rtgh

ರಾತ್ರೋ ರಾತ್ರಿ ಬಡ್ಡಿದರದಲ್ಲಿ ಬದಲಾವಣೆ! ಬ್ಯಾಂಕ್ ಗ್ರಾಹಕರಿಗೆ ಇಲ್ಲಿದೆ ಬಿಗ್ ಅಪ್ಡೇಟ್

Intrest Rate Hike
Share

ಹಲೋ ಸ್ನೇಹಿತರೆ, ಸಾಮಾನ್ಯ ಜನರು ಯಾವುದಾದರೂ ಒಂದು ಕಾರಣಕ್ಕೆ ಸಾಲ ಮಾಡುವಂತಹ ಪರಿಸ್ಥಿತಿ ಎದುರಾಗುತ್ತದೆ. ಮನೆ ಕಟ್ಟಲು, ಪರ್ಸನಲ್ ಕೆಲಸಗಳಿಗೆ, ಮದುವೆಗೆ, ವಾಹನ ಖರೀದಿಗೆ ಹೀಗೆ ಅನೇಕ ಕೆಲಸಗಳಿಗೆ ಸಾಲ ಬೇಕಾದ ಸಂದರ್ಭದಲ್ಲಿ, ಯಾರದ್ದೋ ಬಳಿ ಸಾಲ ಪಡೆಯುವುದರ ಬದಲು ಬ್ಯಾಂಕ್ ನಲ್ಲಿ ಲೋನ್ ಪಡೆಯುವುದು ಉತ್ತಮ ಕೆಲಸವಾಗಿರುತ್ತದೆ. ಆದರೆ ಈಗ ಬ್ಯಾಂಕ್‌ ನಲ್ಲಿ ಸಾಲ ತೆಗೆದವರಿಗೆ ಬರೆ ಏಳೆದಂತಾಗಿದೆ. ಈ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.

Intrest Rate Hike

ದೇಶಾದ್ಯಂತ ಹೆಚ್ಚಿನ ಗ್ರಾಹಕರನ್ನು ಹೊಂದಿರುವ ಮೊದಲ ಬ್ಯಾಂಕ್ ಆಗಿರುವ SBI, ತಮ್ಮ ಗ್ರಾಹಕರಿಗೆ ಅನುಕೂಲ ಆಗುವಂತಹ ಉಳಿತಾಯ ಯೋಜನೆ ನೀಡುತ್ತದೆ, ಲೋನ್ ಗಳನ್ನು ಸಹ ನೀಡುತ್ತಿದೆ. ಆದರೆ ಇದೀಗ ತಮ್ಮಲ್ಲಿ ಲೋನ್ ಪಡೆದಿರುವ ಗ್ರಾಹಕರಿಗೆ ಶಾಕ್ ನೀಡಲು SBI ಬ್ಯಾಂಕ್ ಮುಂದಾಗಿದೆ.

SBI ಮಾತ್ರವಲ್ಲದೇ ಇನ್ನು ಕೆಲವು ಬ್ಯಾಂಕ್ ಗಳು ಬಡ್ಡಿದರ ಹೆಚ್ಚಿಸಲು ಯೋಜನೆ ರೂಪಿಸುತ್ತಿದ್ದು, ಪ್ರಸ್ತುತ ಈಗ ನಮಗೆ SBI ಬಡ್ಡಿದರ ಹೆಚ್ಚಿಸಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಜೂನ್ 15 ರಿಂದ ಹೊಸ ಬಡ್ಡಿದರವನ್ನು ಜಾರಿಗೆ ತರಲಿದ್ದು, ಈಗ ಸಿಕ್ಕಿರುವ ಮಾಹಿತಿಯ ಪ್ರಕಾರ, ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ಹಣವನ್ನು 10 ಬೇಸಿಕ್ ಪಾಯಿಂಟ್ಸ್ ಗಳಿಗೆ ಹೆಚ್ಚಿಸಲಾಗಿದೆ, ಇದರ ಅರ್ಥ ಬಡ್ಡಿದರದಲ್ಲಿ 0.1% ಏರಿಕೆ ಆಗಿದೆ. ಈ ನಿರ್ಧಾರದಿಂದ ಎಲ್ಲಾ ಸಾಲಗಳ EMI ಸಹ ಜಾಸ್ತಿ ಆಗಲಿದೆ.

