rtgh
Headlines

44,228 ಅಂಚೆ ಇಲಾಖೆ ಹುದ್ದೆ ನೇಮಕ: 10th ಪಾಸಾಗಿದ್ರೆ ಈ ವಿಧಾನದಲ್ಲಿ ಅರ್ಜಿ ಹಾಕಿ

India Post PostMaster Application
Share

ಹಲೋ ಸ್ನೇಹಿತರೇ, ಅಂಚೆ ಇಲಾಖೆಯ ಬಿಪಿಎಂ, ಎಬಿಪಿಎಂ, ಡಾಕ್‌ ಸೇವಕ್‌ ಹುದ್ದೆಗಳಿಗೆ ಅರ್ಜಿ ಹಾಕುವ ವಿಧಾನ ಮತ್ತು ಏನೆಲ್ಲಾ ದಾಖಲೆಗಳು ಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

India Post PostMaster Application

ಭಾರತೀಯ ಅಂಚೆಯ 44,228 ಗ್ರಾಮೀಣ ಡಾಕ್‌ ಸೇವಕ್, ಅಸಿಸ್ಟಂಟ್ ಬ್ರ್ಯಾಂಚ್‌ ಪೋಸ್ಟ್‌ಮಾಸ್ಟರ್, ಬ್ರ್ಯಾಂಚ್‌ ಪೋಸ್ಟ್‌ ಮಾಸ್ಟರ್‌ ಪೋಸ್ಟ್‌ಗಳ ಭರ್ತಿಗೆ ಈಗ ಅಧಿಸೂಚಿಸಿದೆ. SSLC / 10ನೇ ಕ್ಲಾಸ್‌ ಪಾಸಾದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಈ ಕೆಳಗಿನಂತೆ ವಿಧಾನ ಫಾಲೋ ಮಾಡಿ

  1. ರಿಜಿಸ್ಟ್ರೇಷನ್‌ ಪಡೆಯುವುದು.
  2. ಡೀಟೇಲ್ಡ್‌ ಅರ್ಜಿ ಸಲ್ಲಿಸುವುದು.
  3. ಅರ್ಜಿ ಶುಲ್ಕ ಪಾವತಿ ಮಾಡುವುದು.

1 Step

  • ಅಂಚೆ ಇಲಾಖೆಯ ನೇಮಕಾತಿ ಪೋರ್ಟಲ್‌ ವೆಬ್‌ಸೈಟ್‌ ವಿಳಾಸ https://indiapostgdsonline.gov.in ಗೆ ಭೇಟಿ ನೀಡಿ.
  • ತೆರೆದ ಮುಖಪುಟದಲ್ಲಿ ‘Stage 1.Registration’ ಎಂಬಲ್ಲಿ ಕ್ಲಿಕ್ ಮಾಡಿ.
  • ನಂತರ 2 ಆಯ್ಕೆಗಳು ಪ್ರದರ್ಶಿತ. ಅವುಗಳಲ್ಲಿ ‘Registration’ ಎಂಬಲ್ಲಿ ಕ್ಲಿಕ್ ಮಾಡಿ.
  • ಅಪ್ಲಿಕೇಶನ್‌ ಪುಟದಲ್ಲಿ ಮೊಬೈಲ್ ನಂಬರ್, ಇ-ಮೇಲ್ ವಿಳಾಸ, ಹೆಸರು, ತಂದೆ-ತಾಯಿ ಹೆಸರು, ಜನ್ಮ ದಿನಾಂಕ, ಲಿಂಗ, ಜಾತಿ, 10th ಪಾಸಾದ ವರ್ಷ, ಇತರೆ ಮಾಹಿತಿ ನೀಡಿ.
  • ಮೊಬೈಲ್ ನಂಬರ್, ಇ-ಮೇಲ್‌ ವಿಳಾಸಕ್ಕೆ ಒಟಿಪಿ ಬರುತ್ತದೆ. ಅದನ್ನು ವ್ಯಾಲಿಟೇಡ್‌ ಮಾಡಿ. ಅಂದರೆ ನಿಮ್ಮದೇ ನಂಬರ್ ಎಂದು ಖಚಿತಪಡಿಸಿಕೊಳ್ಳುವ ಹಂತವಿದು.
  • ನಂತರ ‘Submit’ ಎಂಬಲ್ಲಿ ಕ್ಲಿಕ್ ಮಾಡಿ.
  • ರಿಜಿಸ್ಟ್ರೇಷನ್‌ ನಂಬರ್ ಕ್ರಿಯೇಟ್ ಆಗುತ್ತದೆ. ನಿಮ್ಮ ಸರ್ಕಲ್ ಹೆಸರು ನೆನಪಿರಲಿ.

