ಹಲೋ ಸ್ನೇಹಿತರೇ, ಕರ್ನಾಟಕ ರಾಜ್ಯ ಸರಕಾರ ಜಾರಿಗೆ ತಂದಿರುವ ಗೃಹಲಕ್ಷ್ಮೀ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಯಡಿ ಕೋಟ್ಯಾಂತರ ಮಂದಿ ಪ್ರಯೋಜನ ಪಡೆಯುತ್ತಿದ್ದಾರೆ. ಆದ್ರೆ ಮಾರ್ಚ್ 25 ರ ಒಳಗಾಗಿ ಈ ಕೆಲಸವನ್ನು ಮಾಡದೇ ಇದ್ರೆ ಅಂತವರಿಗೆ ಈ ಎರಡು ಯೋಜನೆಗಳ ಪ್ರಯೋಜನವು ನಿಮಗೆ ಸಿಗೋದಿಲ್ಲ. ಅಷ್ಟಕ್ಕೂ ನೀವು ತಪ್ಪದೇ ಮಾಡಬೇಕಾದ ಕೆಲಸ ಯಾವುದು ಎಂದು ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ.
ಗೃಹಲಕ್ಷ್ಮೀ, ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಹೊಸ ಆದೇಶ ಹೊರಡಿಸಿದೆ. ಈ ಆದೇಶದ ಪ್ರಕಾರ ಕೆಲವೊಂದು ಕಾರ್ಯವನ್ನು ಈ 2 ಯೋಜನೆಗಳ ಫಲಾನುಭವಿಗಳು ತಪ್ಪದೆಯೇ ಮಾಡಬೇಕಾಗಿದೆ. ಒಂದೊಮ್ಮೆ ಈ ಕೆಲಸ ಮಾಡದೇ ಇದ್ರೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮೆಯು ಆಗೋದಿಲ್ಲ.
ಕರ್ನಾಟಕ ಸರಕಾರದ ಹೊಸ ಆದೇಶದ ಪ್ರಕಾರ, ನಿಮ್ಮ ಬ್ಯಾಂಕ್ ಖಾತೆಗೆ ಎನ್ಪಿಸಿಐ ಮ್ಯಾಪಿಂಗ್, ಆಧಾರ್ ಕಾರ್ಡ್ ಲಿಂಕ್, ಕೆವೈಸಿ ಮಾಡಿಸುವುದು ಕಡ್ಡಾಯವಾಗಿರುತ್ತದೆ.
ಆದರೆ ಈ ಕಾರ್ಯವನ್ನು ನೀವು ಮಾಡಿಸದೇ ಇದ್ರೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗೋದಿಲ್ಲ. ಹೀಗಾಗಿ ನೀವು ಖಾತೆ ಹೊಂದಿರುವ ಬ್ಯಾಂಕ್ಗೆ ತೆರಳಿ ಒಮ್ಮೆಯಾದರು ಪರಿಶೀಲಿಸಿಕೊಳ್ಳುವುದು ಉತ್ತಮ.
ಉಚಿತ ಅಣಬೆ ತರಬೇತಿ ಮಾರ್ಚ್ 25 ರಿಂದ ಆರಂಭ.! ಕಡಿಮೆ ಖರ್ಚು ಹೆಚ್ಚು ಲಾಭ ಇಂದೇ ನೋಂದಾಯಿಸಿಕೊಳ್ಳಿ
ಪ್ರತೀ ಭಾರತೀಯರು ಆಧಾರ್ ಕಾರ್ಡ್ ಹೊಂದುವುದು ಕಡ್ಡಾಯವಾಗಿದೆ. ನೀವು ಆಧಾರ್ ಪಡೆದುಕೊಂಡು ಹತ್ತು ವರ್ಷ ಕಳೆದಿದ್ರೆ ಯಾವುದಕ್ಕೂ ಒಮ್ಮೆ ನಿಮ್ಮ ಕಾರ್ಡ್ ಅನ್ನು ಅಪ್ಡೇಟ್ಸ್ ಮಾಡಿಸಿಕೊಳ್ಳುವುದು ಉತ್ತಮ. ಒಂದೊಮ್ಮೆ ನಿಮ್ಮ ಕಾರ್ಡ್ ತುಂಬ ಹಳೆಯದಾಗಿದ್ರೆ ನಿಮ್ಮ ಬ್ಯಾಂಕ್ ಖಾತೆಗೆ ಗ್ಯಾರಂಟಿ ಯೋಜನೆಯ ಹಣ ನೇರವಾಗಿ ವರ್ಗಾವಣೆಯು ಆಗೋದಿಲ್ಲ.
ನಿಮ್ಮ ಆಧಾರ್ ಕಾರ್ಡ್ನಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಸೋದು ಅಗತ್ಯ ಇಲ್ಲದೇ ಇದ್ದರೂ ಕೂಡ ನೀವು ಯಾವುದಕ್ಕೂ ಒಮ್ಮೆ ಆಧಾರ್ ಕಾರ್ಡ್ ಅನ್ನು ಅಪ್ಟೇಟ್ಸ್ ಮಾಡಿಸುವುದು ಬಹಳ ಉತ್ತಮ. 2024ರ ಜೂನ್ 14ರ ವರೆಗೆ ಆಧಾರ್ ಕಾರ್ಡ್ ಉಚಿತ ಅಪ್ಟೇಟ್ಸ್ಗೆ ಸರ್ಕಾರದ ಅವಕಾಶವನ್ನು ನೀಡಿದೆ. ಹೀಗಾಗಿ ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.
ಒಂದೊಮ್ಮೆ ನೀವು ಸರ್ಕಾರದ ಆದೇಶದಲ್ಲಿ ನೀಡಲಾಗಿರುವ ಅಂಶಗಳನ್ನು ಪಾಲನೆ ಮಾಡದೇ ಇದ್ರೆ ನಿಮಗೆ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮೀ ಯೋಜನೆಯ ಹಣ ಬರೋದೇ ಇಲ್ಲ. ಯಾವುದಕ್ಕೂ ಒಮ್ಮೆ ನಿಮ್ಮ ಖಾತೆಯ ಎಲ್ಲಾ ಮಾಹಿತಿಗಳು ಸರಿಯಾಗಿ ಇದೆಯೇ ಅನ್ನೋದನ್ನು ಒಮ್ಮ ಪರಿಶೀಲಿಸಿಕೊಳ್ಳಿ.
ಇತರೆ ವಿಷಯಗಳು:
5,8,9,11ನೇ ತರಗತಿ ಬೋರ್ಡ್ ಎಕ್ಸಾಂಗೆ ಗ್ರೀನ್ ಸಿಗ್ನಲ್!! ಗೊಂದಲದಲ್ಲಿದ್ದ ಪೋಷಕರು, ಮಕ್ಕಳಿಗೆ ಬಿಗ್ ರಿಲೀಫ್
SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ!! ಮನೆ ಬಾಗಿಲಿಗೆ ಬರಲಿದೆ KSRTC