rtgh

ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆಗೆ ದಿನಾಂಕ ವಿಸ್ತರಣೆ.! ಅಳವಡಿಸದಿದ್ದಲ್ಲಿ ₹500 ರಿಂದ ₹1000 ದಂಡ

hsrp number plate karnataka
Share

ಹಲೋ ಸ್ನೇಹಿತರೇ, ರಾಜ್ಯದಲ್ಲಿ 18,32,787 ವಾಹನಗಳಿಗೆ HSRP number plate ಅಳವಡಿಕೆ ಮಾಡಲಾಗಿದೆ ಎಂದು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಮಾಹಿತಿ ತಿಳಿಸಿದ್ದಾರೆ, ಕೊನೆಯ ದಿನಾಂಕದ ಒಳಗಾಗಿ ನಂಬರ್ ಪ್ಲೇಟ್ ಅಳವಡಿಸದಿದ್ದರೆ ದಂಡ ಹಾಕಲಾಗುವುದು ಎಂದು ತಿಳಿಸಿದ್ದಾರೆ. ಎಷ್ಟು ದಂಡ ವಿಧಿಸಲಾಗುವುದು ಮತ್ತು ಕೊನೆ ದಿನಾಂಕ ಯಾವಾಗ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

hsrp number plate karnataka

ಕರ್ನಾಟಕ ರಾಜ್ಯದಲ್ಲಿ, 2023ರ ಆಗಸ್ಟ್ 18 ರಿಂದ- 2024ರ ಫೆಬ್ರವರಿ 12ರ ವರೆಗೆ 18,32,787 ವಾಹನಗಳಿಗೆ HSRP number plate ಅಳವಡಿಸಲಾಗಿದೆ ಎಂದು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿಯವರು ಹೇಳಿದ್ದಾರೆ.

ಹೆಚ್.ಎಸ್.ಆರ್.ಪಿ ನಂಬರ್‌ ಪ್ಲೇಟ್

ವಿಧಾನ ಪರಿಷತ್ತು ಕಾರ್ಯಕಲಾಪದ ವೇಳೆ ಶಾಸಕ ಮಧು ಜಿ. ಮಾದೇಗೌಡ ಅವರ ಚುಕ್ಕೆಗುರುತಿನ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು ರಾಜ್ಯದಲ್ಲಿ ಏಪ್ರಿಲ್ 2019ಕ್ಕಿಂತ ಮೊದಲು ನೋಂದಣಿ ಮಾಡಿರುವ ವಾಹನಗಳ ಸಂಖ್ಯೆ ಎಷ್ಟು ಹಾಗೂ ಇಲ್ಲಿಯವರೆಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ number plate ಆಳವಡಿಸಿಕೊಂಡಿರುವ ವಾಹಗಳ ಸಂಖ್ಯೆ & ಇದರ ಶೇಕಡವಾರು ಪ್ರಮಾಣ ಎಷ್ಟು ಎಂದ ಪ್ರಶ್ನೆಗೆ ಉತ್ತರಿಸುವ ಸಂದರ್ಭದಲ್ಲಿ ಸಚಿವರು ಇಈ ಮಾಹಿತಿಯನ್ನು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಆದೇಶದಂತೆ ಹಾಗೆ ಎಲ್ಲಾ ರಾಜ್ಯಗಳಲ್ಲಿಯೂ ಅತಿ ಸುರಕ್ಷತಾ ನೋಂದಣಿ ಫಲಕಗಳನ್ನು ಅಳವಡಿಸಲಾಗಿದೆ, ಅದೇ ರೀತಿಯಾಗಿ ರಾಜ್ಯದಲ್ಲಿಯೂ ಸಹ ಫಲಕಗಳನ್ನು ಅಳವಡಿಸಲು ಆದೇಶಿಸಲಾಗಿದೆ, ರಾಜ್ಯದಲ್ಲಿ ಏಪ್ರಿಲ್ 2019ಕ್ಕಿಂತ ಮೊದಲು ಅಂದಾಜು 2.45 ಕೋಟಿ ವಾಹನಗಳು ನೋಂದಣಿಯಾಗಿದೆ, ಸುಮಾರು 2 ಕೋಟಿ ವಾಹನಗಳು ಅಸ್ತಿತ್ವದಲ್ಲಿವೆ ಹಾಗೂ ಇಲ್ಲಿಯವರೆಗೆ ಶೇ.9.16% ಪ್ರಮಾಣದ ವಾಹನಗಳಿಗೆ HSRP number plate ಅಳವಡಿಸಲಾಗಿದೆ ಎಂದು ಹೇಳಿದರು.

