rtgh
Headlines

ಗೃಹಲಕ್ಷ್ಮಿ 8 ನೇ ಕಂತಿನ ಹಣ ಪಡೆಯಲು ಸರ್ಕಾರದ ಹೊಸ ರೂಲ್ಸ್!

gruha lakshmi scheme new update
Share

ಹಲೋ ಸ್ನೇಹಿತರೇ, ರಾಜ್ಯದ ಮಹಿಳೆಯರಿಗಾಗಿ ಕಾಂಗ್ರೇಸ್ ಸರ್ಕಾರ‌ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದೆ. ಗೃಹ ಮಹಿಳೆಯರು ಗೃಹ ಲಕ್ಷ್ಮೀ ಯೋಜನೆ ಮೂಲಕ ಆರ್ಥಿಕ ನೆರವು ಪಡೆದಿದ್ದಾರೆ. ಏಳನೇ ಕಂತನ್ನು ಈಗಾಗಲೇ ಗೃಹ ಲಕ್ಷ್ಮಿ ಯೋಜನೆಗೆ ಜಮಾ ಮಾಡಲಾಗಿದೆ. ಆದರೆ ಈಗ 8ನೇ ಕಂತಿನ ಹಣ ವರ್ಗಾವಣೆಗೂ ಮುನ್ನ ಕೆಲವೊಂದು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ. ಈ ಹೊಸ ನಿಯಮಗಳ ಬಗ್ಗೆ ತಿಳಿಯಲು ಈ ಲೇಖನವನ್ನು ಕೊನೆವರೆಗೂ ಓದಿ..

gruha lakshmi scheme new update

ಗೃಹ ಲಕ್ಷ್ಮಿ ಯೋಜನೆ ಬಿಗ್ ಅಪ್‌ಡೇಟ್: ಏಳನೇ ಕಂತನ್ನು ಕರ್ನಾಟಕ ಗೃಹ ಲಕ್ಷ್ಮಿ ಯೋಜನೆಗೆ ಠೇವಣಿ ಮಾಡಲಾಗಿದೆ. ಆದರೆ ಈಗ 8ನೇ ಕಂತಿನ ಹಣ ವರ್ಗಾವಣೆಗೂ ಮುನ್ನ ಕೆಲವೊಂದು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ. ಗೃಹ ಲಕ್ಷ್ಮೀ ಯೋಜನೆ ಮೂಲಕ ಪ್ರತಿ ಮನೆಯ ಮಾಲೀಕರ ಬ್ಯಾಂಕ್ ಖಾತೆಗೆ 2000 ರೂ.ಗಳನ್ನು ನೇರವಾಗಿ ವರ್ಗಾಯಿಸಲಾಗುತ್ತಿದೆ. ಕಳೆದ ಏಳು ತಿಂಗಳಿನಿಂದ ಗೃಹಿಣಿಯರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಆದರೆ ಗೃಹ ಲಕ್ಷ್ಮೀ ಯೋಜನೆಗೆ ಇನ್ನೂ ಹಲವರಿಗೆ ಹಣ ಪಾವತಿಯಾಗಿಲ್ಲ.

ಈಗ, ನೀವು ಗೃಹ ಲಕ್ಷ್ಮಿ ಯೋಜನೆಯ 8 ನೇ ಕಂತನ್ನು ಪಡೆಯಲು ಬಯಸಿದರೆ, ನೀವು ಕೆಲವು ನಿಯಮಗಳನ್ನು ಅನುಸರಿಸಬೇಕು. ಮುಖ್ಯವಾಗಿ, ಗೃಹ ಲಕ್ಷ್ಮಿ ಯೋಜನೆಯ ಹಣವನ್ನು ವರ್ಗಾವಣೆ ಮಾಡುವ ಬ್ಯಾಂಕ್ ಖಾತೆಗೆ KYC ಅನ್ನು ಕಡ್ಡಾಯವಾಗಿ ಮಾಡಬೇಕು. EKYC ಯೊಂದಿಗೆ NPCI ಮ್ಯಾಪಿಂಗ್ ಅನ್ನು ಹೊಂದಿರದವರ ಖಾತೆಗೆ ಹಣ ವರ್ಗಾವಣೆಯನ್ನು ಮಾಡಲಾಗುವುದಿಲ್ಲ.

