ಹಲೋ ಸ್ನೇಹಿತರೇ, ರೈತರು ದೇಶದ ದೊಡ್ಡ ಆಸ್ತಿ ರೈತ ಬೆಳೆಯನ್ನು ಬೆಳೆದ್ರೆ ಮಾತ್ರ ನಾವು ದಿನನಿತ್ಯ ಆಹಾರ ಸೇವಿಸಲು ಸಾಧ್ಯ. ಆದರೆ ದೇಶಕ್ಕೆ ಅನ್ನ ನೀಡುವ ರೈತ ತಾನು ಬೆಳೆ ಬೆಳೆಯಲು ಸಾಲವನ್ನು ಮಾಡಬೇಕು. ರೈತನು ಸಹಕಾರ ಸಂಘಗಳಲ್ಲಿ ( ಬ್ಯಾಂಕ್ ) ಬೆಲೆ ಸಾಲ ಪಡೆದು ಸರಿಯಾದ ಸಮಯಕ್ಕೆ ಅಸಲನ್ನು ಪಾವತಿಸಿದರೆ ಬಡ್ಡಿ ಮನ್ನಾ ಆಗುತ್ತದೆ. ಸಾಲದ ಅಸಲು ತೀರಿಸಲು ಕೊನೆ ದಿನಾಂಕ ಘೋಷಣೆಯಾಗಿದೆ, ನಿಗದಿತ ದಿನಾಂಕದೊಳಗೆ ಅಸಲು ತೀರಿಸಿ ಅಸಲಿಗೆ ನೀಡುವ ಬಡ್ಡಿ ತಪ್ಪಿಸಿಕೊಳ್ಳಬಹುದು. ಇದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ಲೇಖನದಲ್ಲಿ ತಿಳಿಯಿರಿ.
Contents
ಯಾವ ಬ್ಯಾಂಕ್‌ಗಳಲ್ಲಿ ಯಾವ ರೀತಿಯ ಸಾಲಕ್ಕೆ ಬಡ್ಡಿ ಮನ್ನಾ ಮಾಡಲಾಗುವುದು?
ಸರ್ಕಾರದ ಆದೇಶದ ಮೇರೆಗೆ ರೈತರು ರಾಜ್ಯದ ಸಹಕಾರಿ ಸಂಘಗಳಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಹಾಗೂ ಲ್ಯಾಂಗ್ಸ ಸಹಕಾರಿ ಸಂಘಗಳು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮತ್ತು ಪ್ರಾಥಮಿಕ ಸಹಕಾರಿ ಬ್ಯಾಂಕ್ ಹಾಗೂ ಗ್ರಾಮಾಭಿವೃದ್ಧಿ ಬ್ಯಾಂಕ್ ನಲ್ಲಿ ಕೃಷಿ ಗೆ ಸಂಬಂಧಿಸಿದ ಸಾಲ ಪಡೆದುಕೊಂಡಿರಬೇಕು. ರೈತರು ಕಳೆದ ವರ್ಷ ಡಿಸೆಂಬರ್ ನಲ್ಲಿ ಪಡೆದ ಧೀರ್ಘವಧಿ ಮತ್ತು ಮಧ್ಯಮಾವಧಿ ಸಾಲವಾಗಿದ್ದಲ್ಲಿ ಇದೆ ಬರುವ ಮಾರ್ಚ್ 31 ರೊಳಗೆ ಸಾಲದ ಅಸಲನ್ನು ಕಟ್ಟಿದರೆ ಮತ್ತು ಸರ್ಕಾರ ಸೂಚಿಸಿದ ನಿರ್ಭಾಂಧನೆಯನ್ನು ಪಾಲಿಸಿದರೆ ನಿಮ್ಮ ಸಾಲದ ಬಡ್ಡಿ ಮೊತ್ತವು ತೀರುತ್ತದೆ..
ಈ ಹಿಂದೆ ಮರುಪಾವತಿ ಅವದಿಯನ್ನು ರಾಜ್ಯ ಸರ್ಕಾರ ವಿಸ್ತರಿಸಿದೆ
ರಾಜ್ಯ ಸರ್ಕಾರವು ಮೇಲೆ ತಿಳಿಸಿದ ಬ್ಯಾಂಕುಗಳಿಂದ ಮಧ್ಯಮಾವಧಿ, ದೀರ್ಘಾವಧಿ ಕೃಷಿ ಹಾಗೂ ಕೃಷಿ ಆಧಾರಿತ ಸಾಲ 2023 ಡಿಸೆಂಬರ್ 31 ರ ವರೆಗೂ ಸುಸ್ತಿಯಾಗಿದ್ದರೆ, ಆ ಸಾಲದ ಕಂತುಗಳ ಅಸಲು ಮೊತ್ತವನ್ನು 2024ರ ಫೆಬ್ರುವರಿ 29 ರೊಳಗೆ ಮರು ಪಾವತಿ ಮಾಡಬೇಕಾಗುತ್ತದೆ ಎಂದು ಆದೇಶ ಹೊರಡಿಸಲಾಗಿದೆ. ಆದರೆ ರೈತರ ಬೇಡಿಕೆಯ ಮೇರೆಗೆ ಆ ಆದೇಶವನ್ನು 1 ತಿಂಗಳುಗಳ ಕಾಲ ವಿಸ್ತರಣೆ ಮಾಡಲಾಗಿತ್ತು.