ಇದನ್ನು ಓದಿ: ಇನ್ನು ಇಷ್ಟು ವರ್ಷ ಮಾತ್ರ 5 ಗ್ಯಾರಂಟಿ ಯೋಜನೆಗಳು ಚಾಲ್ತಿ!

ಬಡ್ಡಿದರ ದಿಢೀರ್ ಹೆಚ್ಚಳ

ಹೋಮ್ ಲೋನ್ ಗಳ ಬಡ್ಡಿದರವನ್ನು ಸಿಬಿಲ್ ಸ್ಕೋರ್ ಆಧಾರದ ಮೇಲೆ ನಿಗದಿ ಮಾಡಲಾಗುವುದು. ಇದೀಗ SBI ಬಡ್ಡಿದರ ಏರಿಕೆ ಮಾಡಿರುವುದರಿಂದ, ಹೊಸ ಬಡ್ಡಿದರ ಇಲ್ಲಿ ತಿಳಿಯಿರಿ

CIBIL Score 750 ಅಥವಾ ಅದಕ್ಕಿಂತ ಹೆಚ್ಚು ಇದ್ದರೆ 9.55% ಬಡ್ಡಿದರ ಇರುತ್ತದೆ, ಸಿಬಿಲ್ ಸ್ಕೋರ್ 700 ರಿಂದ 749ರವರೆಗೂ ಇದ್ದರೆ 9.75% ಬಡ್ಡಿ ಇರಲಿದೆ. ಈ ಮೂಲಕ ಹೋಮ್ ಲೋನ್ ಬಡ್ಡಿದರ ಜಾಸ್ತಿ ಆಗಲಿದೆ. ಅಷ್ಟೇ ಅಲ್ಲದೇ, ಒಂದು ವರ್ಷಕ್ಕೆ ಅವಧಿಗೆ ಸಾಲ ಪಡೆಯುವವರಿಗೆ ಬಡ್ಡಿದರ ಹೆಚ್ಚಾಗಿದ್ದು, 8.65% ಇಂದ 8.75% ಗೆ ಏರಿಕೆ ಆಗಿದೆ.

ಎರಡು ವರ್ಷಗಳಿಗಿಂತ ಕಡಿಮೆ ಅವಧಿ ಸಾಲದ ಮೇಲಿನ ಬಡ್ಡಿದರ 8.75% ಇಂದ 8.85% ಗೆ ಏರಿಕೆ ಆಗಿದ್ದು, 3 ವರ್ಷಗಳ ಕಡಿಮೆ ಅವಧಿಯ ಸಾಲಕ್ಕೆ ಬಡ್ಡಿದರವು 8.85% ಇಂದ 8.95% ಗೆ ಏರಿಕೆ ಆಗಲಿದೆ. ಜೂನ್ 15 ರಿಂದಲೇ ಈ ಹೊಸ ಬಡ್ಡಿದರ ಅನ್ವಯವಾಗಲಿದೆ.

ಈಗ ಬಡ್ಡಿದರದಲ್ಲಿ ಹೆಚ್ಚಳವಾಗಿದ್ದು, ಎಲ್ಲರೂ ಬಡ್ಡಿದರ ಯಾವಾಗ ಕಡಿಮೆ ಆಗುತ್ತದೆ ಎಂದು ಕಾಯುತ್ತಿದ್ದರು, ಆದರೆ ಜನರಿಗೆ ಶಾಕ್ ನೀಡಿದ ಹಾಗೆ ಆಗಿದೆ.

ಇತರೆ ವಿಷಯಗಳು:

PMKVY ಹೊಸ ನೋಂದಣಿ ಈಗ ಹೊಸ ರೀತಿಯಲ್ಲಿ!

TCS ನಲ್ಲಿ ಉದ್ಯೋಗಿಗಳ ಕೊರತೆ! ಅಪ್ಲೇ ಮಾಡಿದ ಪ್ರತಿಯೊಬ್ಬರಿಗೂ ಸಿಗುತ್ತೆ ಉದ್ಯೋಗ


Share

Leave a Reply

Your email address will not be published. Required fields are marked *