ವಾಹನಗಳಿಗೆ HSRP number plate ಅಳವಡಿಸುವ ಸಂಬಂಧ ಪಾರದರ್ಶಕತೆ & ಹೆಚ್ಚುವರಿ ಶುಲ್ಕ ವಿಧಿಸುವುದನ್ನು ತಡೆಗಟ್ಟಲು ಒಇಎಮ್ ಗಳ ಅಧಿಕೃತ ಹೆಚ್.ಎಸ್.ಆರ್.ಪಿ ತಯಾರಕರು ಅಧಿಕೃತಗೊಳಿಸಿದ ಪೋರ್ಟಲ್ ಮೂಲಕ ವಾಹನದ ಮಾಲೀಕರು online ನಲ್ಲಿ ಮಾತ್ರ ಶುಲ್ಕ ಪಾವತಿಸಿ, ಪ್ಲೇಟ್ ಅಳವಡಿಸಿಕೊಳ್ಳಲು ಅವರಿಗೆ ಅನುಕೂಲಕರವಾದ ಸ್ಥಳ & ದಿನಾಂಕವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.

ಇ-ವಾಹನ್ portal ನಲ್ಲಿ ಇರುವ ವಾಹನದ ವಿವರಗಳು ಹಾಗೂ HSRP ತಯಾರಕರು ಅಧಿಕೃತಗೊಳಿಸಿದ online ಪೋರ್ಟಲ್‌ ನಲ್ಲಿನ ವಾಹನದ ವಿವರಗಳೊಂದಿಗೆ ಪರಿಶೀಲನೆಯಾಗಿ ತಾಳೆಯಾದಲ್ಲಿ ಮಾತ್ರ ಹೆಚ್.ಎಸ್.ಆರ್.ಪಿ ಅಳವಡಿಸಲು ಅನುಮತಿ ದೊರಕುತ್ತದೆ. RC ಮಾನ್ಯತೆ ಇಲ್ಲದ ವಾಹನಗಳಿಗೆ ಹೆಚ್.ಎಸ್.ಆರ್.ಪಿ ನೀಡಿ ಕಾನೂನುಬದ್ದಗೊಳಿಸುವ ಪ್ರಶ್ನೆ ಉದ್ಯಮಿಸುವುದಿಲ್ಲ ಎಂದು ತಿಳಿಸಿದರು.

HSRP number plate penalty- ನಿಯಮ ಪಾಲಿಸಿದಿದ್ದರೆ ದಂಡ!

ನಿಗದಿತ ದಿನಾಂಕದೊಳಗೆ HSRP number plat ಅಳವಡಿಸದಿದ್ದಲ್ಲಿ, ಮೊದಲನೇ ಅಪರಾಧಕ್ಕೆ ರೂ. 500 ಹಾಗೂ ಎರಡನೇ & ನಂತರದ ಅಪರಾಧಗಳಿಗೆ ರೂ 1000 ದಂತೆ ಹಾಗೂ ಕಾಲಕಾಲಕ್ಕೆ ಹೊರಡಿಸಲಾಗುವ ಸರ್ಕಾರದ ಆದೇಶದಂತೆ ದಂಡವನ್ನು ವಿಧಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿಯವರು ತಿಳಿಸಿದ್ದಾರೆ.

31 ಮೇ 2024 ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಕೊನೆ ದಿನಾಂಕವಾಗಿದೆ.

ಇತರೆ ವಿಷಯಗಳು

2024-25ನೇ ಶೈಕ್ಷಣಿಕ ಸಾಲು: ರಾಜ್ಯದ 123 ವಸತಿ ಶಾಲೆಗಳಲ್ಲಿ 6ನೇ ತರಗತಿಗೆ ಪ್ರವೇಶಕ್ಕೆ ಅರ್ಜಿ ಆಹ್ವಾನ

ಸರ್ಕಾರದಿಂದ ಬಂತು ಕಶ್ಯಪ ಯೋಜನೆ! ನಾಗರಿಕರಿಗೆ ಸಿಗಲಿದೆ ಪ್ರತಿ ತಿಂಗಳು ₹4,000

FAQ

1.ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಅಳವಡಿಸದಿದ್ದಲ್ಲಿ ಎಷ್ಟು ದಂಡ ವಿಧಿಸಲಾಗುವುದು?

500 ರಿಂದ 1000 ದಂಡ ವಿಧಿಸಲಾಗುವುದು.

2.ಇವರೆಗೆ ಎಷ್ಟು ವಾಹನಗಳಿಗೆ ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಅಳವಡಿಸಲಾಗಿದೆ?

18,32,787 ವಾಹನಗಳಿಗೆ ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಅಳವಡಿಸಲಾಗಿದೆ.


Share

Leave a Reply

Your email address will not be published. Required fields are marked *