ಬಡ್ಡಿ ಮನ್ನಾ ಮಾಡುವುದರಿಂದ ರೈತರಿಗಾಗುವ ಪ್ರಯೋಜನ
- ಆರ್ಥಿಕ ಹೊರೆ ಕಡಿಮೆಯಾಗಲಿದೆ: ಬಡ್ಡಿ ಮನ್ನಾ ಮಾಡುವುದರಿಂದ ರೈತರ ಮೇಲಿನ ಸಾಲದ ಹೊರೆ ಕಡಿಮೆ ಮಾಡಿಕೊಳ್ಳು ಅನುಕೂಲವಾಗುತ್ತದೆ ಜೊತೆಗೆ ರೈತರು ಆರ್ಥಿಕ ಸ್ಥಿತಿ ಸುಧಾರಿಸಲು & ಉತ್ಪಾದನಾ ಚಟುವಟಿಕೆಗಳಲ್ಲಿ ಹೂಡಿಕೆ ಮಾಡಲು ಉತ್ತೇಜನವಾಗುತ್ತದೆ.
- ಸಾಲ ಪಡೆಯುವ ಸಾಮರ್ಥ್ಯ: ಬಡ್ಡಿ ಮನ್ನಾ ಯೋಜನೆ ಭವಿಷ್ಯದಲ್ಲಿ ಸುಲಭವಾಗಿ ಸಾಲ ಪಡೆಯಲು ಸಹಾಯವಾಗಲಿದೆ. ರೈತ ಬೆಳೆಯುವ ಬೆಳೆಗೆ / ಕೃಷಿ ಉಪಕರಣಗಳ ಖರೀದಿಗೆ ಬಡ್ಡಿ ಹೆಚ್ಚಾಗುತ್ತದೆ ಎಂಬ ಭಯದಿಂದ ಸಾಲ ಪಡೆಯುವುದು ತಪ್ಪಿ ಹೋಗುತ್ತದೆ.
- ಕೃಷಿ ಉತ್ಪಾದನಾಪ್ರಮಾಣ: ಸಾಲದ ಭಾರವು ಕಡಿಮೆಯಾದರೆ ರೈತರು ಉತ್ಪಾದನಾ ಚಟುವಟಿಕೆಗಳ ಮೇಲೆ ಹೆಚ್ಚು ಗಮನ ಹರಿಸುತ್ತಾರೆ. ಇದರಿಂದ ಕೃಷಿ ಉತ್ಪಾದನೆ ಹೆಚ್ಚಾಗಲಿದೆ. ಉತ್ಪಾದನೆ ಹೆಚ್ಚಾದಂತೆ ರೈತನ ಜೀವನ ಉತ್ತಮ ಸ್ಥಿತಿ ತಲುಪುತ್ತದೆ
- ಜೀವನಮಟ್ಟ ಸುಧಾರಣೆ: ಬಡ್ಡಿ ಮನ್ನಾ ರೈತರ ಆರ್ಥಿಕ ಸ್ಥಿತಿ ಸುಧಾರಿಣೆ ಅವರ ಜೀವನ ಮಟ್ಟದಲ್ಲಿ ಸುಧಾರಣೆ ತರುತ್ತದೆ. ಬಡ್ಡಿ ಕಟ್ಟಿ ಕಟ್ಟಿ ದುಡಿದ ಹಣವೆಲ್ಲ ಕೈಗೆ ಸಿಗದೇ ಇರುವ ಪರಿಸ್ಥಿತಿ ಇರುವುದಿಲ್ಲ.
ಇತರೆ ವಿಷಯಗಳು
1 ರಿಂದ 8ನೇ ತರಗತಿಗೆ RTE ಮೂಲಕ ಪ್ರವೇಶಾತಿಗೆ ಅರ್ಜಿ ಆಹ್ವಾನ.! ಶಿಕ್ಷಣ ಇಲಾಖೆಯ ನೋಟಿಫಿಕೇಶನ್ ಬಿಡುಗಡೆ
ನೇರ ವಿದ್ಯಾರ್ಥಿಗಳ ಖಾತೆಗೆ ಬರಲಿದೆ 1 ಲಕ್ಷ! ಅಪ್ಲೇ ಮಾಡಲು ಇನ್ನು ಕೆಲವೇ ದಿನ ಮಾತ್ರ ಬಾಕಿ