rtgh

ವಾಹನ ಸವಾರರೇ ಎಚ್ಚರಾ: ಈ ದಿನಾಂಕದೊಳಗೆ ‘HSRP’ ನಂಬರ್ ಪ್ಲೇಟ್ ಹಾಕಿಸದಿದ್ರೆ ದಂಡ ಗ್ಯಾರಂಟಿ

HSRP Number Plate Kannada
Share

ಬೆಂಗಳೂರು : ವಾಹನಗಳಿಗೆ ‘ HSRP’ ನಂಬರ್ ಪ್ಲೇಟ್ ಅನ್ನು ಅಳವಡಿಸಲು ಅವಧಿಯನ್ನು ವಿಸ್ತರಣೆ ಮಾಡಲಾಗಿದ್ದು ಮೇ.31 ಕೊನೆ ದಿನಾಂಕವಾಗಿದೆ. ಮೇ.31 ರೊಳಗೆ HSRP’ ನಂಬರ್ ಪ್ಲೇಟ್ ಅನ್ನು ಅಳವಡಿಸದಿದ್ರೆ ದಂಡ ಬೀಳುವುದಂತು ಗ್ಯಾರಂಟಿ.

HSRP Number Plate Kannada

ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಅನ್ನು ವಾಹನಗಳ ಸುರಕ್ಷತೆಗಾಗಿ ಈ ಪ್ಲೇಟ್ನ ಅಳವಡಿಕೆಯನ್ನು ಕಡ್ಡಾಯ ಮಾಡಲಾಗಿದೆ. ಕರ್ನಾಟಕ ರಾಜ್ಯದಲ್ಲಿ 1ನೇ ಏಪ್ರಿಲ್ 2019ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ ಹಳೆಯ ಎಲ್ಲಾ (ಹಳೆಯ / ಅಸ್ತಿತ್ವದಲ್ಲಿರುವ ವಾಹನಗಳು) (ಲಘು ಮೋಟಾರು ವಾಹನಗಳು, ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು, ಮಧ್ಯಮ ಮತ್ತು ಭಾರಿ ವಾಣಿಜ್ಯ ವಾಹನಗಳು, ಪ್ರಯಾಣಿಕ ಕಾರುಗಳು, ಟ್ರೈಲರ್ಗಳು, ಟ್ರ್ಯಾಕ್ಟರ್ಗಳು ಇತ್ಯಾದಿ) ವಾಹನಗಳಿಗೆ ಅತಿ ಸುರಕ್ಷಿತವಾದ ನೋಂದಣಿಯನ್ನು ಫಲಕಗಳನ್ನು (ಹೆಚ್ಎಸ್ಆರ್ಪಿ) ಅಳವಡಿಸುವುದು ಕಡ್ಡಾಯವಾಗಿದೆ.

ಏಪ್ರಿಲ್ 2019ಕ್ಕಿಂತ ಮೊದಲು ನೋಂದಣಿಯನ್ನು ಮಾಡಿಸಿದ್ದ ಹಳೆ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ಗಳನ್ನು (HSRP) ಅಳವಡಿಸುವುದು ಕಡ್ಡಾಯ ಮಾಡಿ ಸಾರಿಗೆ ಇಲಾಖೆಯು ಆದೇಶವನ್ನು ಹೊರಡಿಸಿತ್ತು. ಫೆಬ್ರವರಿ 17ರೊಳಗೆ HSRP ನಂಬರ್ ಪ್ಲೇಟ್ಗಳನ್ನು ಅಳವಡಿಸುವಂತೆ ಡೆಡ್ ಲೈನ್ ಅನ್ನು ನೀಡಿತ್ತು. ಈಗ ಮೇ.31ಕ್ಕೆ ಕೊನೆಯ ದಿನಾಂಕವನ್ನು ನಿಗದಿಪಡಿಸಲಾಗಿದೆ.

ಇದನ್ನೂ ಸಹ ಓದಿ: ಪಡಿತರ ಚೀಟಿದಾರರಿಗೆ ಭರ್ಜರಿ ಸುದ್ದಿ! ಸರ್ಕಾರದಿಂದ ಖಾತೆಗೆ ₹2.5 ಲಕ್ಷ ಕಳುಹಿಸಲಾಗುವುದು

HSRP ನಂಬರ್ ಪ್ಲೇಟ್ಗಳನ್ನು ಆಳವಡಿಕೆಯನ್ನು ಮಾಡಲು ಆನ್ಲೈನ್ ಮೂಲಕ ನೋಂದಣಿಯನ್ನು ಮಾಡಿಸಬೇಕಾಗಿದ್ದು, ಈ ಸಮಯದಲ್ಲಿ ತಾಂತ್ರಿಕ ತೊಂದರೆಗಳು ಉಂಟಾದರೆ ಅಂತಹ ಸಂದರ್ಭದಲ್ಲಿ ಅದನ್ನು ಬಗೆಹರಿಸಲು ಸಹಾಯವಾಣಿಯನ್ನು ಸಾರಿಗೆ ಇಲಾಖೆ ಪ್ರಾರಂಭಿಸಿದೆ. ವಾಹನಗಳ ಮಾಲೀಕರು ಬೆಳಗ್ಗೆ 10 ರಿಂದ ಸಂಜೆ 5.30ರ ತನಕ ಸಹಾಯವಾಣಿ ಸಂಖ್ಯೆ 9449863429/26 ಸಂಖ್ಯೆಗೆ ಕರೆ ಮಾಡಬಹುದು. ಆನ್ಲೈನ್ ವೆಬ್ ಸೈಟ್ https://transport.karnataka.gov.in?utm_source=DH-MoreFromPub&utm_medium=DH-app&utm_campaign=DH ಅಥವ www.siam.in ಗೆ ಭೇಟಿಯನ್ನು ನೀಡಿ ವಾಹನಗಳಿಗೆ HSRP ನಂಬರ್ ಪ್ಲೇಟ್ಗಳನ್ನು ನೋಂದಣಿಯನ್ನು ಮಾಡಿಕೊಳ್ಳಬಹುದು ಎಂದು ಸಾರಿಗೆ ಇಲಾಖೆಯು ಮಾಹಿತಿಯನ್ನು ತಿಳಿಸಿದೆ.

ಉದ್ಯೋಗ ಖಾತರಿ ಕೆಲಸಗಾರರಿಗೆ ಹೊಸ ಸುದ್ದಿ!! ನಿಯಮಗಳಲ್ಲಿ ದೊಡ್ಡ ಬದಲಾವಣೆ ಮಾಡಿದ ಸರ್ಕಾರ

ಅನ್ನದಾತರಿಗೆ ಭರ್ಜರಿ ಆಫರ್.‌!! ಸೋಲಾರ್‌ ಪಂಪ್‌ ಸಬ್ಸಿಡಿ ಇಲ್ಲಿಂದಲೇ ಲಭ್ಯ


Share

Leave a Reply

Your email address will not be published. Required fields are marked *