ಗೃಹ ಲಕ್ಷ್ಮಿ ಯೋಜನೆಯ 7ನೇ ಕಂತನ್ನು ಜಮಾ ಮಾಡದೇ ಇರುವ ಖಾತೆಗಳಿಗೆ ಶೀಘ್ರದಲ್ಲೇ ಪಾವತಿಸಲಾಗುವುದು. ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಡಿಬಿಟಿ ಕರ್ನಾಟಕ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ ನಿಮ್ಮ ಖಾತೆಗೆ ಹಣ ವರ್ಗಾವಣೆಯ ಮಾಹಿತಿಯನ್ನು ಮನೆಯಲ್ಲಿಯೇ ಕುಳಿತು ಪಡೆಯಬಹುದು.

ಇದನ್ನೂ ಸಹ ಓದಿ : ರೈತರಿಗೆ ಕೃಷಿ ಭಾಗ್ಯ ಯೋಜನೆಯ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

ಗೃಹ ಲಕ್ಷ್ಮಿ ಯೋಜನೆಯಡಿ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ನೀವು ಈಗಾಗಲೇ ಗೃಹ ಲಕ್ಷ್ಮಿ ಯೋಜನೆಗಾಗಿ ಅರ್ಜಿಯನ್ನು ಸಲ್ಲಿಸಿದ್ದರೆ ಮತ್ತು ಹಣವನ್ನು ವರ್ಗಾಯಿಸದಿದ್ದರೆ, ನಿಮ್ಮ ಅರ್ಜಿಯನ್ನು ತಕ್ಷಣವೇ ಮರುಪರಿಶೀಲಿಸುವಂತೆ ಮಾಡುವುದು ಬಹಳ ಮುಖ್ಯ.

ಗೃಹ ಲಕ್ಷ್ಮಿ ಯೋಜನೆಯಡಿ ಮನೆ ಮಾಲೀಕರು ಮಾತ್ರ 2000 ರೂ.ಗಳನ್ನು ಪಡೆಯಬಹುದು. ಒಮ್ಮೆ ಅತ್ತೆ ಮನೆಯ ಮಾಲೀಕರಾದರೆ, ಅತ್ತೆಯ ಮರಣದ ನಂತರ ಕುಟುಂಬದ ಹಿರಿಯ ಸೊಸೆ ಗೃಹ ಲಕ್ಷ್ಮಿ ಯೋಜನೆಯಡಿ ಸಹಾಯಧನ ಪಡೆಯಲು ಅರ್ಹರಾಗಿರುತ್ತಾರೆ.

ಹೊಸದಾಗಿ ಅರ್ಜಿ ಸಲ್ಲಿಸಲು ಸರಕಾರ ಈಗಾಗಲೇ ಕಾಲಾವಕಾಶ ನೀಡಿರುವುದರಿಂದ ಮನೆಯ ಸೊಸೆಯೂ ಅರ್ಜಿ ಸಲ್ಲಿಸಬಹುದು. ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿ ಇನ್ನೂ ಹಣ ಸಿಗದೇ ಇರುವವರು ಈ ಯೋಜನೆಯಡಿ ಸಲ್ಲಿಸಿರುವ ಅರ್ಜಿಯನ್ನು ಮರು ಪರಿಶೀಲಿಸಬೇಕು.

ಇತರೆ ವಿಷಯಗಳು:

ಏ.1 ರಿಂದ 30ರವರೆಗೆ ಜಾನುವಾರುಗಳಿಗೆ ಕಾಲುಬಾಯಿ ಲಸಿಕಾ ಅಭಿಯಾನ! ರೋಗ ತಡೆಗಟ್ಟಲು ಲಸಿಕೆ ಕಡ್ಡಾಯ

ಹೆದ್ದಾರಿ ಟೋಲ್‌ ದರ ಡಬಲ್‌; ಏಪ್ರಿಲ್ 1 ರಿಂದ ದರ ಏರಿಕೆ

ಚುನಾವಣೆ ಹಿನ್ನಲೆ ಅನ್ನಭಾಗ್ಯ ಯೋಜನೆಯಲ್ಲೂ ಬದಲಾವಣೆ!! ನಾಗರಿಕರಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿ


Share

Leave a Reply

Your email address will not be published. Required fields are marked *