ಹಲೋ ಸ್ನೇಹಿತರೇ, ಶ್ರಾವಣ ಮಾಸ ಸಾಲು ಸಾಲು ಹಬ್ಬಗಳ ಮಾಸ… ವರಮಹಾಲಕ್ಷ್ಮಿಯನ್ನು ಬರಮಾಡಿಕೊಳ್ಳುಲು ತಯಾರಿ ಭರದಿಂದ ಸಾಗಿವೆ. ಆದರೆ ಹೂಗಳ ಬೆಲೆ ಏರಿದ್ದು, ಗ್ರಾಹಕರಿಗೆ ಸಂಕಷ್ಟವಾದರೆ, ರೈತರಿಗೆ ಸಂತಸ ತಂದಿದೆ. ಆಷಾಢ ಮಾಸದಲ್ಲಿ ಯಾವುದೇ ಹಬ್ಬ, ಶುಭ ಸಮಾರಂಭಗಳು ನಡೆಯುವುದಿಲ್ಲ.
ಕಳೆದ ಒಂದು ತಿಂಗಳಿನಿಂದ ಕಡಿಮೆಯಿದ್ದ ಹೂಗಳ ಬೆಲೆ ಕಳೆದ ಒಂದು ವಾರದಿಂದ ನಿಧಾನವಾಗಿ ಏರತೊಡಗಿದೆ. ಅದರಲ್ಲೂ ವರಾಮಹಾಲಕ್ಷಿ ಹಬ್ಬಕ್ಕೆ ಇನ್ನೆರಡು ದಿನ ಬಾಕಿ ಉಳಿದಿದ್ದು, ಮಾರುಕಟ್ಟೆಗೆ ತರಹೇವಾರಿ ಹೂಗಳು ಬರುತ್ತಿವೆ. ಇಂದಿನಿಂದಲೇ ವ್ಯಾಪಾರಿಗಳು ಬೆಲೆಯನ್ನು ಹೆಚ್ಚಿಸಿ ಮಾರಾಟ ಮಾಡುತ್ತಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಕೆಜಿಗೆ 80 ರೂ.ಗೆ ಮಾರಾಟವಾಗುತ್ತಿದ್ದ ಸುನಾಮಿ ರೋಜ್ 200 ರೂ. ತಲುಪಿದೆ. ಸೇವಂತಿಗೆ ಕೆಜಿಗೆ 250 ರೂ., ಮಾರಿಗೋಲ್ಡ್ 250 ರೂ. ಕನಕಾಂಬರ ಒಂದು ಸಾವಿರ ರೂ. ತಲುಪಿದೆ.
ಇದನ್ನೂ ಸಹ ಓದಿ : ಗ್ರಾಹಕರಿಗೆ ಬಂಪರ್ ಆಫರ್: 450 ರೂ.ಗೆ ಗ್ಯಾಸ್ ಸಿಲಿಂಡರ್..!
ರಾಜ್ಯದ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ರಾಮನಗರ, ಜಿಲ್ಲೆಗಳಲ್ಲಿ ಹೆಚ್ಚಾಗಿ ಕನಕಾಂಬರ, ಸೇವಂತಿಗೆ, ಚೆಂಡು ಹೂ, ಸುಗಂಧರಾಜ, ಕಾಕಡ ಹೂಗಳನ್ನು ಬೆಳೆಯಲಾಗುತ್ತಿದ್ದು, ಬಿರು ಬೇಸಿಗೆಯಿಂದ ನೀರಿಲ್ಲದೆ ಒಣಗಿದ್ದ ಹೂವಿನ ತೋಟ ಕಳೆದ ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಮತ್ತೆ ಚಿಗುರೊಡೆದ್ದು ಇಳುವರಿ ಚೆನ್ನಾಗಿ ಬಂದಿದೆ.
ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣಲ್ಲಿ ಹೂ ಬರುತ್ತಿದ್ದು, ಬೇಡಿಕೆ ಹೆಚ್ಚಾಗಿ ಬೆಲೆ ಏರಿಕೆಯಾಗಿದೆ. ಈಗಾಗಲೆ ಮನೆಗಳಲ್ಲಿ ಲಕ್ಷ್ಮಿ ಪ್ರತಿಷ್ಠಾಪನೆಗೆ ಗೃಹಿಣಿಯರು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಅಂದವಾಗಿ ಅಲಂಕರಿಸಲು ಹೂಗಳು ಹೆಚ್ಚಾಗಿ ಬೇಕು. ಬೆಲೆ ಹೆಚ್ಚಾದರೂ ಸರಿಯೇ ಹಬ್ಬ ಮಾಡಬೇಕಲ್ಲ ಎಂದು ಮಹಿಳೆಯರು ಸಿದ್ಧತೆಯಲ್ಲಿದ್ದಾರೆ.
Contents
ಇತರೆ ವಿಷಯಗಳು:
ಗೃಹಜ್ಯೋತಿ ಯೋಜನೆಯ ಹೊಸ ನಿಯಮ; ಮನೆ ಬದಲಿಸಿದರು ಚಿಂತಿಸಬೇಕಾಗಿಲ್ಲ..!
ಉಚಿತ ವಿದ್ಯುತ್ ಯೋಜನೆಗೆ ಕೇಂದ್ರದ ಮಾರ್ಗಸೂಚಿ ಬಿಡುಗಡೆ! ಅಪ್ಲೈ ಮಾಡುವುದು ಹೇಗೆ?
RBI ಹೊಸ ಯೋಜನೆ..! ನಿಮ್ಮ ಕುಟುಂಬದ ಸದಸ್ಯರ ಹೆಸರನ್ನು ಇಂದೇ ನೊಂದಾಯಿಸಿ