ಹಲೋ ಸ್ನೇಹಿತರೆ, ಮಹಿಳೆಯರ ಅಭಿವೃದ್ಧಿಗಾಗಿ ಸರಕಾರ ಹಲವು ರೀತಿಯ ಸೌಲಭ್ಯ ಗಳನ್ನು ನೀಡುತ್ತಲೇ ಬಂದಿದೆ. ಅದೇ ರೀತಿ ಮಹಿಳೆಯರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂಬ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಅದರಲ್ಲಿ ಉಚಿತವಾಗಿ ಒದಗಿಸುವ ಗ್ಯಾಸ್ ಸಿಲಿಂಡರ್ ವ್ಯವಸ್ಥೆ ಕೂಡ ಒಂದು. ಅನೇಕ ಪ್ರದೇಶದಲ್ಲಿ ಇಂದು ಕೂಡ ಮಹಿಳೆಯರು ಕಟ್ಟಿಗೆ, ಇದ್ದಿಲು ಬಳಸಿಯೇ ಅಡುಗೆ ತಯಾರಿ ಮಾಡುತ್ತಿದ್ದು ಮಹಿಳೆಯರಿಗೆ ಇದು ಕಷ್ಟವೇ ಆಗಿದ್ದು ಹೀಗಾಗಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಕೇಂದ್ರ ಸರಕಾರವು ಜಾರಿಗೆ ತಂದಿದೆ. ಇ ಯೋಜನೆಯ ಹೊಸ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.
Contents
ಪ್ರಧಾನ ಮಂತ್ರಿ ಉಜ್ವಲ ಯೋಜನೆ:
ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು 2016 ರಲ್ಲಿ ಸರ್ಕಾರ ಪ್ರಾರಂಭಿಸಲಾಯಿತು. ಈ ಯೋಜನೆಯನ್ನು ಕೇಂದ್ರ ಜಾರಿಗೆ ತಂದಿದ್ದು ಇದರಿಂದ ಲಕ್ಷಾಂತರ ಮಹಿಳೆಯರು ಉಚಿತ ಗ್ಯಾಸ್ ಕನೆಕ್ಷನ್ ಅನ್ನು ಪಡೆಯುತ್ತಿದ್ದಾರೆ. ಅದೇ ರೀತಿ ಅದರ ಜೊತೆ ಸಬ್ಸಿಡಿ ಮೊತ್ತವನ್ನು ಸಹ ಪಡೆದುಕೊಳ್ಳುತ್ತಿದ್ದಾರೆ. ಈ ಸೌಲಭ್ಯವನ್ನು ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳೆಯರು ಬಡತನ ರೇಖೆಗಿಂತ ಕೆಳಗಿರುವವರು ಉಚಿತ ಗ್ಯಾಸ್ ಕನೆಕ್ಷನ್ ಸೌಲಭ್ಯ ಪಡೆದುಕೊಳ್ಳಲು ಅವಕಾಶ ಇದೆ.
ಇದನ್ನು ಓದಿ: ಈ 21 ರಾಜ್ಯಗಳಲ್ಲಿನ ನೌಕರರಿಗೆ ₹40000 ಬರಲಾರಂಭ!
ಉಜ್ವಲ ಯೋಜನೆ ಪಟ್ಟಿ ಬಿಡುಗಡೆ:
ಇದೀಗ ಕೆಲವೊಂದು ಹೊಸ ಫಲಾನುಭವಿಗಳು ಕೂಡ ಅರ್ಜಿ ಸಲ್ಲಿಕೆ ಮಾಡಿದ್ದು ಈ ಫಲಾನುಭವಿಗಳ ಹೆಸರುಗಳು ಇರುವ ಪಟ್ಟಿ ಬಿಡುಗಡೆ ಮಾಡಲಾಗಿದೆ. ನೀವು ಕೂಡ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅರ್ಜಿ ಸಲ್ಲಿಕೆ ಮಾಡುವುದಾದರೆ ಹತ್ತಿರದ ಗ್ಯಾಸ್ ವಿತರಕರ ಕಚೇರಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿ.
ಪಟ್ಟಿಯಲ್ಲಿನ ಹೆಸರನ್ನು ಚೆಕ್ ಮಾಡಿ:
- ನಿಮ್ಮ ಬಳಿ ಆಧಾರ್ ಕಾರ್ಡ್ ಹಾಗೂ ಮೊಬೈಲ್ ಸಂಖ್ಯೆ ಇದ್ರೆ , ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡಬಹುದು.
- https://Mylpg.in ಈ ವೆಬ್ಸೈಟ್ ಗೆ ಲಾಗಿನ್ ಆಗಿ, ಫಲಾನುಭವಿಗಳ ಪಟ್ಟಿ ಎಂಬ ಆಯ್ಕೆಯನ್ನು ಕ್ಕಿಕ್ ಮಾಡಿ. ನಂತರ ನಿಮ್ಮ ರಾಜ್ಯ, ಜಿಲ್ಲೆ ಇತ್ಯಾದಿ ಮಾಹಿತಿ ನೀಡಿದರೆ ನಂತರ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಕಾಣಸಿಗಲಿದೆ.
ಉಜ್ವಲ್ ಯೋಜನೆಯ ಅರ್ಹತೆ ಏನು?
- ಈ ಯೋಜನೆಗೆ ಅರ್ಜಿ ಹಾಕಲು ಅರ್ಜಿದಾರರು ಮಹಿಳೆಯೇ ಆಗಿರಬೇಕು.
- ಮಹಿಳೆಯ ವಯಸ್ಸು 18ಕ್ಕಿಂತ ಹೆಚ್ಚು ಇರಬೇಕು.
- ಬಿಪಿಎಲ್ ಕಾರ್ಡ್ ಇದ್ದರೆ ಎಲ್‌ಪಿಜಿ ಕನೆಕ್ಷನ್ ಸಿಗಲಿದೆ.
- ಇನ್ನು ಈ ಹಿಂದೆ ಇದರ ಸೌಲಭ್ಯ ಪಡೆದಿದ್ದರೆ ಮತ್ತೆ ಅರ್ಜಿ ಸಲ್ಲಿಕೆ ಮಾಡುವಂತಿಲ್ಲ.
ಇತರೆ ವಿಷಯಗಳು:
BBMP 11307 ಬೃಹತ್ ನೇಮಕಾತಿ: ಪೌರಕಾರ್ಮಿಕರು (ಗುಂಪು D) ಹುದ್ದೆಗಳಿಗೆ ಅರ್ಜಿ ಸಲ್ಲಿಸಿ
ಎಲ್‌ಪಿಜಿ ಗ್ರಾಹಕರ ಗಮನಕ್ಕೆ: ಈ ಕೆಲಸ ಮಾಡದಿದ್ರೆ ಉಚಿತ ಗ್ಯಾಸ್ ಸಿಲಿಂಡರ್ ಕ್ಯಾನ್ಸಲ್!