rtgh
Headlines

ಗೃಹಲಕ್ಷ್ಮಿಯರಿಗೆ ಶಾಕಿಂಗ್‌ ಸುದ್ದಿ: ಗೃಹಲಕ್ಷ್ಮಿ & ಶಕ್ತಿ ಯೋಜನೆಗೆ ಗುಡ್ ಬೈ ಹೇಳಲಿದ್ಯಾ ರಾಜ್ಯ ಸರ್ಕಾರ ?!

Guarantee scheme
Share

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಚರ್ಚೆಯು ಶುರುವಾಗಿದೆ. ಈಗಾಗಲೇ ಸರ್ಕಾರದ ಕೆಲವು ಶಾಸಕರು ಪರೋಕ್ಷವಾಗಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಬಗ್ಗೆ ಮಾತನಾಡಿದಂತಿದೆ.

Guarantee scheme

ಐದು ಗ್ಯಾರಂಟಿಗಳ ಘೋಷಣೆಯನ್ನು ಮಾಡಿ ರಾಜ್ಯದಲ್ಲಿ ಅಧಿಕಾರವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದ ಕಾಂಗ್ರೆಸ್ ಪಕ್ಷವು, ಅಧಿಕಾರಕ್ಕೆ ಬಂದ ಮೇಲೆ ಎಲ್ಲಾ ಗ್ಯಾರಂಟಿಗಳನ್ನು ಜಾರಿಗೊಳಿಸಿತ್ತು.

ಇದರಿಂದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರರು ಕಾಂಗ್ರೆಸ್ ಅನ್ನು ಕೈಹಿಡಿಯಲಿದ್ದಾರೆ ಎಂಬ ಆತ್ಮವಿಶ್ವಾಸದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಸಹ ಇದ್ದರು. ಆದರೆ ಫಲಿತಾಂಶವು ಕಾಂಗ್ರೆಸ್ ನಾಯಕರಿಗೆ ಶಾಕ್ ಕೊಟ್ಟಿದೆ.

ರಾಜ್ಯದಲ್ಲಿ 20ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳು ಗೆಲ್ಲುವ ವಿಶ್ವಾಸದಲ್ಲಿದ್ದ ಕಾಂಗ್ರೆಸ್ ಕೇವಲ 7 ಸ್ಥಾನಗಳಿಗೆ ಸೀಮಿತವಾಗಿದೆ. ಹೀಗಾಗಿ ರಾಜ್ಯದ ಜನರು ಗ್ಯಾರಂಟಿ ಯೋಜನೆಗಳ ಪರವಾಗಿ ಇಲ್ಲ ಎನ್ನುವ ಮಾತುಗಳನ್ನ ಈಗಾಗಲೇ ಕೆಲ ರಾಜ್ಯದ ಕಾಂಗ್ರೆಸ್ ನಾಯಕರುಗಳು ಮಾತನಾಡಿದ್ದಾರೆ. ಆ ಮೂಲಕವಾಗಿ ಪರೋಕ್ಷವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಬ್ರೇಕ್ ಹಾಕಲಿದ್ಯಾ? ಎನ್ನುವ ಚರ್ಚೆಗಳು ಶುರುವಾಗಿದೆ.

ಇದನ್ನೂ ಸಹ ಓದಿ: ಇಬ್ಬರು ಹೆಣ್ಣು ಮಕ್ಕಳು ಇರುವ ಕುಟುಂಬಕ್ಕೆ 2 ಲಕ್ಷ ನೆರವು!!

ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಮಾತನಾಡಿದ್ದ ಡಿಸಿಎಂ ಡಿಕೆ ಶಿವಕುಮಾರ್ ರಾಜ್ಯದ ಜನ ಗ್ಯಾರಂಟಿಗಳ ಪರವಾಗಿ ಇಲ್ಲ ಎಂಬುದನ್ನ ಹೇಳಿದರು. ಇನ್ನುಳಿದ ಹಾಗೆಯೆ ಮಾಗಡಿ ಬಾಲಕೃಷ್ಣ ಸೇರಿದಂತೆ ಕೆಲವು ಕಾಂಗ್ರೆಸ್ ಶಾಸಕರು ಗ್ಯಾರಂಟಿಯ ಯೋಜನೆಗಳನ್ನು ಮುಂದುವರಿಸಬೇಕಾ ಬೇಡವ ಎನ್ನುವುದರ ಬಗ್ಗೆ ರಾಜ್ಯ ಸರ್ಕಾರವು ಪರಾಮರ್ಶಿಸಲಿದೆ ಎನ್ನುವ ಹೇಳಿಕೆಯನ್ನು ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಪ್ರಮುಖವಾಗಿ ರಾಜ್ಯ ಸರ್ಕಾರದ ಶಕ್ತಿ ಯೋಜನೆ ಮತ್ತು ಮಹಿಳೆಯರಿಗೆ ಪ್ರತಿ ತಿಂಗಳು 2000 ನೀಡುತ್ತಿದ್ದ ಗೃಹಲಕ್ಷ್ಮಿ ಯೋಜನೆಗೆ ಬ್ರೇಕ್ ಹಾಕುವ ಚಿಂತನೆಯಲ್ಲಿದೆ ಎನ್ನುವ ಚರ್ಚೆಗಳು ಗರಿಗೆದರಿದ್ದು ಮುಂದಿನ ದಿನಗಳ ಸರ್ಕಾರದ ನಡೆಯನ್ನು ಕಾದು ನೋಡಬೇಕಿದೆ.

ಉಜ್ವಲಾ ಯೋಜನೆ ಮಹಿಳೆಯರಿಗೆ ಮುಂದಿನ ತಿಂಗಳಿಂದ ಗ್ಯಾಸ್‌ ಬಂದ್! ಈ ಕೆಲಸ ಬೇಗ ಮಾಡಿ

ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಗ್ರಾಹಕರಿಗೆ ಈ ಕೆಲಸ ಕಡ್ಡಾಯ! ಇಲ್ಲದಿದ್ದರೆ ಸಬ್ಸಿಡಿ ಬಂದ್


Share

Leave a Reply

Your email address will not be published. Required fields are marked *