
7% ಸಬ್ಸಿಡಿ, ಕ್ಯಾಶ್‌ಬ್ಯಾಕ್ ಜೊತೆ ಬಡ್ಡಿ ರಹಿತ ₹50,000 ಸಾಲ.! ಇದು ಮೋದಿ ಸರ್ಕಾರದ ದೊಡ್ಡ ಯೋಜನೆ
ಮಾರ್ಚ್ ಅಂತ್ಯದ ವೇಳೆಗೆ ರಾಜ್ಯದ ಬಹುತೇಕ ಭಾಗದಲ್ಲಿ ಮಳೆ ಶುರುವಾಗಲಿದೆ ಎನ್ನುವ ಮಾಹಿತಿಯು ಇದ್ದು, ಈ ಪ್ರಕಾರ ಮಳೆರಾಯನು ಕರುಣೆ ತೋರಿ ಭೂಮಿಗೆ ತಂಪೆರೆದರೆ ಬಿಸಿಲಿನ ಬೇಗೆಗೆ ಬೆಂದು ಹೋದ ಜೀವ ಮತ್ತೆ ಜನರಿಗೆ ಬಂದಾಂತಾಗುತ್ತದೆ. ಒಟ್ಟಿನಲ್ಲಿ ವರುಣ ಕೃಪೆ ತೋರಿದರೆ ಸಾಕು ಅಂತಿದ್ದಾರೆ ನಮ್ಮ ಜನ ಸಾಮಾನ್ಯರು.
ಇನ್ನು ರಾಜ್ಯ ರಾಜಧಾನಿಯಾದ ಬೆಂಗಳೂರಿನಲ್ಲಿ ಆಗಾಗ ಮೋಡ ಕವಿದ ವಾತಾರವರಣ ನಿರ್ಮಾಣವಾಗುತ್ತಲೇ ಇದೆ. ಆದರೆ ನಗರದ ಬಹುತೇಕ ಭಾಗಗಳಲ್ಲಿ ಬೆಳಗ್ಗೆಯಿಂದ ಸಂಜೆ 4 ಗಂಟೆಯಾದರೂ ಬಿಸಿಲಿನ ಪ್ರಮಾಣ ಮಾತ್ರ ಕಡಿಮೆಯಾಗುತ್ತಿಲ್ಲ, ಇದರಿಂದ ನಗರದ ಜನ ಕಂಗೆಟ್ಟು ಹೋಗಿದ್ದಾರೆ. ಇನ್ನಾದರೂ ವರುಣ ಭೂಮಿಗೆ ಆಗಮಿಸುತ್ತಾನೆಯೇ ಎಂದು ಕಾದು ನೋಡಬೇಕಿದೆ.
ಇತರೆ ವಿಷಯಗಳು:
ಎಲ್ಲಾ ಹೆಣ್ಣು ಮಗುವಿಗೆ ಬರುತ್ತೆ ಬರೋಬ್ಬರಿ 1 ಲಕ್ಷ ರೂಪಾಯಿ!! ಭಾಗ್ಯಲಕ್ಷ್ಮಿ ಬಾಂಡ್
SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಉಚಿತ ಬಸ್ ಪ್ರಯಾಣಕ್ಕೆ ಅವಕಾಶ!