2 Step

  • ನಂತರ ಮತ್ತೆ ‘https://indiapostgdsonline.gov.in/ ವೆಬ್‌ ವಿಳಾಸಕ್ಕೆ ಹಿಂದಿರುಗಿ.
  • ಇಲ್ಲಿ ‘Stage 2.Apply Online >> Apply’ ಆಯ್ಕೆ ಕ್ಲಿಕ್ ಮಾಡಿ.
  • ರಿಜಿಸ್ಟ್ರೇಷನ್‌ ನಂಬರ್ ಟೈಪಿಸಿ, ನಿಮ್ಮ ಸರ್ಕಲ್ / ವೃತ್ತ ಆಯ್ಕೆ ಮಾಡಿ.
  • ‘Submit’ ಎಂಬಲ್ಲಿ ಕ್ಲಿಕ್ ಮಾಡಿ.
  • ತೆರೆದ ಪುಟದಲ್ಲಿ ಅಗತ್ಯ ಮಾಹಿತಿಗಳನ್ನು ನೀಡಿ. ಅಪ್ಲಿಕೇಶನ್‌ ಪೂರ್ಣಗೊಳಿಸಿ.

3 Step

  • ಪುನಃ ಇಂಡಿಯನ್ ಪೋಸ್ಟ್‌ ಮುಖಪುಟ ವೆಬ್‌ಸೈಟ್‌ https://indiapostgdsonline.gov.in/ ಗೆ ಬನ್ನಿ.
  • ಇಲ್ಲಿ ‘Fee Payment >> Check Fee Status’ ಆಯ್ಕೆ ಕ್ಲಿಕ್ ಮಾಡಿ.
  • ಓಪನ್ ಆಗುವ ಪುಟದಲ್ಲಿ ರಿಜಿಸ್ಟ್ರೇಷನ್ ನಂಬರ್ ನೀಡಿ, ‘Submit’ ಎಂಬಲ್ಲಿ ಕ್ಲಿಕ್ ಮಾಡಿ.
  • ನಂತರ ನೀವು ಇಲ್ಲೂ ಸಹ ಅರ್ಜಿ ಶುಲ್ಕ ಪಾವತಿಗೆ ಅಥವಾ ನಂತರದಲ್ಲಿ ಅರ್ಜಿ ಶುಲ್ಕ ಪಾವತಿಸಿರುವ ಬಗ್ಗೆ ಮಾಹಿತಿ ಚೆಕ್‌ ಮಾಡಿಕೊಳ್ಳಬಹುದು.
  • ಈ ಹಂತದ ನಂತರದಲ್ಲಿ ಮುಂದಿನ ರೆಫರೆನ್ಸ್‌ಗಾಗಿ ಅರ್ಜಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

  1. SSLC marks card / 10ನೇ ತರಗತಿ ಅಂಕಪಟ್ಟಿ
  2. ಅಧಿಕೃತ ಗುರುತಿನ ಚೀಟಿ / ಆಧಾರ್ ಕಾರ್ಡ್
  3. ಜಾತಿ ಪ್ರಮಾಣ ಪತ್ರ
  4. ವಿಶೇಷ ಚೇತನರಾಗಿದ್ದಲ್ಲಿ ಪ್ರಮಾಣ ಪತ್ರ
  5. ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಾಗಿದ್ದಲ್ಲಿ ಪ್ರಮಾಣ ಪತ್ರ
  6. ತೃತೀಯ ಲಿಂಗಿಗಳಾಗಿದ್ದಲ್ಲಿ ಪ್ರಮಾಣ ಪತ್ರ
  7. ಜನ್ಮ ದಿನಾಂಕ ಪ್ರಮಾಣ ಪತ್ರ
  8. ಸರ್ಕಾರಿ ಆಸ್ಪತ್ರೆಗಳಿಂದ ನೀಡಿದ ವೈದ್ಯಕೀಯ ಪ್ರಮಾಣ ಪತ್ರ

ಅರ್ಜಿ ಹಾಕಿದವರು ಶಾರ್ಟ್‌ ಲಿಸ್ಟ್‌ ಆದರೆ ನೇಮಕಾತಿ ಪ್ರಕ್ರಿಯೆಯ 2 ಹಂತದ ದಾಖಲೆ ಪರಿಶೀಲನೆಗೆ ಕರೆಯಲಾಗುತ್ತದೆ. ಈ ವೇಳೆ ಮೇಲಿನ ದಾಖಲೆಗಳ ಮೂಲ ಪ್ರತಿಗಳು, 2 ಸೆಟ್‌ ಸ್ವಯಂ ದೃಢೀಕೃತ ಪ್ರತಿಗಳನ್ನು ಹಾಜರು ಮಾಡಬೇಕಾಗುತ್ತದೆ.

ಇತರೆ ವಿಷಯಗಳು

12 ಲಕ್ಷ ಸರ್ಕಾರಿ ನೌಕರರ ವೇತನ ಹೆಚ್ಚಳ..! ಈ ತಿಂಗಳಿನಿಂದ ಜಾರಿ

ಪ್ರತಿ ವರ್ಷ ಕೇಂದ್ರ ಸರ್ಕಾರ ನೀಡುತ್ತೆ 6,000 ! ಈ ರೀತಿ ಅರ್ಜಿ ಸಲ್ಲಿಸಿದರೆ


Share

Leave a Reply

Your email address will not be published. Required fields are marked *